ಕಾಸರಗೋಡಿಗೆ ನೂತನ ಜಿಲ್ಲಾಧಿಕಾರಿ ನೇಮಕ

ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಭಶೇಖರ್‌ರನ್ನು ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ. ಇವರ ಬದಲಿಗೆ ಕಾಸರಗೋಡು ಜಿಲ್ಲಾಧಿಕಾರಿಯಾಗಿ ತೃಶೂರು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರನ್ನು ನೇಮಿಸಲಾಗಿದೆ. ರಾಜ್ಯದ ಅತ್ಯುತ್ತಮ ಜಿಲ್ಲಾಧಿಕಾರಿಗಿರುವ ಪ್ರಶಸ್ತಿಯನ್ನು ಗಳಿಸಿರುವ ಅರ್ಜುನ್ ಪಾಂಡ್ಯನ್ ಇಡುಕ್ಕಿ ನಿವಾಸಿಯಾಗಿದ್ದಾರೆ.  ತೋಟ ವಲಯದ  ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅರ್ಜುನ್ ಪಾಂಡ್ಯನ್ 2017 ರಲ್ಲಿ ಸಿವಿಲ್ ಸರ್ವೀಸ್‌ಗೆ  ತಲುಪಿದ್ದರು. ಇದೇ ವೇಳೆ ತೃಶೂರು   ಜಿಲ್ಲಾಧಿಕಾರಿಯಾಗಿ ಟೂರಿಸಂ ಡೈರೆಕ್ಟರ್ ಶಿಖಾ ಸುರೇಂದ್ರನ್‌ರನ್ನು ನೇಮಿಸಲಾಗಿದೆ.

ಆರ್‌ಎಸ್‌ಎಸ್ ಮುಖಂಡ ನಿಧನ

ಬದಿಯಡ್ಕ: ಹಿರಿಯ ಕೃಷಿಕ, ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಮೀಸೆಬೈಲು ರಾಮ ಭಟ್ ಕೆ.ಎಂ.(92) ಇಂದು ಮುಂಜಾನೆ ನಿಧನ ಹೊಂದಿದರು. ಇವರು ಬಿಜೆಪಿಯಿಂದ ಈ ಹಿಂದೆ ಬದಿಯಡ್ಕ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.  ಇವರ ಪತ್ನಿ ವೆಂಕಟೇಶ್ವರಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಸುಬ್ರಹ್ಮಣ್ಯ ಶರ್ಮ ಎಂ.ಆರ್, ಸುಲೋಚನ, ರಾಜೇಶ್ವರಿ, ಉಷಾ, ಸೊಸೆ ವೀಣಾ, ಅಳಿಯಂದಿರಾದ ಸುಬ್ರಹ್ಮಣ್ಯ ಭಟ್ ಪುಳು, ಗಣಪತಿ ಕಿನಿಲಕೋಡಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪೆರಿಯ ಬಜಾರ್‌ನಲ್ಲಿ 3 ಗೂಡಂಗಡಿಗಳಿಗೆ ಕಿಚ್ಚು: ದುಷ್ಕರ್ಮಿಗಳು ತಲುಪಿದ್ದು ಬೈಕ್‌ನಲ್ಲೆಂಬ ಶಂಕೆ

ಕಾಸರಗೋಡು: ಪೆರಿಯ ಬಜಾರ್‌ನಲ್ಲಿ ಮೂರು ಗೂಡಂಗಡಿಗಳಿಗೆ ಕಿಚ್ಚಿರಿಸಲಾಗಿದೆ. ಪೆರಿಯ ಪೆಟ್ರೋಲ್ ಬಂಕ್ ಸಮೀಪದ ಮುಹಮ್ಮದ್ ಕುಂಞಿ, ನವೋದಯ ಶಾಲೆ ಸಮೀಪದ ಮುಹಮ್ಮದ್ ಕುಂಞಿ, ನವೋದಯ ನಗರ ಎಮಿನ್ ಶಾಲೆಯ ಸಮೀಪದ ಜಬ್ಬಾರ್ ಎಂಬಿವರ ಅಂಗಡಿಗಳಿಗೆ ಕಿಚ್ಚಿರಿಸಲಾಗಿದೆ. ಈ ಮೂರು ಅಂಗಡಿಗಳು ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಾಗಿ ವಿಭಿನ್ನ ಸ್ಥಳಗಳಲ್ಲಿದೆ. ಮಾಹಿತಿ ತಿಳಿದು ಬೇಕಲ ಪೊಲೀಸರು ಹಾಗೂ ಕಾಞಂಗಾಡ್‌ನಿಂದ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಅಧಿಕಾರಿ ಗಣೇಶ್, ಇ. ಶಿಜು, ಎ. …

ಕೋಳಿ ಅಂಕ; ಇಬ್ಬರ ಬಂಧನ: ಒಂದು ಕೋಳಿ ವಶ

ವರ್ಕಾಡಿ:  ಆನೆಕಲ್ಲಿನಲ್ಲಿ ನಿನ್ನೆ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರ ಕೈಯಿಂದ 2೦೦೦ ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಕರ್ನಾಟಕದ ಮಂಜನಹಳ್ಳಿ ನಿವಾಸಿ ಅಜಯ್ ಕುಮಾರ್ (34), ಉಪ್ಪಳ ಚೆರುಗೋಳಿ ರಸ್ತೆಯ ಸತೀಶ (40) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ಅಪರಾಹ್ನ ೩.೩೦ಕ್ಕೆ ಆನೆಕಲ್ಲು ದೇವಸ್ಥಾನ ಪರಿಸರದ ಹಿತ್ತಿಲಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿ ಮಂಜೇಶ್ವರ ಎಸ್‌ಐಗಳಾದ ಉಮೇಶ್ ಹಾಗೂ ವೈಷ್ಣವ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.

ವಾಹನ ಅಪಘಾತ: ತಂದೆಯ ಬೆನ್ನಲ್ಲೇ ಚಿಕಿತ್ಸೆಯಲ್ಲಿದ್ದ ಮಗನೂ ಮೃತ್ಯು

ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಕೆಳಗಿನ ನೆಲ್ಲಿಕಟ್ಟೆ ಯಲ್ಲಿ ಸಂಭವಿಸಿದ ವಾಹನ ಅಪಘಾತ ದಲ್ಲಿ ಗಂಭೀರ ಗಾಯಗೊಂಡು ಚೆರ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯಲ್ಲಿದ್ದ ನೆಲ್ಲಿಕಟ್ಟೆ ನಿವಾಸಿ ಸಲ್ಮಾನ್ ಫಾರೀಸ್ (22) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಇವರ ಜತೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ತಂದೆ ಮಾಜಿ ಗಲ್ಫ್ ಉದ್ಯೋಗಿ ಶಂಸುದ್ದೀನ್ ಪೈಕ (68) ಅಪಘಾತ ನಡೆದ ಸ್ಥಳದಲ್ಲೇ ಸಾವನ್ನಪ್ಪಿದರು. ತಂದೆ ಮತ್ತು ಮಗ ಎರ್ನಾಕುಳಂನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಸಂಬಂಧಿಕರೋರ್ವ ರನ್ನು ಕಾಣಲೆಂದು ಫೆಬ್ರವರಿ 21ರಂದು ಮುಂಜಾನೆ ಕಾರಿನಲ್ಲಿ …

ಮದ್ಯ ವಶ: ಓರ್ವ ಸೆರೆ

ಕುಂಬಳೆ: ಕುಂಬಳೆ ಪೊಲೀಸರು ನಿನ್ನೆ ಕುಬಣೂರು ಎಟಿಎಸ್ ಮೈದಾನ ಬಳಿಯ ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 180 ಎಂ.ಎಲ್‌ನ 26 ಪ್ಯಾಕೆಟ್ ಕರ್ನಾಟಕ ಮದ್ಯವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಂಗಲ್ಪಾಡಿ ಪ್ರತಾಪನಗರದ ಅಭಿಷೇಕ್ ಪಿ (31) ಎಂಬಾತನನ್ನು ಸೆರೆಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಯಂತ್ರಣ ತಪ್ಪಿದ ವ್ಯಾನ್ಮನೆ ಮೇಲೆ ಬಿದ್ದು ಇಬ್ಬರಿಗೆ ಗಾಯ

ಮುಳ್ಳೇರಿಯ: ನಿಯಂತ್ರಣ ತಪ್ಪಿದ ವ್ಯಾನ್ ಮನೆಯ ಮೇಲೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಬೆಳ್ಳೂರು ಬಳಿಯ ಪಡ್ಡೈಮೂಲೆ ಎಂಬಲ್ಲಿ ನಡೆದಿದೆ. ಪಡ್ಡೈಮೂಲೆಯ ಸುರೇಶ್‌ರ ಪುತ್ರ ಕೆ. ಸುನಿಲ್ ಕುಮಾರ್ (33), ಕಾರು ಚಾಲಕ ಕರುವಲ್ತಡ್ಕ ನಿವಾಸಿ ಅಶ್ರಫ್ ಎಂಬವರು ಗಾಯಗೊಂಡಿದ್ದಾರೆ. ಇವರನ್ನು ಮುಳ್ಳೇರಿಯದ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಅಪರಾಹ್ನ ೩.೩೦ರ ವೇಳೆ ಈ ಅಪಘಾತವುಂಟಾಗಿದೆ. ಅಡಿಕೆಯೊಂದಿಗೆ ಕರ್ನಾಟಕಕ್ಕೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಕೆಳಭಾಗದಲ್ಲಿರುವ ಮನೆ ಮೇಲೆ ಬಿದ್ದಿದೆ. ಈ ವೇಳೆ ಮನೆಯಲ್ಲಿ  ಸುನಿಲ್ …

ಭೂಹಕ್ಕು ಪತ್ರ : ದರ್ಭೆತ್ತಡ್ಕದ ಅಮರ್‌ನಾಥ್‌ರಿಗೆ ಈಗ ಸಂಪೂರ್ಣ ಸಂತೋಷ

ಕಾಸರಗೋಡು: ಬೇಳ ದರ್ಭೆತ್ತಡ್ಕದ ಪಿ. ಅಮರ್‌ನಾಥ್ ಹಾಗೂ ಕುಟುಂಬಕ್ಕೆ ಇದು ಸಂತೋಷದ ನಿಮಿಷ. ಪಾರಂಪರ್ಯವಾಗಿ ಲಭಿಸಿದ ಮಣ್ಣಿನಲ್ಲಿ ವಾಸಿಸುತ್ತಿರುವ ಈ ಕುಟುಂಬಕ್ಕೆ ಭೂಹಕ್ಕು ಪತ್ರ ಅಥವಾ ಕೈವಶ ಹಕ್ಕು ಪತ್ರ ಇಲ್ಲದ ಕಾರಣ ಸ್ವಂತ ಭೂಮಿಗೆ ತೆರಿಗೆ ಪಾವತಿಸಲು ಅಥವಾ ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಇವರಿಗೆ ಇದುವರೆಗೂ ಸಾಧ್ಯವಾಗಿರಲಿಲ್ಲ. ಬಿದಿರಿನಿಂದ, ಬಳ್ಳಿಯಿಂದ ಬುಟ್ಟಿ ಹೆಣೆಯುವ ಪಾರಂಪರ್ಯ ಕೆಲಸದಲ್ಲಿ ಏರ್ಪಟ್ಟಿರುವ ಅಮರನಾಥ್ ತನ್ನ  ದುಡಿಮೆಯಿಂದ ಕುಟುಂಬವನ್ನು ಸಲಹುತ್ತಿದ್ದು, ಭೂಮಿಯ ದಾಖಲೆ ಇಲ್ಲದಿದ್ದುದು ಬಹಳ ದೊಡ್ಡ ಚಿಂತೆಯಾಗಿ ಇವರನ್ನು …

ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರು-ಮುಖ್ಯಮಂತ್ರಿ

ಕಾಸರಗೋಡು: ಕಳೆದ 10 ವರ್ಷದೊಳಗೆ ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನುಡಿದರು. ರಾಜ್ಯ ಮಟ್ಟದ ಪಟ್ಟಾ ಮೇಳದಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಪಟ್ಟೆ ಮೇಳವನ್ನು ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್‌ನಲ್ಲಿ ಆನ್‌ಲೈನ್ ಆಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒಂದು ಕುಟುಂಬದ ನಾಲ್ಕು ಮಂದಿ ಎಂಬ ಲೆಕ್ಕದಂತೆ 40 ಲಕ್ಷ ವ್ಯಕ್ತಿಗಳು, ನಾಲ್ಕೂವರೆ ಲಕ್ಷ ಪಟ್ಟೆಗಳ ಫಲಾನುಭವಿಗಳಾದರು. ಕಳೆದ ಸರಕಾರದ ಕಾಲದಲ್ಲಿ ಪ್ರಳಯ, ಅತಿವೃಷ್ಠಿ, ಕೊರೊನಾ, ನಿಫಾ ಮೊದಲಾದ ವಿಕೋಪಗಳು ಉಂಟಾದಾಗಲೂ, …

ವಿಧಾನಸಭಾ ಚುನಾವಣೆ: ಗೋಡೆಬರಹಮೂಲಕ ಪ್ರಚಾರಕ್ಕೆ ಎನ್‌ಡಿಎ ಚಾಲನೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಪ್ರಚಾರದಂಗವಾಗಿ ಎನ್‌ಡಿಎ ನೇತೃತ್ವದಲ್ಲಿ ಗೋಡೆ ಬರಹ ಪ್ರಚಾರಕ್ಕೆ ಕಾಸರಗೋಡಿನಲ್ಲಿ ನಿನ್ನೆ ಚಾಲನೆ ನೀಡಲಾಯಿತು. ಬಿಜೆಪಿ  ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಗೋಡೆ ಬರಹ ಬರೆಯುವ ಮೂಲಕ ಪ್ರಚಾರದ ಉದ್ಘಾಟನೆ ನಿರ್ವಹಿಸಿದರು. ಪಕ್ಷದ ಕಲ್ಲಿಕೋಟೆ ವಲಯ ಅಧ್ಯಕ್ಷ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ,  ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಉಪಾಧ್ಯಕ್ಷ ಪಿ. ರಮೇಶ್, ಕಾರ್ಯದರ್ಶಿ ಪ್ರಮೀಳ ಮಜಲ್, ಸೆಲ್ ಕೋ-ಆರ್ಡಿನೇಟರ್ ಸುಕುಮಾರ  ಕುದ್ರೆಪ್ಪಾಡಿ, ಕೋಶಾಧಿ ಕಾರಿ ವೀಣಾ ಅರಣ್ …