ವಿವಿಧ ಬೇಡಿಕೆ ಮುಂದಿರಿಸಿ ಆಟೋರಿಕ್ಷಾ ಕಾರ್ಮಿಕರಿಂದ ತಾಲೂಕು ಕಚೇರಿ ಮಾರ್ಚ್

ಕಾಸರಗೋಡು: ಆಟೋರಿಕ್ಷಾ ಪ್ರಯಾಣದರ ಹೆಚ್ಚಿಸಬೇಕು, ಪೆಟ್ರೋಲ್ ಉತ್ಪನ್ನಗಳನ್ನು ಸಬ್ಸಿಡಿ ದರದಲ್ಲಿ ಆಟೋ ಕಾರ್ಮಿಕರಿಗೆ ವಿತರಿಸಬೇಕು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಲ್ಲಿ ಸೇರಿಸಲು ಕೇರಳ ಶಿಫಾರಸು ಮಾಡಬೇಕು, ಪೆಟ್ರೋಲಿಯಂ ಉತ್ಪನ್ನಗಳಿಗೆ ರಾಜ್ಯ ಹೇರಿದ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಕಾಸರಗೋಡು ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ತಾಲೂಕು ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. ಯೂನಿಯನ್ ಜಿಲ್ಲಾ ಅಧ್ಯಕ್ಷ ಶಿವರಾಮರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು  ಆಟೋರಿಕ್ಷಾ ಮಜ್ದೂರ್ ಸಂಘ್‌ನ ಜಿಲ್ಲಾ …

ನಿದ್ರಿಸುತ್ತಿದ್ದ 16ರ ಬಾಲಕಿಗೆ ದೌರ್ಜನ್ಯ 25ರ ಹರೆಯದ ಯುವತಿ ವಿರುದ್ಧ ಪೋಕ್ಸೋ ಕೇಸು ದಾಖಲು

ಕಾಸರಗೋಡು: ಮನೆಯಲ್ಲಿ ನಿದ್ರಿಸುತ್ತಿದ್ದ 16ರ ಹರೆಯದ ಬಾಲಕಿಯನ್ನು ದೌರ್ಜನ್ಯಗೈದುದಾಗಿ ನೀಡಿದ ದೂರಿನಂತೆ 25ರ ಹರೆಯದ ಯುವತಿ ವಿರುದ್ಧ  ಮೇಲ್ಪರಂಬ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಯ ದೂರಿನಂತೆ ತಳಿಪರಂಬ  ಪುಳಿಪರಂಬ ಸ್ನೇಹಮೆರ್ಲಿ (25) ಎಂಬಾಕೆ  ವಿರುದ್ಧ ಕೇಸು ದಾಖಲಿಸಲಾಗಿದೆ. ಈಕೆಯ ವಿರುದ್ಧ ತಳಿಪರಂಬ ಪೊಲೀಸ್ ಠಾಣೆಯಲ್ಲೂ 3 ಪೋಕ್ಸೋ ಪ್ರಕರಣಗಳು ದಾಖಲಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಎರಡು ಕೇಸುಗಳು ಸಹೋದರರಾದ ಬಾಲಕ  ಹಾಗೂ ಬಾಲಕಿಯನ್ನು ದೌರ್ಜನ್ಯಗೈದ ಪ್ರಕರಣಗಳಾಗಿವೆ. ಮೂರನೇ ಕೇಸು …

ಕೂಲಿ ಕಾರ್ಮಿಕ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕೂಲಿ ಕಾರ್ಮಿಕನೋರ್ವ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧೂರು ಕೊಲ್ಯದ ದಿವಂಗತರಾದ ಪಂಜಿ-ಚೋಮು ದಂಪತಿಯ ಪುತ್ರ ಕೃಷ್ಣ (45) ಮೃತಪಟ್ಟ ವ್ಯಕ್ತಿ.  ನಿನ್ನೆ ಮಧ್ಯಾಹ್ನ ಬಳಿಕ ಇವರು ನಾಪತ್ತೆಯಾಗಿದ್ದ ರೆನ್ನಲಾಗಿದೆ. ಇದರಿಂದ ಮನೆಯ ವರು ಹುಡುಕಾಟ ಆರಂಭಿಸಿದ್ದರು. ಶೋಧ ವೇಳೆ ಇಂದು ಬೆಳಿಗ್ಗೆ ೬ ಗಂಟೆಗೆ ಮನೆಯ ಹಿತ್ತಿಲಲ್ಲಿರುವ ಉಪಯೋಗಶೂನ್ಯವಾದ ಆವರಣ ವಿಲ್ಲದ ಬಾವಿಯಲ್ಲಿ  ಕೃಷ್ಣರ ಮೃತದೇ ಹ ಪತ್ತೆಯಾಗಿದೆ.   ಮೃತದೇಹವನ್ನು  ಅಗ್ನಿಶಾಮಕದಳ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. …

ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ: ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯಾಗಿ ಜಿಲ್ಲೆಯವರೇ ಆಗಿರುವ ನಿತಿನ್‌ರಾಜ್ ಪಿ. ನೇಮಕ

ಕಾಸರಗೋಡು: ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳನ್ನು ಅತ್ತಿತ್ತ ವರ್ಗಾಯಿಸಲಾಗಿದ್ದು, ಇದರಂತೆ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯನ್ನಾಗಿ ಕಾಸರಗೋಡು ಜಿಲ್ಲೆಯವರೇ ಆಗಿರುವ  ರಾವಣೇಶ್ವರ ನಿವಾಸಿ ನಿತಿನ್‌ರಾಜ್ ಪಿ.ರನ್ನು ನೇಮಿಸಲಾಗಿದೆ. ಇವರು ಈಗ ಕಣ್ಣೂರು ಸಿಟಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅಲ್ಲಿಂದ ಅವರನ್ನು ತಮ್ಮ ಹುಟ್ಟೂರಾದ ಕಾಸರಗೋಡು ಜಿಲ್ಲೆಗೆ ವರ್ಗಾಯಿಸಿ ನೇಮಿಸಲಾಗಿದೆ. ಈಗ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಬಿ.ವಿ. ವಿಜಯ್ ಭರತ್ ರೆಡ್ಡಿಯವರನ್ನು ಇಲ್ಲಿಂದ ವರ್ಗಾಯಿಸಿ ಕಣ್ಣೂರು  ಸಿಟಿ ಪೊಲೀಸ್ ಕಮಿಷನರ್ …

ಚಿಕಿತ್ಸೆಯಲ್ಲಿದ್ದ ವೇಳೆ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರದ ಹೊಣೆ ವಹಿಸಿಕೊಂಡ ಸಿ.ಎಚ್. ಸೆಂಟರ್

ಕುಂಬಳೆ: ಕುಂಬಳೆ  ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ  ಪತ್ತೆಯಾಗಿ ಬಳಿಕ ಪರಿಯಾರಂನ  ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಮೃತಪಟ್ಟ  ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಮೂಲತಃ ಕಾಸರಗೋಡು ಚೌಕಿ ನಿವಾಸಿಯೂ ಕುಂಬಳೆ ಮಾವಿನಕಟ್ಟೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಹಬೀಬ್ ಯಾನೆ ಅಭಿಲಾಷ್ (31)ನ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿರುವುದು. ಇದೇ ವೇಳೆ ಮೃತದೇಹವನ್ನು ಪಡೆದುಕೊಳ್ಳಲು ಯಾರೂ ಸಿದ್ಧರಾ ಗದ ಹಿನ್ನೆಲೆಯಲ್ಲಿ  ಪಯ್ಯನ್ನೂರಿನಲ್ಲಿ ರುವ ಸಿ.ಎಚ್. ಸೆಂಟರ್ ಮೃತದೇಹದ ಅಂತ್ಯಸಂಸ್ಕಾರ ಜವಾಬ್ದಾರಿಯನ್ನು …

ಒಡಹುಟ್ಟಿದ ಇಬ್ಬರು ಮಕ್ಕಳ ಮೃತದೇಹಗಳು ಪಾಳು ಕೆರೆಯಲ್ಲಿ ಪತ್ತೆ

ಮಲಪ್ಪುರಂ: ಪಾಳು ಕೆರೆಯಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಅರಿಕೋಡ್ ಕಾವನ್ನೂರ್ ಇರುವೇಟಿ ಚಾತನ್‌ಪಾರದಲ್ಲಿರುವ ಯಾರೂ ಕೂಡಾ ಉಪಯೋಗಿಸದೇ ಪಾಳುಬಿದ್ದಿದ್ದ ಕೆರೆಯಲ್ಲಿ 3, 4ನೇ ತರಗತಿ ವಿದ್ಯಾರ್ಥಿಗಳ ಮೃತದೇಹಗಳು ಪತ್ತೆಯಾಗಿವೆ. ಗುಡಲ್ಲೂರಿನ ಬಾವ ಎಂಬವರ ಮಕ್ಕಳಾದ ಅಫಿಯ, ಅಫ್ನನ್ ಎಂಬಿವರು ಮೃತಪಟ್ಟವರು. ನಿನ್ನೆ ಸಂಜೆ ಶಾಲೆಯಿಂದ ಹಿಂತಿರುಗಿದ ಬಳಿಕ ಇವರು ಮನೆಯಿಂದ ತೆರಳಿದ್ದರು. ಶಾಲೆಯಿಂದ ಹಿಂತಿರುಗಿದ ಬಳಿಕ ಸಾಮಾನ್ಯವಾಗಿ ಇವರು ಆಟವಾಡಲು ಹೋಗುತ್ತಿದ್ದರು. ಆದರೆ ಸಮಯ ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಮನೆಯವರು ಹಾಗೂ ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ …

ಬಸ್ ಕಂಡಕ್ಟರ್ ನಿಧನ

ನೀರ್ಚಾಲು: ಬೇಳ ಬಂಡ್ರಡ್ಕ ನಿವಾಸಿ ಬಿ.ಆರ್. ಮಾಧವ (72) ಎಂಬವರು ನಿಧನಹೊಂದಿದರು. ಕಾಞಂಗಾಡ್‌ನಲ್ಲಿರುವ ಮಗಳ ಮನೆಯಲ್ಲಿದ್ದ ಇವರಿಗೆ ಹೃದಯಾಘಾ ತವುಂಟಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕುಂಬಳೆ-ಮುಳ್ಳೇರಿಯ ರೂಟ್‌ನಲ್ಲಿ ಸಂಚರಿಸುವ ಗುರುವಾ ಯೂರಪ್ಪನ್ (ಪ್ರಭು ಗಣೇಶ್) ಬಸ್‌ನಲ್ಲಿ ಹಲವು ವರ್ಷಗಳ ಕಾಲ ಇವರು ನಿರ್ವಾಹಕನಾಗಿ ಕೆಲಸ ನಿರ್ವಹಿಸಿದ್ದರು. ಮೃತರು ಪತ್ನಿ ಕಮಲ, ಮಕ್ಕಳಾದ ಭಾರತಿ, ಚಿತ್ರಲೇಖ, ಶಾಂತಿ, ಅಳಿಯಂದಿರಾದ ಸತೀಶ್, ರಮೇಶ್, ಹರ್ಷ, ಸಹೋದರಿ ಬೇಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಬಕಾರಿ ಪ್ರಕರಣ: ಹಲವು ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಬಂಧನ

ಕುಂಬಳೆ: ಅಬಕಾರಿ ಪ್ರಕರಣ ದಲ್ಲಿ  ಆರೋಪಿಯಾಗಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಅತೀ ಸಾಹಸಿಕವಾಗಿ ಸೆರೆಹಿಡಿದಿದ್ದಾರೆ. ಹೊಸಂಗಡಿ ನಿವಾಸಿಯಾದ ಪ್ರಶಾಂತ್ (44) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತನನ್ನು ನಿನ್ನೆ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್‌ರ ನೇತೃತ್ವದಲ್ಲಿ  ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಚಂದ್ರನ್, ಕಿಶೋರ್, ಉದಯನ್ ಎಂಬಿವರು ತೊಕ್ಕೋಟಿನಿಂದ ಬಂಧಿಸಿದ್ದಾರೆ. 2006ರಲ್ಲಿ ದಾಖಲಾದ ಅಬಕಾರಿ ಪ್ರಕರಣದಲ್ಲಿ  ಪ್ರಶಾಂತ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಸೆರೆಗೀಡಾದ ಈತನನ್ನು  ಬಂಧಿಸಿ ನ್ಯಾಯಾಂಗ  ಬಂಧನದಲ್ಲಿರಿ ಸಲಾಗಿತ್ತು. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ …

ಫಿಫಾ ವಿಶ್ವಕಪ್: ಮೊದಲ ದಿನವೇ ಹೈ ಡ್ರಾಮಾ: ಚೊಚ್ಚಲ ಗೆಲುವು ಮೆಕ್ಸಿಕೋಗೆ; ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಜಯ

ಮೆಕ್ಸಿಕೋ ಸಿಟಿ: ವಿಶ್ವದ ಅತೀ ದೊಡ್ಡ ಫುಟ್ಬಾಲ್  ಹಬ್ಬ ಫಿಫಾ ವಿಶ್ವಕಪ್ 2026 ನಿನ್ನೆ ತಡರಾತ್ರಿ ಅದ್ದೂರಿಯಾಗಿ ಆರಂಭಗೊಂಡಿದ್ದು, ಮೊದಲ ದಿನವೇ ಅಭಿಮಾನಿಗಳಿಗೆ  ಭರಪೂರ ಮನರಂಜನೆ ಮತ್ತು ಅಚ್ಚರಿಯ ಘಟನೆಗಳು ಸಾಕ್ಷಿಯಾಗಿವೆ. ಟೂರ್ನಿಯ ಮೊದಲ ದಿನದ ಪಂದ್ಯದಲ್ಲಿ  ಸಾಂಪ್ರದಾಯಿಕ ಶೈಲಿಯ ಆಟವನ್ನು ಬದಿಗಿಟ್ಟು ಆತಿಥೇಯ ತಂಡ ಮೆಕ್ಸಿಕೋ ತನ್ನ ಎದುರಾಳಿ ದಕ್ಷಿಣ ಆಫ್ರಿಕಾ ತಂಡವನ್ನು ಪರಾಭವಗೊಳಿಸಿ  ಗೆಲುವು ಸಾಧಿಸಿದೆ.  ದೇಶದ ಆಟಗಾರರ  ಜೆರ್ಸಿ ನಿಯಮ ಉಲ್ಲಂಘಿಸಿರುವ ಕಾರಣಕ್ಕೆ ದಕ್ಷಿಣ ಆಫ್ರಿಕಾ ತಂಡಕ್ಕೆ  ರೆಡ್ ಕಾರ್ಡ್ ಮೂಲಕ ಎಚ್ಚರಿಕೆಯನ್ನು …

ಕಯ್ಯಾರ ಕಿಂಞಣ್ಣ ರೈ ಜನ್ಮ ದಿನಾಚರಣೆ, ಕಯ್ಯಾರ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ 21ರಂದು

ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಸಹ ಯೋಗದಲ್ಲಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈ ಜನ್ಮದಿನಾಚರಣೆ, ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜೂ.೨೧ರಂದು ಬೆಳಗ್ಗೆ ೯ರಿಂದ ಕಯ್ಯಾರು ಕಾಮಿಲ್ ಕೊಕ್ಕೆಚಾಲು ಶಾಲಾ ವಠಾರದಲ್ಲಿ ನಡೆಯಲಿದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಉದ್ಘಾಟಿಸುವರು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ಮಾಜಿ ಶಾಸಕ ಸೋಮಣ್ಣ ಬೇವಿನಮರದ ಅಧ್ಯಕ್ಷತೆ …