ಡಾ. ಕೆ. ಗಣಪತಿ ಭಟ್‌ರಿಗೆ ಕ.ಸಾ.ಪ.ದಿಂದ ಗೌರವಾರ್ಪಣೆ
ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಪರಿಷತ್‌ನ ನಡಿಗೆ ಹಿರಿಯ ಸಾಧಕರ ಕಡೆಗೆ ಎಂಬ ಕಾರ್ಯಕ್ರಮದಂಗವಾಗಿ ಪ್ರಸಿದ್ಧ ದಂತವೈದ್ಯ ಡಾ. ಕುಳಮರ್ವ ಗಣಪತಿ ಭಟ್‌ರನ್ನು ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಕ.ಸಾ.ಪ. ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ. ಕೆ. ಗಣಪತಿ ಭಟ್- ದೇವಕಿ ಭಟ್ ದಂಪತಿಯನ್ನು ಗೌರವಿಸಿದರು. ಈ ವೇಳೆ ವೈ.ಕೆ. ಗೋವಿಂದ ಭಟ್ ಅಭಿನಂದನಾ ಭಾಷಣ ಮಾಡಿದರು. ‘ಬಿಚ್ಚಿಟ್ಟ ನನ್ನ ಬದುಕು’ ಕೃತಿಯ ಮೂಲಕ ಓರ್ವ ಉತ್ತಮ ಬರಹಗಾರ …