ಮಹಿಳೆ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನಾಭರಣ ದರೋಡೆ

ಮಲಪ್ಪುರಂ: ಮನೆಯಲ್ಲಿ ಏಕಾಂಗಿಯಾಗಿ ವಾಸಿಸುವ ಮಹಿ ಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿದ ತಂಡ ಎರಡು ಪವನ್ ಚಿನ್ನಾಭರಣ ಕಸಿದು ಪರಾರಿಯಾದ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ ಅಂಬಲಪಡಿ ಬೈಪಾಸ್‌ನ ಲ್ಲಿರುವ ನಿವೃತ್ತ ಯೋಧ ದಿ|  ಪಾಲಿಕ ತ್ತೊಟ್ಟಿಲ್ ವಿಜಯ ಕುಮಾರ್ ಎಂಬವರ ಪತ್ನಿ ಕೆ. ಚಂದ್ರಮತಿ (63) ಎಂಬವರ ಮನೆಗೆ ಮೂವರ ತಂಡ ತಲುಪಿ ಈ ಕೃತ್ಯವೆಸಗಿದೆ. ಮೊನ್ನೆ ರಾತ್ರಿ 9 ಗಂಟೆ ವೇಳೆ ಮನೆಯ ಹೊರಗೆ ಶಬ್ದ ಕೇಳಿಬಂದಿದ್ದು, ಇದರಿಂದ ಚಂದ್ರಮತಿ ಬಾಗಿಲು ತೆರೆದು …

ದೈವದಿಂದ ಅನುಗ್ರಹ ಪಡೆದ ಬಾಲಿವುಡ್ ನಟಿ ಮನೀಷಾ ಕೊಯಿರಾಲ

ಕಾಸರಗೋಡು: ಬಾಂಬೆ ಎಂಬ ಸಿನಿಮಾದ ಮೂಲಕ ಕೇರಳೀಯರಿಗೆ ಪರಿಚಿತಳಾದ ಬಾಲಿವುಡ್ ನಟಿ ಮನೀಷಾ ಕೊಯಿರಾಲ ದೈವನೇಮ ಕಾಣಲು ತಲುಪಿದರು. ಉದುಮ ಆರಾಟುಕಡವು ಕಣ್ಣಂಕುಳಂ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಕಳಿಯಾಟ ನೋಡಲು ಈಕೆ ತಲುಪಿದ್ದಾರೆ.  ತಾಯಿ ಸುಷ್ಮಾ ಕೊಯಿರಾಲರ ಜೊತೆ ಇವರು ಕ್ಷೇತ್ರಕ್ಕೆ ತಲುಪಿದ್ದಾರೆ. ರಕ್ತೇಶ್ವರಿ ಹಾಗೂ ವಿಷ್ಣುಮೂರ್ತಿ ದೈವದ ನೇಮದ ಸಂದರ್ಭದಲ್ಲಿ ಅಲ್ಲಿದ್ದು, ದೈವಾನುಗ್ರಹ ಪಡೆದು ನಟಿ ಹಿಂತಿರುಗಿದ್ದಾರೆ. ಬಾಂಬೆ ಸಿನಿಮಾ ಹಾಗೂ ಬಿಆರ್‌ಡಿಸಿಯ 30ನೇ ವಾರ್ಷಿಕಾಚರಣೆಯಲ್ಲಿ ಭಾಗವಹಿಸಲೆಂದು ಮನಿಷಾ ಹಾಗೂ ಕುಟುಂಬ ಬೇಕಲಕ್ಕೆ ತಲುಪಿದ್ದರು. ಬಿಆರ್‌ಡಿಸಿ …

ಎಸ್‌ಐಆರ್ ಕರಡು ಮತದಾರರ ಯಾದಿ ಪ್ರಕಟ: ಜಿಲ್ಲೆಯಲ್ಲಿ ಶೇ. 94.72 ಮಂದಿ ಕರಡು ಮತದಾರ ಪಟ್ಟಿಯಲ್ಲಿ; 56.911 ಮಂದಿ ಹೊರಕ್ಕೆ

ಕಾಸರಗೋಡು: ರಾಜ್ಯದಲ್ಲಿ ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಕರಡು ಮತದಾರ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ವಿದ್ಯುಕ್ತವಾಗಿ ಪ್ರಕಟಿಸಿದ್ದು, ಇದರಲ್ಲಿ ಕಾಸರಗೋಡು  ಜಿಲ್ಲೆಯ ಮತದಾರ ಪಟ್ಟಿಯಿಂದ ೫೬,೯೧೧ ಮಂದಿ ಹೊರಬಿದ್ದಿದ್ದಾರೆ. ಮತದಾರ ಯಾದಿಯಲ್ಲಿ  10,21,345 ಮಂದಿ (ಶೇ. 94.72)  ಉಳಿದುಕೊಂಡಿದ್ದಾರೆ. ಕರಡು ಮತದಾರ ಯಾದಿಯಿಂದ ಹೊರಬಿದ್ದವರಲ್ಲಿ ನಿಧನಹೊಂದಿರುವ 18,386 ಮಂದಿ, ಪತ್ತೆಹಚ್ಚಲು ಸಾಧ್ಯವಾಗದ 13,689 ಮಂದಿ, ಖಾಯಂ ಆಗಿ ಬೇರೆಡೆಗೆ ವಾಸ್ತವ್ಯ ಬದಲಾಯಿಸಿದ 20,459 ಮಂದಿ, ಎರಡು ಕಡೆಗಳ ಮತದಾರ ಯಾದಿಯಲ್ಲಿ ಹೆಸರು ಹೊಂದಿರುವ …

ಟೋಲ್ ಪ್ಲಾಜಾ ವಿಷಯಕ್ಕೆ ಸಂಬಂಧಿಸಿ ಅಪಪ್ರಚಾರ: ಜಿಲ್ಲಾಧಿಕಾರಿ ಸ್ಪಷ್ಟನೆ

ಕಾಸರಗೋಡು: ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಯ ಚೇಂಬರ್‌ನಲ್ಲಿ ಚರ್ಚೆಗೆ ತಲುಪಿದ ಜನಪ್ರತಿನಿಧಿಗಳನ್ನು ಆಕ್ಷೇಪಿಸಿ ರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ಧಿ ಅಸತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಟೋಲ್ ಪ್ಲಾಜಾ ವಿಷಯ ನ್ಯಾಯಾಲಯದಲ್ಲಿ ಪರಿಗಣನೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದು. ಈ ಬಗ್ಗೆ ಔದ್ಯೋಗಿಕವಾದ ಸಭೆ ಈ ತಿಂಗಳ 22ರಂದು ಕಲೆಕ್ಟ್ರೇಟ್‌ನಲ್ಲಿ ನಡೆಸಲಾಗಿಲ್ಲ. ಆದರೆ ಚೇಂಬರ್‌ಗೆ ತಲುಪಿ ಜಿಲ್ಲಾಧಿಕಾರಿಯವರನ್ನು ನೇರವಾಗಿ ಭೇಟಿಯಾದ ಜನಪ್ರತಿನಿಧಿ ಗಳಲ್ಲಿ, ರಾಜಕೀಯ ಪಕ್ಷದವರಲ್ಲಿ ನ್ಯಾಯಾಲ ಯದ ಆದೇಶ ಪ್ರಕಾರ ಕ್ರಮ …

ಉದ್ಯೋಗ ಖಾತರಿ ಯೋಜನೆ ಬುಡಮೇಲುಗೊಳಿಸುವ ಕೇಂದ್ರ ಸರಕಾರದ ನೀತಿ ವಿರುದ್ಧ ಸಿಪಿಎಂ ಪ್ರತಿಭಟನೆ

ಪೈವಳಿಕೆ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸಿ ಯೋಜನೆಯನ್ನೇ ಬುಡಮೇಲುಗೊಳಿ ಸಲಿರುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಡ ಕಾರ್ಮಿಕರಿಗೆ ವರದಾನವಾಗಿದ್ದ ಉದ್ಯೋಗ ಖಾತರಿ ಯೋಜನೆಯ ನಿಬಂಧನೆಗಳನ್ನು ಬದಲಾಯಿಸಿ ಜನರಿಗೆ ಉಪಯೋಗವಿಲ್ಲದಂತೆ ಮಾಡಲು ಕೇಂದ್ರ ಯತ್ನಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಅಬ್ದುಲ್ ರಜಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಚಂದ್ರ ನಾಯ್ಕ್ ಮಾಣಿಪ್ಪಾಡಿ, ವಿನಯ ಕುಮಾರ್, ಭಾರತಿ …

ಜಿಲ್ಲಾ ಶಾಲಾ ಕಲೋತ್ಸವ: ಮಡಲು ಹೆಣೆಯುವ ಸ್ಪರ್ಧೆ 26ರಂದು

ಮೊಗ್ರಾಲ್: ಕಂದಾಯ ಜಿಲ್ಲಾ  ಶಾಲಾ ಕಲೋತ್ಸವದಂಗವಾಗಿ ಇಂದು ಮೊಗ್ರಾಲ್ ಸರಕಾರಿ ವಿಎಚ್‌ಎಸ್‌ಎಸ್‌ನಲ್ಲಿ ಮಾತೃಸಂಗಮ ನಡೆಯಿತು. ಶಾಲೆಯ ಮಕ್ಕಳ ತಾಯಂದಿರು ಭಾಗವಹಿಸಿದ ಮಾತೃಸಂಗಮ ಇಂದು ಬೆಳಿಗ್ಗೆ ಶಾಲಾ ಸಭಾಂಗಣದಲ್ಲಿ ಜರಗಿತು. ಕಲೋತ್ಸವ ನಗರದಲ್ಲಿ ಗ್ರೀನ್ ಪ್ರೊಟೋಕಾಲ್ ಸಮಿತಿ ಆಶ್ರಯದಲ್ಲಿ ಈ ತಿಂಗಳ 26ರಂದು ಬೆಳಿಗ್ಗೆ 10 ಗಂಟೆಗೆ ಮಡಲು ಹೆಣೆಯುವ ಸ್ಪರ್ಧೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಪುಳಿಕುತ್ತಿ ಸ್ಮಶಾನದ ಅಭಿವೃದ್ಧಿ ಮರೀಚಿಕೆ: ಮೃತದೇಹಗಳ ಅಂತ್ಯಕ್ರಿಯೆಗೆ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಪುಳಿಕುತ್ತಿ ರುದ್ರಭೂಮಿ ಅಧಿಕಾರಿಗಳ ಅನಾಸ್ಥೆಯಿಂದ ಉಪಯೋಗಶೂನ್ಯಗೊಳ್ಳುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಇದರ ಅಭಿವೃದ್ಧಿಗೆ ಪಂಚಾಯತ್ 15 ಲಕ್ಷ ರೂ. ಹಾಗೂ ಬ್ಲೋಕ್ ಪಂಚಾಯತ್ 10 ಲಕ್ಷ ರೂ. ಮಂಜೂರು ಮಾಡಿದೆ ಎಂದು ಹೇಳಲಾಗುತ್ತಿದ್ದರೂ ಇದುವರೆಗೂ ಯಾವುದೇ ಕಾಮಗಾರಿ ಆರಂಭದ ಸೂಚನೆ ಲಭಿಸಿಲ್ಲ. ಪ್ರಸ್ತುತ ಈ ರುದ್ರಭೂಮಿಗೆ ತಲುಪಲು ಜನರು ಸಂಕಷ್ಟಪಡುತ್ತಿದ್ದು, ಇಲ್ಲಿ ಮೃತದೇಹವನ್ನು ದಹಿಸಲು ಸೂಕ್ತ ವ್ಯವಸ್ಥೆ ಇಲ್ಲವೆನ್ನಲಾಗಿದೆ. ಬೆಳಕು, ನೀರಿನ ವ್ಯವಸ್ಥೆಯೂ ಇಲ್ಲದೆ ಕಾಡು ಪೊದೆಗಳು ಆವರಿಸಿ ಹಂದಿ ಸಹಿತ ವಿವಿಧ ಪ್ರಾಣಿಗಳ …

ಕೇಂದ್ರ ಸರಕಾರಿ ನೌಕರರಿಂದ ಕ್ರಿಸ್ಮಸ್ ಆಚರಣೆ

ಕಾಸರಗೋಡು: ಕೇಂದ್ರ ಸರಕಾರಿ ನೌಕರರ ಕಾನ್ಫೆಡರೇಶನ್  ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ನೇಶನಲ್ ಫೆಡರೇ ಶನ್ ಆಫ್ ಪೋಸ್ಟಲ್ ಎಂಪ್ಲೋಯೀಸ್ ಕಾಸರಗೋಡು ಡಿವಿಶನ್‌ನ ಸಂಯು ಕ್ತಾಶ್ರಯದಲ್ಲಿ  ಕೋಮುವಾದ ರಾಜಕೀಯ ವಿರುದ್ಧ ಕ್ರಿಸ್ಮಸ್ ಹಾಡಿನೊಂದಿಗೆ  ಕ್ರಿಸ್ಮಸ್ ಆಚರಿಸಲಾಯಿತು.  ಕಾಸರಗೋಡು  ಪ್ರಧಾನ ಅಂಚೆ ಕಚೇರಿ ಮುಂದೆ ನಿನ್ನೆ ಸಂಜೆ ನಡೆದ ಕಾರ್ಯಕ್ರಮವನ್ನು ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್ ರಾಜ್ಯ ಕೋಶಾಧಿಕಾರಿ ಇ. ಪದ್ಮಾವತಿ ಉದ್ಘಾಟಿಸಿದರು. ಕೇಂದ್ರ ನೌಕರರ ಕೌನ್ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಪಿ.ವಿ. ಶರತ್ ಅಧ್ಯಕ್ಷತೆ ವಹಿಸಿದರು. ಸಿ. ರಾಘವನ್, ಕೆ. …

ಜಾಂಬ್ರಿ ಗುಹಾ ಪರಿಸರದಲ್ಲಿ ಬೆಂಕಿ ಆಕಸ್ಮಿಕ

ಬೆಳ್ಳೂರು: ಗಡಿ ಪ್ರದೇಶವಾದ ಬಂಟಾಜೆ ಚೆಂಡೆತ್ತಡ್ಕ ಬಯಲಿನಲ್ಲಿ ನಿನ್ನೆ ಸಂಜೆ ಬೆಂಕಿ ಆಕಸ್ಮಿಕ ಉಂಟಾಗಿದ್ದು, ಒಣಹುಲ್ಲು ಉರಿದು ನಾಶಗೊಂಡಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಪುತ್ತೂರಿನಿಂದ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದ್ದು, ಸ್ಥಳೀಯರು ಸಹಕಾರ ನೀಡಿದರು. ಪ್ರಸಿದ್ಧ ಜಾಂಬ್ರಿ ಗುಹಾ ಪ್ರದೇಶವಿದಾಗಿದ್ದು, ಕರ್ನಾಟಕದ ಬಂಟಾಜೆ ಹಾಗೂ ಕೇರಳದ ಪರಪ್ಪ ರೇಂಜ್‌ಗೆ ಒಳಗೊಂಡ ರಕ್ಷಿ ತಾರಣ್ಯವಾಗಿದೆ. ಮರಗಿಡಗಳಿಗೆ ಬೆಂಕಿ ವ್ಯಾಪಿಸುವ ಮುನ್ನ ನಂದಿಸಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.

ಶ್ರೀ ಕ್ಷೇತ್ರ ಧ.ಗ್ರಾ.ಯೋ. ಒಕ್ಕೂಟಗಳ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ

ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಸರಗೋಡು, ಬದಿಯಡ್ಕ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನೀರ್ಚಾಲು, ಕನ್ನೆಪ್ಪಾಡಿ, ಕಡಂಬಳ, ಮಾನ್ಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನೀರ್ಚಾಲು ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ನಡೆಯಿತು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ …