ದೈವದಿಂದ ಅನುಗ್ರಹ ಪಡೆದ ಬಾಲಿವುಡ್ ನಟಿ ಮನೀಷಾ ಕೊಯಿರಾಲ

ಕಾಸರಗೋಡು: ಬಾಂಬೆ ಎಂಬ ಸಿನಿಮಾದ ಮೂಲಕ ಕೇರಳೀಯರಿಗೆ ಪರಿಚಿತಳಾದ ಬಾಲಿವುಡ್ ನಟಿ ಮನೀಷಾ ಕೊಯಿರಾಲ ದೈವನೇಮ ಕಾಣಲು ತಲುಪಿದರು. ಉದುಮ ಆರಾಟುಕಡವು ಕಣ್ಣಂಕುಳಂ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಕಳಿಯಾಟ ನೋಡಲು ಈಕೆ ತಲುಪಿದ್ದಾರೆ.  ತಾಯಿ ಸುಷ್ಮಾ ಕೊಯಿರಾಲರ ಜೊತೆ ಇವರು ಕ್ಷೇತ್ರಕ್ಕೆ ತಲುಪಿದ್ದಾರೆ. ರಕ್ತೇಶ್ವರಿ ಹಾಗೂ ವಿಷ್ಣುಮೂರ್ತಿ ದೈವದ ನೇಮದ ಸಂದರ್ಭದಲ್ಲಿ ಅಲ್ಲಿದ್ದು, ದೈವಾನುಗ್ರಹ ಪಡೆದು ನಟಿ ಹಿಂತಿರುಗಿದ್ದಾರೆ.

ಬಾಂಬೆ ಸಿನಿಮಾ ಹಾಗೂ ಬಿಆರ್‌ಡಿಸಿಯ 30ನೇ ವಾರ್ಷಿಕಾಚರಣೆಯಲ್ಲಿ ಭಾಗವಹಿಸಲೆಂದು ಮನಿಷಾ ಹಾಗೂ ಕುಟುಂಬ ಬೇಕಲಕ್ಕೆ ತಲುಪಿದ್ದರು. ಬಿಆರ್‌ಡಿಸಿ ಅಧಿಕಾರಿಗಳು ದೈವ ಕೋಲದ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ನಟಿ ನೇಮ ನೋಡಲು ಆಸಕ್ತಿ ವಹಿಸಿದ್ದು, ಅಲ್ಲಿಗೆ ತೆರಳಿದ್ದಾರೆ. ಆಡಳಿತ ಸಮಿತಿ ಅಧ್ಯಕ್ಷ ಕೆ. ಸುಕುಮಾರನ್, ಕಾರ್ಯದರ್ಶಿ ಟಿ.ವಿ. ನಾರಾಯಣನ್ ಎಂಬಿವರ ನೇತೃತ್ವದಲ್ಲಿ ನಟಿ ಹಾಗೂ ಕುಟುಂಬವನ್ನು ಸ್ವಾಗತಿಸಲಾಯಿತು.

You cannot copy contents of this page