ರಾಜಕೀಯ ಕಲಿಕೆ ನಿರಂತರ ಪ್ರಕ್ರಿಯೆ- ಕೆ. ರಂಜಿತ್
ಪೈವಳಿಕೆ : ಬಿಜೆಪಿ ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷ. ಪಕ್ಷದ ಸಿದ್ದಾಂತ, ತತ್ವ ಜೊತೆಗೆ ಚರಿತ್ರೆ ಮತ್ತು ಇತಿಹಾಸ ಹಾಗೂ ಪಕ್ಷದ ಮುಂದಿನ ಯೋಜನೆಗಳನ್ನು ಯುವ ಕಾರ್ಯಕರ್ತರು ಕಲಿತು ಪಕ್ಷದ ಕಾರ್ಯ ಚಟುವಟಿಕೆ ಮಾಡಿದರೆ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಹೇಳಿದರು.ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ಶಿಬಿರ ಸಜಂಕಿಲ ಆವಳ ಮಠ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ಗೈದರು.ಜಿಲ್ಲಾ …