ಕ್ಷೇಮ ಪಿಂಚಣಿ ನಾಳೆಯಿಂದ
ತಿರುವನಂತಪುರ: ಈ ತಿಂಗಳ ಸಾಮಾಜಿಕ ಭದ್ರತೆ, ಕ್ಷೇಮನಿಧಿ ಪಿಂಚಣಿಗಳನ್ನು ನಾಳೆಯಿಂದ ವಿತರಿಸಲಾಗುವುದು. ಇದಕ್ಕಾಗಿ 841 ಕೋಟಿ ರೂ. ಮಂಜೂರು ಮಾಡಿರುವುದಾಗಿ ವಿತ್ತ ಸಚಿವ ಕೆ.ಎನ್. ಬಾಲಗೋಪಾಲನ್ ತಿಳಿಸಿದ್ದಾರೆ. 62 ಲಕ್ಷ ಮಂದಿಗೆ 1600 ರೂ.ನಂತೆ ಲಭಿಸಲಿದೆ. 26.62 ಲಕ್ಷ ಮಂದಿಗೆ ಬ್ಯಾಂಕ್ ಖಾತೆಯ ಮೂಲಕ ಮೊತ್ತ ತಲುಪುವುದು. ಇತರರಿಗೆ ಸಹಕಾರಿ ಬ್ಯಾಂಕ್‌ಗಳ ಮೂಲಕ ಮನೆಗೆ ತಲುಪಿ ಪಿಂಚಣಿ ನೀಡಲಾಗುವುದು. 8.46 ಲಕ್ಷ ಮಂದಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಕೇಂದ್ರದ ಪಾಲು ಲಭಿಸಲು ಬಾಕಿ ಇದೆ. ಇದಕ್ಕೆ ಅಗತ್ಯವಾದ …