ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ಯುವಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸೋಂಕಾಲು ಶಾಂತಿಗುರಿಯ ಕರುಣಾಕರ ಎಂಬವರ ಪುತ್ರ ಶಶಿಕುಮಾರ್ (19) ಮೃತ ವ್ಯಕ್ತಿ. ಇವರು ಲೈಟ್ ಆಂಡ್ ಸೌಂಡ್ಸ್ ಸಂಸ್ಥೆಯ ನೌಕರನಾಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಇವರು ಕಾಣದ ಹಿನ್ನೆಲೆಯಲ್ಲಿ ನಡೆಸಿದ ಶೋಧ ವೇಳೆ ಮನೆಯ ಹಿಂಭಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ತಂದೆ, ತಾಯಿ ಸುಂದರಿ, ಸಹೋದರರಾದ ಕೌಶಿಕ್, ಸುಶಾಂತ್ ಹಾಗೂ …