ಉಮಾನಾಥ ಪೂಜಾರಿ ನಿಧನ 

 ಕುಡಾಲುಮೇರ್ಕಳ: ಮುದೆಲ್ತಡ್ಕ ನಿವಾಸಿ ಉಮಾನಾಥ ಪೂಜಾರಿ (77) ಕರ್ನಾಟಕ ಕೊಲ್ಯದ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಮಂಡೆಕಾಪು ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದು, ಸಿಪಿಎಂ ಮಂಡೆಕಾಪು ಬ್ರಾಂಚ್ ಸಮಿತಿ ಸದಸ್ಯನಾಗಿದ್ದರು. ಮೃತರು ಪತ್ನಿ ನಾಗಮ್ಮ, ಮಕ್ಕಳಾದ ಶ್ವೇತ, ಸ್ಮಿತ, ಗಣೇಶ್ ಪ್ರಸಾದ್, ಸಹೋದರ- ಸಹೋದರಿಯರು, ಅಳಿಯ, ಸೊಸೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸುಗುಣ ತಂತ್ರಿ ನಿಧನ

ಬದಿಯಡ್ಕ: ದಿ| ದೇಲಂಪಾಡಿ  ಬಾಲಕೃಷ್ಣ ತಂತ್ರಿಯವರ ಪತ್ನಿ ಸುಗುಣ ತಂತ್ರಿ (75) ನಿಧನ ಹೊಂದಿದರು. ವಯೋಸಹಜ ಅಸೌಖ್ಯದಿಂದಿದ್ದ ದ.ಕ. ಜಿಲ್ಲೆಯ ರಾಮಕುಂಜದ ಇರ್ಕುಮಠದಲ್ಲಿರುವ ತವರು ಮನೆಯಲ್ಲಿ ನಿಧನ ಸಂಭವಿಸಿದೆ. ಇವರಿಗೆ ಮಕ್ಕಳಿಲ್ಲ. ಧಾರ್ಮಿಕ, ಸಾಂಸ್ಕೃತಿಕ, ಸಂಗೀತಾಸಕ್ತರಾಗಿದ್ದ ಇವರು ಅನೇಕ ದೇವಸ್ಥಾನಗಳಲ್ಲಿ ಧಾರ್ಮಿಕ ಪ್ರವಚನ, ಸಂಗೀತ ಕಛೇರಿ ನೀಡಿದ್ದರು.

13ರ ಹರೆಯದ ಬಾಲಕಿ ಗರ್ಭಿಣಿ: ತಂದೆ, ಸಂಬಂಧಿಕನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ತಂದೆ ಹಾಗೂ ಮಾವನ ಮಗನ ಕಿರುಕುಳದಿಂದ 13ರ ಹರೆಯದ ಬಾಲಕಿ ಗರ್ಭಿಣಿಯಾದ ಘಟನೆ ನಡೆದಿದೆ. ಕಾಸರಗೋಡು ಪೊಲೀಸ್ ಸಬ್ ಡಿವಿಶನ್ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆಂದು ದೂರಲಾಗಿದೆ.  ಬಾಲಕಿಯನ್ನು ವಿಚಾರಿಸಿದಾಗ ತಂದೆ ಹಾಗೂ ಮಾವನ ಮಗ ಸೇರಿ ಕಿರುಕುಳ ನೀಡಿರು ವುದು  ಬೆಳಕಿಗೆ ಬಂದಿದೆ. ಇದರಿಂದ ತಂದೆ ಹಾಗೂ ಮಾವನ ಮಗನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.

ಬ್ರಹ್ಮಾಂಡದಲ್ಲಿ ಹೊಸ ಕಣ್ಣು: ಜಿಎಸ್‌ಎಲ್‌ವಿ-ಎಫ್-17 ಉಪಗ್ರಹ ಯಶಸ್ವಿ ಕಕ್ಷೆಗೆ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ದಿಂದ  ಜಿಎಸ್‌ಎಲ್‌ವಿ-ಎಫ್-17 ಆಕಾಶ ನೌಕೆಯು ದೇಶದ ಅತ್ಯಂತ ಭಾರವಾದ ಭೂ ಪರಿವೀಕ್ಷಣಾ ಉಪಗ್ರಹವಾದ ಇಒಎಸ್-05 ಉಪಗ್ರಹವನ್ನು ಪ್ರತಿಕೂಲ ಹವಾಮಾನವನ್ನು ಭೇದಿಸಿ ಇಂದು ಮುಂಜಾನೆ ಜಿಯೋ ಸಿಮ್ ಕ್ರೋನಸ್ ಕಕ್ಷೆಗೆ ಯಶಸ್ವಿಯಾಗಿ ತಲುಪಿಸಿದೆ. ಶ್ರೀಹರಿಕೋಟಾದಲ್ಲಿ ನಡೆದ 107ನೇ ಉಡಾವಣೆ ಇದಾಗಿದ್ದು ಜಿಎಸ್‌ಎಲ್‌ವಿ ನೌಕೆಯ 19ನೇ ಸಾಹಸವೂ  ಇದಾಗಿದೆ. ಈ ಯಶಸ್ವಿಯೊಂದಿಗೆ ಬಾಹ್ಯಾಕಾಶ ರಂಗದಲ್ಲಿ ಭಾರತದ ಸಾಮರ್ಥ್ಯವನ್ನು ಉನ್ನತ …

ಶ್ರೀಕೃಷ್ಣ ಜಯಂತಿ ನಾಡಿನಾದ್ಯಂತ  ಆಚರಣೆ : ಬೃಹತ್ ಶೋಭಾಯಾತ್ರೆ ಸಹಿತ ವಿವಿಧ ಕಾರ್ಯಕ್ರಮ

ಕಾಸರಗೋಡು:  ನಾಡಿನಾ ದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಯನ್ನು ವಿವಿಧ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಗುತ್ತಿದೆ. ಇದರಂಗವಾಗಿ ಕ್ಷೇತ್ರಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳು, ಬಾಲ ಗೋಕುಲಗಳ ನೇತೃತ್ವದಲ್ಲಿ ಕೃಷ್ಣವೇಷ ಸಹಿತ ವಿವಿಧ ಸ್ಪರ್ಧಾ ಕಾರ್ಯ ಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಧಾರ್ಮಿಕ ಸಭೆ, ಬಾಲಗೋ ಕುಲಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿರು ವುದು. ಬದಿಯಡ್ಕ ಸಹಿತ ಕೆಲ ವೆಡೆಗಳಲ್ಲಿ ಇಂದು ಬೆಳಿಗ್ಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಇದರಲ್ಲಿ ಹಲವಾರು ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ …

ವ್ಯಾಪಾರಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಲೆಗೈಯ್ಯಲೆತ್ನ: 16 ಪ್ರಕರಣಗಳಲ್ಲಿ ಆರೋಪಿಯಾದ ಇನ್ನೋರ್ವ ಯುವಕ ಬಂಧನ

 ಉಪ್ಪಳ: ಮೀಯಪದವು  ಬಳಿಯ ಬಟ್ಯಪದವಿನಲ್ಲಿ ವ್ಯಾಪಾರಿಯನ್ನು ಹಾಡಹಗಲೇ ಅಂಗಡಿಗೆ ನುಗ್ಗಿ ಗುಂಡಿಕ್ಕಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಇನೋರ್ವ ಆರೋಪಿ ಸೆರೆಗೀಡಾಗಿ ದ್ದಾನೆ. ಮೀಯಪದವು ನಿವಾಸಿಯಾದ ರಹೀಂ (32) ಎಂಬಾತನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್‌ರಾಜ್, ಎಎಸ್ಪಿ ಅಶೋಕ್ ಅಚ್ಯುತ್ ಎಂಬಿವರ ಮೇಲ್ನೋಟದಲ್ಲಿ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ ಹಾಗೂ ತಂಡ ಸೆರೆಹಿಡಿದಿದೆ. ರಹೀಂ ವಿರುದ್ಧ ಕೇರಳ, ಕರ್ನಾಟಕ ರಾಜ್ಯಗಳಲ್ಲಾಗಿ 16 ಪ್ರಕರಣಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ವ್ಯಾಪಾರಿಗೆ ಗುಂಡಿಕ್ಕಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಕುಳೂರು ಚಿಗುರುಪಾದೆ …

ಧಾರ್ಮಿಕ ಮುಂದಾಳು ನಿಧನ

ಮುಳ್ಳೇರಿಯ: ಕೃಷಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಆದೂರು ಹೊಸಮನೆ ಸಂಜೀವ ಆಳ್ವ (80) ನಿಧನ ಹೊಂದಿ ದರು. ಶ್ರೀ ಪಂಚಲಿಂಗೇಶ್ವರ ಭಜನಾ ಸಮಿತಿಯಲ್ಲಿ ಸಕ್ರಿಯರಾಗಿದ್ದ ಇವರು ಆದೂರು ಬಂಟರ ಸಂಘದ ಧನು ಪೂಜಾ ಸಮಿತಿಯ  ನೇತೃತ್ವ ವಹಿಸಿ ದ್ದರು.   ಕಾಂಗ್ರೆಸ್‌ನ ಹಿರಿಯ ಕಾರ್ಯ ಕರ್ತನಾಗಿದ್ದರು. ಮೃತರು ಪತ್ನಿ ವಸಂತಿ ಆಳ್ವ, ಮಕ್ಕಳಾದ ಕವಿತ, ಸರಿತ, ನಮಿತ, ಅಳಿಯಂದಿರಾದ ನವೀನ್ ರೈ ಪೆರಡಾಲ, ಅನೂಪ್ ಶೆಟ್ಟಿ ಪಂಜ, ಹರೀಶ್ ರೈ ಪೆರುವತ್ತೋಡಿ, ಸಹೋದರ ಜನಾರ್ದನ ಆಳ್ವ, ಸಹೋದರಿಯರಾದ …

ಕೆಲಸದ ಭರವಸೆ ನೀಡಿ ಯುವತಿಯನ್ನು ಕರೆತಂದು ಲೈಂಗಿಕ ಕಿರುಕುಳ: ಓರ್ವ ಸೆರೆ

ಕಾಸರಗೋಡು: ಮನೆ ಕೆಲಸ ನೀಡುವ ಭರವಸೆಯೊಡ್ಡಿ ಕರ್ನಾಟಕ ನಿವಾಸಿಯಾಗಿರುವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಅಂಬಲತರ ಸಮೀಪದ ಇರಿಯಾ ನಿವಾಸಿ ಪಾರಮ್ಮಲ್ ಬಶೀರ್ (56) ಬಂಧಿತ ಆರೋಪಿ. ರಾಜಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎ ಸಂತೋಷ್ ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಅಂಬಲತರದಿಂದ ಬಂಧಿಸಿದೆ. ಈ ಪ್ರಕರಣದ ಇನ್ನೋರ್ವ ಆರೋಪಿ ಪಳ್ಳಿಕೆರೆ ನಿವಾಸಿಗಾಗಿ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಕರ್ನಾಟಕ ನಿವಾಸಿಯಾಗಿರುವ ಯುವತಿ ಯೋರ್ವೆಗೆ ಮನೆ ಕೆಲಸ ಕೊಡಿಸುವುದಾಗಿ …

ಅಂಗನವಾಡಿ ಧ್ವಜಸ್ತಂಭದ ಹಗ್ಗಕ್ಕೆ ಕುತ್ತಿಗೆ ಸಿಲುಕಿ ಬಾಲಕ ಸಾವು

ಕಾಸರಗೋಡು: ಅಂಗನವಾಡಿ ಎದುರುಗಡೆ ಸ್ಥಾಪಿಸಲಾಗಿದ್ದ ಧ್ವಜಸ್ತಂ ಭದ ಹಗ್ಗದಲ್ಲಿ  ಕುತ್ತಿಗೆ ಸಿಲುಕಿ ಆರನೆ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ ಸ್ಥಿತಿ ಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಹೊಸದುರ್ಗಕ್ಕೆ ಸಮೀಪದ ಕಾಂಞ್ಞರ ಪೊಯಿಲ್ ಸರಕಾರಿ ಹೈಸ್ಕೂಲಿನ ಆರನೇ ತರಗತಿಯ ವಿದ್ಯಾರ್ಥಿ ಅನೈಕ್ (11) ಸಾವನ್ನಪ್ಪಿದ ಬಾಲಕ. ಮಡಿಕೈಗೆ ಸಮೀಪದ ನಾನಂದಕುಳಿಯ ಅಂಗನವಾಡಿಯ ಅಂಗಳದಲ್ಲಿ ಸ್ಥಾಪಿಸಿದ್ದ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಪ್ಲಾಸ್ಟಿಕ್ ಹಗ್ಗ ಕುತ್ತಿಗೆಗೆ ಸಿಲುಕಿ ಅನೈಕ್ ನಿನ್ನೆ ಸಂಜೆ ಸುಮಾರು ೫ ಗಂಟೆಯ ವೇಳೆಗೆ ಪತ್ತೆಯಾಗಿದ್ದಾನೆ. ಆ ವೇಳೆ ಶಾಲೆಯ ಮಕ್ಕಳನ್ನು …

ಅಪಾಯ ಕೈಬೀಸಿ ಕರೆಯುತ್ತಿರುವ ಕಾಲುದಾರಿಯಲ್ಲಿ ಸಂಚಾರಭೀತಿ: ಮಲ್ಲಾವರ ಪರಿಸರ ಪ್ರದೇಶದವರಿಗೆ ಸಂಕಷ್ಟ

ಮುಳ್ಳೇರಿಯ: ಜೀವ ಕೈಯಲ್ಲಿ ಹಿಡಿದು ಸಂಚರಿಸುವುದು  ಎಂಬೊಂದು ಆಡು ಮಾತಿದೆ.  ಈ ಮಾತು ಅಕ್ಷರಶಃ ನಿಜ ಅಂತ ಮಲ್ಲಾವರ ಕುಂಡಲ ಭಾಗದ ಜನರ ಸಂಚಾರ ಹಾದಿಯನ್ನು ನೋಡಿದರೆ ಹೇಳಬಹುದಾಗಿದೆ. ಈ ಪ್ರದೇಶದ ಜನರು ವಿವಿಧ ಅಗತ್ಯಗಳಿಗೆ ಆದೂರು ಪೇಟೆಗೆ ತಲುಪಬೇಕಿದ್ದರೆ ಕಲ್ಲಕಟ್ಟ (ಕಲ್ಲಚೆರ) ಎಂಬ ತೋಡಿನ ಬದಿಯಲ್ಲಿ ನಡೆದು ಹೋಗಬೇಕಾಗುತ್ತಿದೆ. ಆದೂರಿನಲ್ಲಿ ಸರಕಾರಿ  ಶಾಲೆ, ರೇಶನ್ ಅಂಗಡಿ, ಪೊಲೀಸ್ ಠಾಣೆ ಅಥವಾ ಇನ್ನಿತರ ಅಗತ್ಯಗಳಿಗೆ ಸಾಗಬೇಕಿದ್ದರೆ ಈ ಕಾಲುದಾರಿಯನ್ನು ಉಪಯೋಗಿಸಬೇಕಾಗುತ್ತಿದೆ. ಮಲ್ಲಾವರ, ಕುಂಡಲ, ನಾಮಂಗಾಲ್ ಎಂಬೆಡೆಗಳಿಂದ ದಿನನಿತ್ಯ …