ರಿಯಾದ್‌ನ ವಾಸ ಸ್ಥಳದಲ್ಲಿ ಪರಪ್ಪ  ನಿವಾಸಿ ನರ್ಸ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ವೆಳ್ಳರಿಕುಂಡ್ ಪರಪ್ಪ ನಿವಾಸಿಯಾದ ನರ್ಸ್ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಬಿರಿಕುಳಂ ರತೀಶ್‌ರ ಪತ್ನಿ ಚಿಪ್ಪಿ (36) ನದೀಂನ ವಾಸ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ ಮೂರು ವರ್ಷದಿಂದ ನದೀಂನ ಖಾಸಗಿ ಕ್ಲಿನಿಕ್‌ನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಈ ಮೊದಲು ಕಾಞಂಗಾಡ್ ಖಾಸಗಿ ಮೆಡಿಕಲ್ ಸಂಸ್ಥೆಯಲ್ಲೂ ಕೆಲಸ ನಿರ್ವಹಿಸಿದ್ದರು. ಚಿಪ್ಪಿಯ ಸಾವಿನ ಬಗ್ಗೆ ತಿಳಿದು ಸೌತ್ ಆಫ್ರಿಕಾದಲ್ಲಿರುವ ಪತಿ ರತೀಶ್ ಊರಿಗೆ ತಲುಪಿದ್ದಾರೆ. ಮೃತದೇಹವನ್ನು ಊರಿಗೆ …

ಉದ್ಯೋಗಖಾತರಿ ಯೋಜನೆ ಕೂಡಲೇ  ಪುನರಾರಂಭಿಸಬೇಕು- ಬಿಎಂಎಸ್

ಕಾಸರಗೋಡು: ಉದ್ಯೋಗ ಖಾತರಿ ಯೋಜನೆ ವಿರುದ್ಧ ಸುಳ್ಳು ಪ್ರಚಾರ ನಡೆಸಿ ಕಾರ್ಮಿಕರಲ್ಲಿ ತಪ್ಪು ಭಾವನೆ  ಮೂಡಿಸುವ ಕೇರಳ ಸರಕಾರದ ವಿರುದ್ಧ ಜಿಲ್ಲಾ ಉದ್ಯೋಗ ಖಾತರಿ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮಿತಿ ತಾಲೂಕು ಕಚೇರಿ ಮಾರ್ಚ್, ಧರಣಿ ನಡೆಸಿತು. ಉದ್ಯೋಗ ಖಾತರಿ ಯೋಜನೆ ಶೀಘ್ರವೇ ಆರಂಭಿಸಬೇ ಕೆಂದು, ಕೇಂದ್ರ ಸರಕಾರ ನಿಗದಿಪಡಿಸಿದ 125 ಉದ್ಯೋಗ ದಿನಗಳನ್ನು ಖಚಿತಪಡಿಸಬೇಕೆಂದು ಸರಕಾರ ದೊಂದಿಗೆ ಆಗ್ರಹಿಸಿದ್ದಾರೆ. ಉದ್ಯೋಗ ಖಾತರಿ ಮಜ್ದೂರ್ ಸಂಘ್ ಜಿಲ್ಲಾ ಅಧ್ಯಕ್ಷ ಹರೀಶ್ ಕುದ್ರೆಪ್ಪಾಡಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ …

ಕೊಂಡೆವೂರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಕೃಷ್ಣ ವೇಷ ಸ್ಪರ್ಧೆ

ಉಪ್ಪಳ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆದ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಮಕ್ಕಳು ಕೃಷ್ಣನ ವಿವಿಧ ವೇಷ ದsರಿಸಿ ಗಮನ ಸೆಳೆದರು. ಶಾಲೆಯ ವಿದ್ಯಾರ್ಥಿಗಳಿಗೆ ಮುದ್ದು ಕೃಷ್ಣ, ಬಾಲ ಕೃಷ್ಣ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಚಿವ ಅಬ್ದುಲ್ ಗಫೂರ್ ಸೆ. 8ರಂದು ಜಿಲ್ಲೆಯಲ್ಲಿ

ಕಾಸರಗೋಡು: ಸಾಮಾಜಿಕ ನ್ಯಾಯ-ಮೀನುಗಾರಿಕಾ ಖಾತೆ ಸಚಿವ ವಿ.ಇ. ಅಬ್ದುಲ್ ಗಫೂರ್ ಸೆ.8ರಂದು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಬೆಳಿಗ್ಗೆ 1೦ ಗಂಟೆಗೆ ಹಾರ್ಬರ್ ಇಂಜಿನಿಯರಿಂಗ್ ಎಕ್ಸಿಕ್ಯೂಟೀವ್ ಇಂಜಿನಿಯರ್ ಕಚೇರಿಯಲ್ಲಿ ನಡೆಯುವ ಅವಲೋಕನಾ ಸಭೆಯಲ್ಲಿ ಸಚಿವರು ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಕಾಸರಗೋಡು ಕಸಬಾ ಕಡಪ್ಪುರದ ಫಿಶರೀಸ್ ಎಕ್ಸ್‌ಟೆನ್ಶನಲ್ ಸಭಾಂಗಣ ದಲ್ಲಿ ‘ಮಿಗವ್’ ಯೋಜನೆಯ ಅಂಗವಾಗಿ ನಡೆಯುವ  ಸಮಾರಂಭದಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾದ ಮೀನುಗಾರರ ಮಕ್ಕಳಿಗೆ ಜಿಲ್ಲೆಯ ಶಿಕ್ಷಣ ಪುರಸ್ಕಾರ ವಿತರಣೆ ನೆರವೇರಿಸುವರು. ಸಂಜೆ 3 ಗಂಟೆಗೆ …

ಜನರಲ್ ಆಸ್ಪತ್ರೆಯ ಫ್ರೀಜರ್ ದುರಸ್ತಿ ನಡೆಸಿ  ಮಾದರಿಯಾದ ಬಿಜೆಪಿ ಕೌನ್ಸಿಲರ್‌ಗಳು

ಕಾಸರಗೋಡು: ಹಲವು ದಿನಗಳಿಂದ ಕೆಟ್ಟು ಹೋಗಿದ್ದ ಕಾಸರಗೋಡು ಜನರಲ್ ಆಸ್ಪತ್ರೆಯ ಫ್ರೀಜರ್‌ನ್ನು ಬಿಜೆಪಿ ನಗರಸಭಾ ಕೌನ್ಸಿಲರ್‌ಗಳಾದ ದಿವ್ಯ ಸಂದೀಪ್ ಹಾಗೂ ರಾಜೇಶ್ ಅಮೈ ದುರಸ್ತಿ ನಡೆಸಿ ಮಾದರಿಯಾಗಿದ್ದಾರೆ.  ಫ್ರೀಜರ್ ಕೆಟ್ಟುಹೋಗಿರುವುದರ ಪರಿಣಾಮ ರೋಗಿಗಳು ಭಾರೀ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿತ್ತು.  ಫ್ರೀಜರ್ ದುರಸ್ತಿಗೊ ಳಿಸಲು  ಅಧಿಕಾರಿಗಳ ಭಾಗದಿಂದ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರಾದ ಮೆಕ್ಯಾನಿಕ್‌ಗಳನ್ನು ಆಸ್ಪತ್ರೆಗೆ ಕರೆತಂದು ಫ್ರೀಜರ್ ದುರಸ್ತಿಗೊಳಿಸ ಲಾಯಿತು. ಜನರ ಸಮಸ್ಯೆಯನ್ನು ಮನಗಂಡು ಅದರ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಂಡ ಬಿಜೆಪಿ …

ಕೇಳುಗುಡ್ಡೆಯ ಹರೀಂದ್ರನಾಥ್ ನಿಧನ

ಕಾಸರಗೋಡು: ಕೇಳುಗುಡ್ಡೆ ನಿವಾಸಿ ಎ.ವಿ. ಹರೀಂದ್ರನಾಥ್ (66) ನಿನ್ನೆ ನಿಧನಹೊಂದಿದರು. ದಿವಂಗತರಾದ ಉಪೇಂದ್ರನಾಥ್-ಗೋದಾವರಿ ದಂಪತಿಯ ಪುತ್ರನಾದ ಮೃತರು ಪತ್ನಿ ವಸಂತಿ, ಮಕ್ಕಳಾದ ಕೃಷ್ಣಪ್ರಸಾದ್, ಶಿವಪ್ರಸಾದ್, ಚೈತ್ರ, ಅಳಿಯ ಶಿವಪ್ರಸಾದ್, ಸೊಸೆಯಂದಿರಾದ ಪೂರ್ಣಿಮ, ನವ್ಯಶ್ರೀ, ಸಹೋದರ-ಸಹೋದರಿಯರಾದ ರಾಜೇಂದ್ರ ಕುಮಾರ್, ಜಗದೀಶ್, ಸರೋಜ, ವಿಜಯಲಕ್ಷ್ಮಿ, ಆಶಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಸಬಿತ ಈ ಹಿಂದೆ ನಿಧನರಾಗಿದ್ದಾರೆ.

ಕೈಕಂಬ- ಬಾಯಾರು ರಸ್ತೆಯಲ್ಲಿ ಅವ್ಯವಸ್ಥೆಯ ಹಲವು ಹಂಪ್‌ಗಳು ಸಂಚಾರ ಸಮಸ್ಯೆ ಬಗ್ಗೆ ಸ್ಥಳೀಯರಿಂದ ಪ್ರತಿಭಟನೆಗೆ ಸಿದ್ಧತೆ

ಉಪ್ಪಳ: ಲೋಕೋಪಯೋಗಿ ಇಲಾಖೆಯ ಕೈಕಂಬ-ಬಾಯಾರು ರಸ್ತೆಯಲ್ಲಿ ಹಲವಾರು ಹಂಪ್‌ಗಳಿದ್ದು, ಇದನ್ನು ಅವ್ಯವಸ್ಥೆ ರೀತಿಯಲ್ಲಿ ನಿರ್ಮಿಸಿದ ಕಾರಣ ಬಸ್ ಸಹಿತ ವಾಹನಗಳ ಬಿಡಿಭಾಗಗಳು ಹಾನಿಗೀಡಾಗುತ್ತಿರುವುದಾಗಿ ಮಾಲಕರು, ಸವಾರರು ದೂರಿದ್ದಾರೆ. ಅಲ್ಲದೆ ಅಪಘಾತಕ್ಕೂ ಕಾರಣವಾಗುತ್ತಿದೆ. ಇದನ್ನು ತೆರವುಗೊಳಿಸಲು ಒತ್ತಾಯಿಸಿ ಜನಪರ ಒಕ್ಕೂಟ ಬಾಯಾರು ಇದರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಮನವಿ ನೀಡಲು ಸಿದ್ದತೆ ನಡೆಸುತ್ತಿದ್ದಾರೆ. ಈ ಹಿಂದೆ ಬಸ್ ಯೂನಿಯನ್ ವತಿಯಿಂದ ಶಾಸಕರಿಗೆ, ಲೋಕೋಪಯೋಗಿ ಇಲಾಖೆಗೆ ಮನವಿ ನೀಡಿದ್ದರು. ಆದರೆ ಇದುವರೆಗೂ ಹಂಪ್ ತೆರವುಗೊಳಿಸಲು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಬಸ್ …

ಪತ್ನಿಯ ಸಹೋದರನನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿ ಹಲವು ವರ್ಷಗಳ ಬಳಿಕ ಬಂಧನ

ಕಾಸರಗೋಡು: 2010ರಲ್ಲಿ ಪರಶ್ಶಿನಿಕಡವು ಮಾಂಕಡವು ಎಂಬಲ್ಲಿ ಜಲೀಲ್ ಎಂಬವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ  ತಲೆಮರೆಸಿಕೊಂಡ ಆರೋಪಿ ಸೆರೆಗೀಡಾಗಿದ್ದಾನೆ. ವಾಳಯಿಲ್ ಮುಹಮ್ಮದ್ ಅಲಿ (55) ಎಂಬಾತನನ್ನು ಕಣ್ಣೂರು ಸಿಟಿ ಪೊಲೀಸರ ಪ್ರತ್ಯೇಕ ತನಿಖಾ ತಂಡ ಉಪ್ಪಳದಿಂದ ಸೆರೆಹಿಡಿದಿದೆ. 2010 ಸೆಪ್ಟಂಬರ್ 17ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಪರಶ್ಶಿನಿಕಡವು ಮಾಂಕಡವಿನಲ್ಲಿ ಮೊಯ್ದು ಎಂಬವರ ಮಕ್ಕಳಾದ ಜಲಾಲ್ ಹಾಗೂ ಶಂಸೀರ್ ಎಂಬಿವರನ್ನು ಸಹೋದರಿಯ ಪತಿಯಾದ  ಮುಹಮ್ಮದ್ ಅಲಿ ಆಸ್ತಿ ತರ್ಕದ ವಿವಾದದ ಹಿನ್ನೆಲೆಯಲ್ಲಿ ಕೊಲೆಗೈಯ್ಯಬೇಕೆಂಬ ಉದ್ದೇಶದೊಂದಿಗೆ ಇರಿದು  ಗಾಯಗೊಳಿಸಿದ್ದನು. ಇರಿತದಿಂದ …

ರೈಲಿನಲ್ಲಿ ಕಾಲೇಜು ವಿದ್ಯಾರ್ಥಿಯ ಲ್ಯಾಪ್‌ಟಾಪ್ ಕಳವು: ಆರೋಪಿ ಸೆರೆ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯ ಲ್ಯಾಪ್‌ಟಾಪ್ ಹಾಗೂ ಇತರ ಸಾಮಗ್ರಿಗಳು ಒಳಗೊಂಡ ಬ್ಯಾಗ್‌ಗಳನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ಸನಿಲ್ ಕುಮಾರ್ ಸಿ.ಎಸ್.ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ಕಾವುಪುರ ಕುನಿಯೇರಿ ಹೌಸ್‌ನ ಮೊಹಮ್ಮದ್ ಜಾಬೀರ್ (38) ಬಂಧಿತ ಆರೋಪಿ. ಮಂಗಳೂರು ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿ ಪಟ್ಟಾಂಬಿ ಚೇಂಬ್ರಾತೆಕ್ಕೆ ಪುರಕ್ಕಲ್ ನಿವಾಸಿ ವಿಷ್ಣುದತ್ ಟಿ.ಪಿ. ಎಂಬವರು ಆಗಸ್ಟ್ 22ರಂದು ಪರಶುರಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಅವರ ಲ್ಯಾಪ್‌ಟಾಪ್ ಒಳಗೊಂಡಿದ್ದ ಎರಡು …

ನಕಲಿ ಚಿನ್ನಾಭರಣ ಅಡವಿರಿಸಿ ಖಾಸಗಿ ಸಂಸ್ಥೆಯಿಂದ 11 ಲಕ್ಷ ರೂ. ಸಾಲ ಪಡೆದು ವಂಚನೆ

ಕಾಸರಗೋಡು: ಒಳಗೆ ಅರಗು ಹಾಗೂ ಹೊರಗೆ ಚಿನ್ನ ಲೇಪಿಸಿ ನಿರ್ಮಿಸಿದ ಚಿನ್ನಾಭರಣಗಳನ್ನು ಅಡವಿರಿಸಿ 11,44,000 ರೂ. ಸಾಲ ತೆಗೆದು ವಂಚಿಸಿರುವುದಾಗಿ ದೂರಲಾಗಿದೆ. ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಕಾಸರಗೋಡು ಬ್ರಾಂಚ್ ಮೆನೇಜರ್ ಯು.ಪಿ. ಕಿರಣ್ ಕುಮಾರ್ ನೀಡಿದ ದೂರಿನಂತೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೊಯಿನಾಚಿ ಚೆರುಕರ ನಿವಾಸಿ ಅಬ್ದುಲ್ ಮಜೀದ್ (೫೨)ನ ವಿರುದ್ಧ ಕೇಸು ದಾಖಲಿಸಲಾಗಿದೆ. 2026 ಫೆಬ್ರವರಿ 25ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. 108.407 ಗ್ರಾಂ ತೂಕದ ಎರಡು ಬಳೆಗಳು, ಒಂದು …