ಯುವಕನನ್ನು ಅಪಹರಿಸಿ ಬೆದರಿಕೆಯೊಡ್ಡಿ 1.02 ಲಕ್ಷ ರೂ. ದರೋಡೆ: ಆರೋಪಿಗಳಿಗಾಗಿ ಶೋಧ

ಬದಿಯಡ್ಕ: ಯುವಕನನ್ನು ಕಾರಿನಲ್ಲಿ ಅಪಹರಿಸಿ ಚೆರ್ಕಳ ಬಳಿಯ ಕ್ವಾರ್ಟರ್ಸ್‌ಗೆ ತಲುಪಿಸಿ ನಗ್ನಗೊಳಿಸಿ ಬಾಲಕಿಯೊಂದಿಗೆ ನಿಲ್ಲಿಸಿ  ವೀಡಿಯೋ ಚಿತ್ರೀಕರಿಸಿ ಬೆದರಿಕೆ ಯೊಡ್ಡಿ 1,02,000 ರೂಪಾಯಿ ಲಪಟಾಯಿಸಿದ ಪ್ರಕರಣದ ಆರೋಪಿಗಳ ಕುರಿತು ಸೂಚನೆ ಲಭಿಸಿವುದಾಗಿಯೂ ಅವರ ಪತ್ತೆಗಾಗಿ ಶೋಧ ತೀವ್ರಗೊಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದ.ಕ. ಜಿಲ್ಲೆಯ ವಿಟ್ಲ ಸೇರಾಜೆ ನಿವಾಸಿಯಾದ ಎ.ಎಸ್.ಸುಜಿತ್ ನೀಡಿದ ದೂರಿನಂತೆ ೫ ಮಂದಿ ತಂಡದ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಇದೇ ವೇಳೆ ಘಟನೆ ನಡೆದಿರುವುದು  ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದು ದರಿಂದ …

ಎಂಡಿಎಂಎ ಪ್ರಕರಣ: ಇನ್ನೋರ್ವ ಆರೋಪಿ ಸೆರೆ ಬಂಧಿತರ ಸಂಖ್ಯೆ 8ಕ್ಕೇರಿಕೆ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಾಲಿಕಡವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ ಮಾದಕದ್ರವ್ಯವಾದ 139.29 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವನನ್ನು ವಿಶೇಷ ಪೊಲೀಸರ ತಂಡ ಬಂಧಿಸಿದೆ. ಉತ್ತರ ಪ್ರದೇಶ ಆಗ್ರಾ ನಿವಾಸಿ ವಿಷ್ಣುಕುಮಾರ್ (26) ಬಂಧಿತ ಆರೋಪಿ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಈ ತನಕ ಬಂಧಿತರಾದವರ ಸಂಖ್ಯೆ ಈಗ ಎಂಟಕ್ಕೇರಿದೆ. ಈ ಪ್ರಕರಣದ ಮುಖ್ಯ ಸೂತ್ರಧಾರಿಣಿ ಗುಜರಾತ್ ಅಹಮ್ಮದಾಬಾದ್ ಲಾಂಬಾ ನಿವಾಸಿ ಹಾಗೂ ಮೂಲತಃ ಪಶ್ಚಿಮ ಬಂಗಾಳ …

ಎಂಎಸ್‌ಎಫ್ ಜಿಲ್ಲಾ ಸಮಿತಿಯಲ್ಲಿ ಸಂದಿಗ್ಧತೆ: 5 ಪದಾಧಿಕಾರಿಗಳು ರಾಜೀನಾಮೆ; ಮಂಜೇಶ್ವರ ಮಂಡಲ ಸಮಿತಿಯಲ್ಲೂ ರಾಜೀನಾಮೆ ಸುಳಿವು

ಕಾಸರಗೋಡು: ಎಂಎಸ್‌ಎಫ್ ಜಿಲ್ಲಾ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯ ಏಕಪಕ್ಷೀಯ ತೀರ್ಮಾನವನ್ನು ಪ್ರತಿಭಟಿಸಿ ಜಿಲ್ಲಾ ಕೋಶಾಧಿಕಾರಿ ಸರ್ಫರಾಸ್ ಬಂದ್ಯೋಡ್ ಸಹಿತದ ಐದು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಸರ್ಫರಾಸ್‌ನ ಹೊರತಾಗಿ ಉಪಾಧ್ಯಕ್ಷರಾದ ಜಂಶೀರ್ ಮೊಗ್ರಾಲ್, ಮುರ್ಶಿದ್ ಮೊಗ್ರಾಲ್, ಕಾರ್ಯದರ್ಶಿಗಳಾದ ಬಿಲಾಲ್ ಆರಿಕ್ಕಾಡಿ, ಅನ್ಸಾರ್ ವರ್ಕಾಡಿ ಎಂಬಿವರು ಜಿಲ್ಲಾ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮಂಜೇಶ್ವರ ಮಂಡಲ ಎಂಎಸ್‌ಎಫ್ ಪದಾಧಿಕಾರಿಗಳು ಕೂಡಾ ಇಂದು ರಾಜೀನಾಮೆ ನೀಡುವರು ಎಂಬ ಸೂಚನೆಯೂ ಇದೆ. ಎಂಎಸ್‌ಎಫ್ ರಾಜ್ಯ ಸಮಿತಿಗೆ ಕಾಸರಗೋಡು ಜಿಲ್ಲಾ ಸಮಿತಿಯಿಂದ ಮಾಜಿ …

ಕೊಯ್ಯೋಡ್ ಉಮರ್ ಮುಸ್ಲಿಯಾರ್ ಸಂಯುಕ್ತ ಜಮಾಯತ್ ಖಾಝಿ

ಕಾಸರಗೋಡು: ಸಮಸ್ತ ಕೇಂದ್ರ ಮುಶಾವರ ಕೋಶಾಧಿಕಾರಿಯಾದ ಕೊಯ್ಯೋಡ್ ಉಮರ್ ಮುಸ್ಲಿಯಾರ್ ರನ್ನು ಕಾಸರಗೋಡಿನ ಸಂಯುಕ್ತ ಜಮಾಯತ್ ಖಾಝಿಯಾಗಿ ನೇಮಕ ಗೊಳಿಸಲು ಸಂಯುಕ್ತ ಜಮಾಯತ್ ತೀರ್ಮಾನಿಸಿದೆ. ಅಧ್ಯಕ್ಷ ಎನ್.ಎ. ನೆಲ್ಲಿಕುನ್ನುರ ಅಧ್ಯಕ್ಷತೆಯಲ್ಲಿ ಜರಗಿದ ಸಂಯುಕ್ತ ಮುಸ್ಲಿಂ ಜಮಾಯತ್ ಸಮಿತಿ ಸದಸ್ಯರ ಹಾಗೂ ಮಾಲಿಕ್ ದೀನಾರ್ ವಲಿಯ ಜುಮುಯತ್ ಮಸೀದಿ ಅಧ್ಯಕ್ಷ, ಕಾರ್ಯದರ್ಶಿಗಳ ಜಂಟಿ ಸಭೆ ಯಲ್ಲಿ ಈ ತೀರ್ಮಾನ ಕೈಗೊಳ್ಳಲಾ ಗಿದೆ. ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್‌ರ ನಿಧನದ ಹಿನ್ನೆಲೆಯಲ್ಲಿ ಹೊಸ ಖಾಝಿಯವರ ನೇಮಕ ನಡೆದಿದೆ.

ಕಾರಡ್ಕ, ಬೆಳ್ಳೂರು ಪಂಚಾಯತ್‌ಗಳಲ್ಲಿ ಶಾಸಕ ಕಲ್ಲಟ್ರ ಮಾಹಿನ್‌ರಿಂದ  ದೂರು ಆಲಿಕೆ: ಸಮಸ್ಯೆ, ಬೇಡಿಕೆ ಸಹಿತ ತಲುಪಿದ ಜನಸಾಮಾನ್ಯರು

ಕಾಸರಗೋಡು: ಜನರ ಸಮಸ್ಯೆಗಳು, ಅಭಿವೃದ್ಧಿ ವಿಷಯಗಳ ಬಗ್ಗೆ ನೇರವಾಗಿ ತಿಳಿದು ಪರಿಹಾರ ಕಾಣುವುದಕ್ಕಾಗಿ ಶಾಸಕ ಕಲ್ಲಟ್ರ ಮಾಹಿನ್ ನಡೆಸುವ ಜನಸಂಪರ್ಕ ಕಾರ್ಯಕ್ರಮಕ್ಕೆ ಕಾರಡ್ಕ, ಬೆಳ್ಳೂರು ಪಂಚಾಯತ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಸಾಮಾನ್ಯರ ದೂರು ಸಹಿತ ಶಾಶಕರನ್ನು ಭೇಟಿಯಾದರು. ಪಂಚಾಯತ್‌ಗಳ ವಿವಿಧ ಸ್ಥಳಗಳಲ್ಲಿ ನಡೆಯುವ ಜನಸಂಪರ್ಕ ಕಾರ್ಯಕ್ರಮದಲ್ಲಿ ಮಹಿಳೆಯರು, ಯುವಕರು, ವೃದ್ಧರು, ಕೃಷಿಕರು, ಕಾರ್ಮಿಕರ ಸಹಿತ ಹಲವಾರು ಮಂದಿ ಭಾಗವಹಿಸಿದ್ದಾರೆ. ವೈಯಕ್ತಿಕ ದೂರಿನಿಂದ ಆರಂಭಿಸಿ ಸಾರ್ವಜನಿಕವಾದ ಅಭಿವೃದ್ಧಿ ಬೇಡಿಕೆ ಮೊದಲಾದ ವಿಷಯಗಳ ಬಗ್ಗೆ ಜನರು ಶಾಸಕರ ಗಮನಕ್ಕೆ ತಂದಿದ್ದಾರೆ. …

ಬಾಯಾರಿನಲ್ಲಿ ಸಹೋದರರಿಂದ ಗಣಪತಿ ವಿಗ್ರಹರಚನೆ

ಉಪ್ಪಳ: ಗಣೇಶೋತ್ಸವ ಸಮೀಪಿಸಿರುವಂತೆ ಬಾಯಾರುನಲ್ಲಿ ಗಣಪತಿ ವಿಗ್ರಹ ರಚನೆ ಭರದಿಂದ ನಡೆಯುತ್ತಿದೆ. ಈ ತಿಂಗಳ ೧೪ರಂದು ಶ್ರೀ ಗಣೇಶೋತ್ಸವ ನಡೆಯಲಿದೆ. ಬಾಯಾರು ಶ್ರೀ ಪಂಚಲಿAಗೇಶ್ವರ ದೇವಸ್ಥಾನ ಬಳಿಯ ನಿವಾಸಿ ದಿ| ಕೃಷ್ಣಪ್ಪ ಆಚಾರ್ಯರ ಮಕ್ಕಳಾದ ಮಹೇಶ ಹಾಗೂ ಭರತ್ ಸಹೋದರರು ಮನೆಯಲ್ಲಿ ಗಣಪತಿ ವಿಗ್ರಹ ತಯಾರಿಸುತ್ತಿದ್ದಾರೆ. ಈ ವರ್ಷ ಒಟ್ಟು ೫೦ ಗಣಪತಿ ವಿಗ್ರಹ ಸಿದ್ದವಾಗುತ್ತಿದೆ. ಬಾಯಾರು, ಜೋಡುಕಲ್ಲು, ಪ್ರತಾಪನಗರ, ಹೊಸಂಗಡಿ, ಮಿತ್ತನಡ್ಕ, ಸುಂಕದಕಟ್ಟೆ, ನೀಲೇಶ್ವರ , ಕರ್ನಾಟಕದ ಬೆಂಗಳೂರು, ಮಡಿಕೇರಿ ಸಹಿತ ವಿವಿಧ ಕಡೆಗಳಲ್ಲಿ ಪೂಜಿಸುವ …

ಶಾಂತಿಯುತ ವಾತಾವರಣವನ್ನು ಹಾಳುಮಾಡಲು ಯೂತ್ ಲೀಗ್ ಯತ್ನ: ಎಂ.ಎಲ್. ಅಶ್ವಿನಿ

ಮಂಜೇಶ್ವರ: ಶಾಂತಿಯುತ ವಾತಾವರಣವಿರುವ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಉದ್ವಿಗ್ನತೆ ಸೃಷ್ಟಿಸಲು ಯೂತ್ ಲೀಗ್ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಜಿ¯sÁ್ಲಧ್ಯಕ್ಷೆ ಎಂ. ಎಲ್. ಅಶ್ವಿನಿ ಆರೋಪಿಸಿದ್ದಾರೆ.ಹಲವು ವರ್ಷಗಳಿಂದ ಗಣೇಶೋತ್ಸವ ನಡೆಯುತ್ತಿರುವ ಸ್ಥಳದಲ್ಲಿ ಉತ್ಸವದ ಅಂಗವಾಗಿ ತಾತ್ಕಾಲಿಕ ಪೆಂಡಾಲ್ ನಿರ್ಮಿಸಿz್ದÀಕ್ಕಾಗಿ ಮುಸ್ಲಿಂ ಲೀಗ್ ಕಾರ್ಯಕರ್ತರು ಅನಗತ್ಯವಾಗಿ ಗೊಂದಲ ಸೃಷ್ಟಿಸಿ, ಸಂಘರ್ಷದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ನೊಂಡ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು …

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೇಲೆ ಮುಸ್ಲಿಂ ಲೀಗ್‌ನ ಅಸಭ್ಯ ವರ್ತನೆ ಖಂಡನೀಯ: ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ ಕಾನೂನು ರೀತಿಯಲ್ಲಿ ಎದುರಿಸುತ್ತೇವೆ-ಬಿ. ವಿಕ್ರಂ ಪೈ ಕುಂಬಳೆ

ಕುಂಬಳೆ:  ಜೋಡುಕಲ್ಲಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಸ್ಥಳಕ್ಕೆ ಸಂಬಂಧಿಸಿದ ವಿಷಯದಲ್ಲಿ ಬಿಜೆಪಿ  ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ ಅವರ ಮೇಲೆ ನಡೆದಿರುವ ಅಸಭ್ಯ ವರ್ತನೆ ಖಂಡನೀಯವೆಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ಬಿ. ವಿಕ್ರಂ ಪೈ ತಿಳಿಸಿದ್ದಾರೆ. ಜೋಡುಕಲ್ಲು ಶಿಶು ಮಂದಿರದ ಸಮೀಪದಲ್ಲಿರುವ ಈ ಸ್ಥಳಕ್ಕೆ ಸಂಬಂಧಿಸಿದ ವಿಷಯದ ಕರಿತು ಲೋಕೋಪಯೋಗಿ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಲು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ತೆರಳಿದ್ದ ಸಂದಭದಲ್ಲಿ ಅಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಯ ನಡುವೆ …

ಯುವಕನನ್ನು ಕಾರಿನಲ್ಲಿ ಅಪಹರಿಸಿ ಕ್ವಾರ್ಟರ್ಸ್‌ನಲ್ಲಿ  ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ ವೀಡಿಯೋ ಚಿತ್ರೀಕರಣ: ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡ್ಡಿ 1 ಲಕ್ಷ  ರೂ. ಲಪಟಾವಣೆ

ಬದಿಯಡ್ಕ:  ಯುವಕನನ್ನು ಕಾರಿನಲ್ಲಿ ಅಪಹರಿಸಿ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಕೂಡಿ ಹಾಕಿ ಪ್ರಾಯಪೂರ್ತಿಯಾಗದ ಬಾಲಕಿಯೊಂದಿಗೆ ನಗ್ನವಾಗಿ ನಿಲ್ಲಿಸಿ  ವೀಡಿಯೋ ಚಿತ್ರೀಕರಿಸಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿ 1,02,000 ರೂಪಾಯಿ ಅಪಹರಿಸಿರುವುದಾಗಿ ದೂರಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಸೇರಾಜೆ ನಿವಾಸಿ ಎ.ಎಸ್. ಸುಜಿತ್ ಎಂಬವರು ನೀಡಿದ ದೂರಿನಂತೆ  ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆಗೋಸ್ತ್ ೨೯ರಂದು ಸಂಜೆ  6 ಗಂಟೆಗೆ ಪೆರ್ಲ ಬಳಿಯ ಉಕ್ಕಿನಡ್ಕದಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಈ …

ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು

ಕುಂಬಳೆ: ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯನ್ನು ನೆರೆಮನೆಯವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ ಘಟನೆ ನಡೆದಿದೆ. ಕೊಪಾಡಿ ಸಿದ್ಧಿಬೈಲು ನಿವಾಸಿ ಪವನೇಶ್ (64) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಸಂಜೆ ಅವರ ಮನೆ ಕೊಠಡಿಯೊಳಗೆ  ಒರಗಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾ ಗಿದ್ದರು. ಅದನ್ನು ಕಂಡ ನೆರೆಮನೆಯ ಪ್ರಕಾಶ್ ಮತ್ತು ಇನ್ನೋರ್ವರು ಸೇರಿ ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ವೈದ್ಯರು ಪರೀಕ್ಷಿಸಿದ ವೇಳೆ ಸಾವನ್ನಪ್ಪಿರು ವುದಾಗಿ ದೃಢಪಡಿಸಿದ್ದಾರೆ. ಈ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. …