ಬಾಲಕನ ಸಾಹಸಿಕ ವಿಮಾನ ಪ್ರಯಾಣ ವಾಯುಯಾನ ವಲಯದಲ್ಲಿ ಆಶ್ಚರ್ಯದ ಕ್ಷಣ

ದೆಹಲಿ: ಸಿನಿಮಾದಲ್ಲೇ ಕಂಡು ಬಾರದಂತಹ ಅತಿ ಸಾಹಸಿಕವಾದ ಹಾಗೂ ಜೀವಾಪಾಯವಿಲ್ಲದೆ ಪಾರಾದ ಘಟನೆ ಬಗ್ಗೆ ದೆಹಲಿಯಿಂದ ವರದಿಯಾಗಿದೆ. 13ರ ಹರೆಯದ ಬಾಲಕನ ಈ ಸಾಹಸದ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ. ಕಾಬೂಲ್‌ನಿಂದ ಹಾರಾಟ ಆರಂಭಿಸಿದ ವಿಮಾನದ ಲ್ಯಾಂಡಿಂಗ್ ಗೇರ್ ಕಂಪಾರ್ಟ್‌ಮೆಂಟ್‌ನಲ್ಲಿ ಸೇರಿಕೊಂಡ ಅಫ್ಘಾನ್ ಬಾಲಕ ಭಾರತಕ್ಕೆ ತಲುಪಿದ್ದಾನೆ. ಅಫ್ಘಾನ್ ಏರ್‌ಲೈನ್ಸ್ ವಿಮಾನದಲ್ಲಿ ಈ ಬಾಲಕ ಎರಡು ಗಂಟೆಗಳ ಕಾಲದ ಸಾಹಸಿಕ ಪ್ರಯಾಣ ನಡೆಸಿದ್ದಾನೆ. ವಿಮಾನದ ಲ್ಯಾಂಡಿಂಗ್ ಕಂಪಾರ್ಟ್‌ಮೆಂಟ್‌ನಲ್ಲಿ ಬಾಲಕ ಅಡಗಿ ಕುಳಿತಿದ್ದನು. 2 ಗಂಟೆ ಆಕಾಶದಲ್ಲಿ ಹಾರಿ ಬಂದು …

ರಾಷ್ಟ್ರೀಯ ಹೆದ್ದಾರಿ ಬದಿ ಗಾಂಜಾ ಗಿಡ ಪತ್ತೆ

ಕುಂಬಳೆ: ಒಂದು ಮೀಟರ್‌ನಷ್ಟು ಎತ್ತರವುಳ್ಳ ಗಾಂಜಾ ಗಿಡ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೆಳೆಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಸಮೀಪದ ಟ್ರಕ್ ಪಾರ್ಕಿಂಗ್ ಏರಿಯಾದಲ್ಲಿ ಮೂರು ಅಡಿ ಎತ್ತರದ ಗಾಂಜಾ ಗಿಡ ಬೆಳೆದು ನಿಂತಿರುವುದು ಕಂಡುಬಂದಿದೆ. ಈ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಅಬಕಾರಿ ಇನ್‌ಸ್ಪೆಕ್ಟರ್ ಕೆ.ವಿ. ಶ್ರಾವಣ್ ಹಾಗೂ ತಂಡ ಗಾಂಜಾ ಗಿಡವನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಈ ಸಂಬಂಧ  ಎನ್‌ಡಿಪಿಎಸ್ ಪ್ರಕರಣವನ್ನು ಅಬಕಾರಿ …

ಮಜಿಬೈಲ್‌ನಲ್ಲಿ ಕುಸಿದು ಬಿದ್ದ ರಸ್ತೆ ದುರಸ್ತಿಗೆ ಇನ್ನೂ ಮುಂದಾಗದ ಅಧಿಕಾರಿ ವರ್ಗ: ವಾಹನ ಸವಾರರಲ್ಲಿ ಹೆಚ್ಚಿದ ಭೀತಿ

ಮಂಜೇಶ್ವರ: ಜೂನ್ ತಿಂಗಳಲ್ಲಿ ಭಾರೀ ಮಳೆಗೆ ರಸ್ತೆ ಕುಸಿದು ವಾಹನ ಗಳ ಸಂಚಾರಕ್ಕೆ ತಡೆ ಉಂಟಾಗುತ್ತಿ ದ್ದರೂ ಇನ್ನೂ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮಕೈಗೊಳ್ಳದಿರುವುದು ವಾಹನ ಸವಾರರಲ್ಲಿ ಭೀತಿ ಹೆZ್ಚಸಿದೆ. ಮೀಂಜ ಪಂಚಾಯತ್ ವ್ಯಾಪ್ತಿಗೊಳ ಪಟ್ಟ ಲೋಕೋಪಯೋಗಿ ಇಲಾ ಖೆಯ ಹೊಸಂಗಡಿ-ಮೀಯಪದವು ರಸ್ತೆಯ ಮಜಿಬೈಲ್ ತಿರುವಿನಲ್ಲಿ ರಸ್ತೆ ಕುಸಿದು ಆತಂಕದ ಸ್ಥಿತಿ ಉಂಟಾಗಿದೆ. ಜೂನ್ ತಿಂಗಳಲ್ಲಿ ಆರಂಭದ ಭಾರೀ ಮಳೆಗೆ ರಸ್ತೆ ಒಂದು ಬದಿ ಕುಸಿದು ಬಿದ್ದಿದ್ದು, ಬಳಿಕ ಕ್ರಮೇಣ ಅಡಿಭಾಗದ ಮಣ್ಣು ಕೊರೆದು ಇದೀಗ ಅರ್ಧರಸ್ತೆ …

ರೋಗ ತಗಲಿ ಚಿಕಿತ್ಸೆಯಲ್ಲಿದ್ದ ಯುವತಿ ನಿಧನ

ಪೆರ್ಲ: ಮಾರಕರೋಗ ತಗಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಮಣಿಯಂಪಾರೆ ಬಳಿಯ ದೇರಡ್ಕ ಸಂಟನಡ್ಕ ನಿವಾಸಿ ಜಯರಾಮ ಪೂಜಾರಿ ಎಂಬವರ ಪತ್ನಿ ಪದ್ಮಾವತಿ (35) ಇಂದು ಬೆಳಿಗ್ಗೆ ನಿಧನ ಹೊಂದಿದರು. ಕಳೆದ ಕೆಲವು ಸಮಯಗಳಿಂದ ಚಿಕಿತ್ಸೆಯಲ್ಲಿದ್ದರು. ಇವರ ಚಿಕಿತ್ಸೆಗಾಗಿ ಸ್ಥಳೀಯರು ಸಹಾಯ ಹಸ್ತ ಚಾಚಿದ್ದರು. ಆದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತಿ, ಮಕ್ಕಳಾದ ರಶ್ಮಿತಾ, ತೀಕ್ಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೊಯಿಲಾಂಡಿ ಲಾಟರಿ ಸ್ಟಾಲ್‌ನಿಂದ ಟಿಕೆಟ್ ಕದ್ದ ಪ್ರಕರಣ: ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು: ಕಲ್ಲಿಕೋಟೆ ಕೊಯಿಲಾಂಡಿ ಬಸ್ ನಿಲ್ದಾಣದಲ್ಲಿ ಕಾರ್ಯವೆಸಗುತ್ತಿರುವ ವಿಕೆ ಸ್ಟಾಲ್ ಎಂಬ ಹೆಸರಿನ ಲಾಟರಿ ಟಿಕೆಟ್ ಮಾರಾಟದಂಗಡಿಯಿಂದ  ಓಣಂ ಬಂಪರ್ ಸೇರಿದಂತೆ ೫೭ ಲಾಟರಿ ಟಿಕೆಟ್ ಕದ್ದ ಪ್ರಕರಣದ ಆರೋಪಿಯಾಗಿರುವ ಕಾಸರಗೋಡು ನಿವಾಸಿಯನ್ನು ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಅಬ್ಬಾಸ್ (56) ಬಂಧಿತ ಆರೋಪಿ.  ಕಳೆದ ಆದಿತ್ಯವಾರ ಈ ಸ್ಟಾಲ್‌ನಲ್ಲಿ ಕಳವು ನಡೆದಿರುವುದಾಗಿ  ಸಿಬ್ಬಂದಿ ಮುಸ್ತಫ ನೀಡಿದ ದೂರಿನಂತೆ ಕೊಯಿಲಾಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟು 28,500 ರೂ. ಮೌಲ್ಯದ ಲಾಟರಿ ಟಿಕೆಟ್ ಕಳವುಗೈಯ್ಯಲಾಗಿದೆಯೆಂದು ದೂರಿನಲ್ಲಿ …

ಜನಸಾಗರವೇ ಮೇಳೈಸಿದ ಶಬರಿಮಲೆ ಸಂರಕ್ಷಣಾ ಸಂಗಮ: ಪಿಣರಾಯಿ ವಿಜಯನ್ ನಾಸ್ತಿಕನಾದ ನಾಟಕಗಾರ- ಅಣ್ಣಾಮಲೈ

ಪಂದಳಂ: ಪಂದಳಂನಲ್ಲಿ ನಿನ್ನೆ ನಡೆದ ಶಬರಿಮಲೆ ಸಂರಕ್ಷಣಾ ಸಂಗಮದಲ್ಲಿ ಜನಸಾಗರವೇ ಹರಿದುಬಂದು ಅದೊಂದು ಮಹಾ ಉತ್ಸವವಾಗಿ ಮಾರ್ಪಟ್ಟಿತು. ದೇಶದ ಮೂಲೆಮೂಲೆಗಳಿಂದಲೂ ಭಕ್ತರು ಇದರಲ್ಲಿ ಪಾಲ್ಗೊಂಡರು. ಸಂಗಮದಂಗವಾಗಿ ಶಬರಿಮಲೆಯ ನಂಬುಗೆ, ಶಬರಿಮಲೆಯ ಅಭಿವೃದ್ಧಿ ಮತ್ತು ಶಬರಿಮಲೆಯ ಸಂರಕ್ಷಣೆ ಎಂಬೀ ಮೂರು   ವಿಷಯಗಳಲ್ಲಾಗಿ  ವಿಚಾರಗೋಷ್ಠಿಗಳನ್ನು ನಡೆಸಲಾಯಿತು. ಶಬರಿಮಲೆಯ ಆಚಾರ ಸಂರಕ್ಷಿಸುವುದೇ ಈ ಸಂಗಮದ ಪ್ರಧಾನ ಉದ್ದೇಶವಾಗಿದೆ. ಸಂಗಮದ ಕಾರ್ಯಕ್ರಮದುದ್ದಕ್ಕೂ ಶಬರಿಮಲೆ ಮತ್ತು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರಘೋಷ ಮುಗಿಲು ಮುಟ್ಟಿ ಅಲ್ಲಿ ನೆರೆದವರನ್ನು ಭಕ್ತಿಸಾಗರದಲ್ಲಿ ತೇಲುವಂತೆ ಮಾಡಿತು. ವಿಚಾರಗೋಷ್ಠಿಯ …

ಕೋಳಿಗೂಡಿಗೆ ನುಗ್ಗಿದ ಹೆಬ್ಬಾವಿನ ಸೆರೆ

ಕಾಸರಗೋಡು:  ಕಬ್ಬಿಣ ನಿರ್ಮಿತವಾದ ಕೋಳಿಗೂಡಿಗೆ ನುಗ್ಗಿದ ಹೆಬ್ಬಾವು ಕೋಳಿ ಮರಿಗಳನ್ನು ನುಂಗಿದ್ದು, ಕೊನೆಗೆ ಅರಣ್ಯಪಾಲಕರು ಸ್ಥಳಕ್ಕೆ ಆಗಮಿಸಿ ಅದನ್ನು ಸೆರೆ ಹಿಡಿದ ಘಟನೆ ನಿನ್ನೆ ನಡೆದಿದೆ. ಪೊಯಿನಾಚಿಗೆ ಸಮೀಪದ ಬಾರ ಅಡ್ಕತ್ತಬೈಲು ಪೂಕುನ್ನದ ಕೆ. ಪ್ರತಾಪನ್ ನಾಯರ್ ಮನೆ ಪಕ್ಕದ ಕೋಳಿಗೂಡಿಗೆ ಮುಂ ಜಾನೆ ವೇಳೆ ಹೆಬ್ಬಾವು ನುಗ್ಗಿದೆ. ಆಗ ಕೋಳಿಗಳು ಅಸಾಧಾರ ಣವಾಗಿ ಕೂಗುತ್ತಿದ್ದುದನ್ನು ಗಮನಿಸಿದ ಮನೆಯವರು ಹೊರಗೆ ಬಂದು ನೋಡಿದಾಗ ಆ ಗೂಡಿನ ಕಬ್ಬಿಣದ ಸರಳುಗಳ ಎಡೆಯಿಂದ ಹೆಬ್ಬಾವೊಂದು ಕೋಳಿ ಗೂಡಿಗೆ ನುಗ್ಗಿ ಕೋಳಿ …

ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜ್‌ನಲ್ಲಿ ಎಂಬಿಬಿಎಸ್ ಪ್ರವೇಶ ಆರಂಭ

ಕಾಸರಗೋಡು: ದೀರ್ಘ ಕಾಲದ ಕಾಯುವಿಕೆ ಬಳಿಕ ಚಟುವಟಿಕೆ ಆರಂಭಿಸುವ ಕಾಸರಗೋಡು ಮೆಡಿಕಲ್ ಕಾಲೇಜ್‌ನಲ್ಲಿ ಕೊನೆಗೂ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜ್‌ನ ಮೊದಲ ಎಂಬಿಬಿಎಸ್ ವಿದ್ಯಾರ್ಥಿ ನಿನ್ನೆ ಪ್ರವೇಶ ಪಡೆದಿದ್ದಾರೆ. ರಾಜಸ್ತಾನ ನಿವಾಸಿ ಗೋವಿಂದರ್ ಸಿಂಗ್ ನಿನ್ನೆ ಪ್ರವೇಶ ಪಡೆದ ವಿದ್ಯಾರ್ಥಿಯಾಗಿದ್ದಾರೆ. ಅವರನ್ನು ಅಧಿಕಾರಿಗಳು ಸಿಹಿ ನೀಡಿ ಸ್ವಾಗತಿಸಿದರು. 2013 ಆಗಸ್ಟ್ 7ರಂದು ಶಿಲಾನ್ಯಾಸ ನಡೆದ ಕಾಲೇಜ್‌ನಲ್ಲಿ ತರಗತಿಗಳಿಗೆ ಅಗತ್ಯವುಳ್ಳ ಮೂಲಭೂತ ಸೌಕರ್ಯಗಳು ಪೂರ್ತಿಗೊಂಡ ಹಿನ್ನೆಲೆಯಲ್ಲಿ ಈ ವರ್ಷವೇ ತರಗತಿ ಆರಂಭಿಸಲು ರಾಷ್ಟ್ರೀಯ ಮೆಡಿಕಲ್ …

ಅಡಿಕೆಗೆ ರೋಗ: ಕೃಷಿಕರ ಸಮಸ್ಯೆ ನೇರವಾಗಿ ತಿಳಿದುಕೊಳ್ಳಲು ಅಧಿಕಾರಿಗಳು, ತಜ್ಞರು ಜಿಲ್ಲೆಗೆ

ಕಾಸರಗೋಡು: ಜಿಲ್ಲೆಯಲ್ಲಿ ಅಡಿಕೆ ಕೃಷಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಕಿಸಾನ್ ಸೇನೆ ಜಿಲ್ಲಾ ಸಮಿತಿ ಸಲ್ಲಿಸಿದ ಮನವಿ ಮೇರೆಗೆ ರಾಜ್ಯದ ಕೃಷಿ ತಜ್ಞರು, ಅಧಿಕಾರಿಗಳು ವಿವಿಧೆಡೆಗೆ ಭೇಟಿ ನೀಡಿ ಪರಿಸ್ಥಿತಿಯ ಕುರಿತು ಅವಲೋಕನ ನಡೆಸಿದರು. ತಿರುವನಂತಪುರ ಕೃಷಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು, ಕಾಸರಗೋಡು ಜಿಲ್ಲಾ ಮುಖ್ಯ ಕೃಷಿ ಅಧಿಕಾರಿ, ಹೆಚ್ಚುವರಿ ಕೃಷಿ ಅಧಿಕಾರಿ, ತಿರುವನಂತಪುರ ವೆಳ್ಳಾಯಿನಿ ಕೃಷಿ ಕಾಲೇಜಿನ ಪ್ರತಿನಿಧಿಗಳು, ಕಾಸರ ಗೋಡು ಸಿಪಿಆರ್‌ಐಯ ವಿಜ್ಞಾನಿಗಳು, ಪಡನ್ನಕ್ಕಾಡ್ ಕೃಷಿ ಕಾಲೇಜಿನ ಪ್ರಾಧ್ಯಾಪಕರು ಮೊದಲಾದವರು …

ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತ: 4090 ಅಧ್ಯಾಪಕರು ಹೊರಕ್ಕೆ

ಕಾಸರಗೋಡು: ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಯಲ್ಲಿ ಗಣನೀಯ ಕುಸಿತವುಂಟಾಗಿದ್ದು, ಇದರ ಪರಿಣಾಮವಾಗಿ ರಾಜ್ಯದ ವಿವಿಧ ಶಾಲೆಗಳಲ್ಲಾಗಿ 4090 ಅಧ್ಯಾಪಕ ಹುದ್ದೆಗಳು ಇಲ್ಲದಾಗಿವೆ. ಮಾತ್ರವಲ್ಲ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಪರಿಗಣಿಸುವ ವಿಷಯದಲ್ಲೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಉಂಟಾಗಿರುವ ಲೋಪ ದೋಷಗಳಲ್ಲಿ ಹಲವು ಅಧ್ಯಾಪಕ ಹುದ್ದೆಗಳು ನಷ್ಟಹೊಂದಲು ಇನ್ನೊಂದು ಪ್ರಧಾನ ಕಾರಣವಾಗಿ ದೆಯೆಂದು ಹೇಳಲಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸಾರ್ವಜನಿಕ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 1.25 ಲಕ್ಷದಷ್ಟು ಕುಸಿತ ಉಂಟಾಗಿದೆ. …