ಬಟ್ಟೆಬರೆಗಳ ಮಾಯಾಲೋಕದಲ್ಲಿ ಮೈಮರೆತು ಮಕ್ಕಳನ್ನೇ ಮರೆತು ಹೋದ ಹೆತ್ತವರು

ಕಾಸರಗೋಡು: ಬಟ್ಟೆಬರೆಗಳ ವಿಸ್ಮಯಲೋಕದಲ್ಲಿ ಮೈಮರೆತಾಗ ಗ್ರಾಹಕರಲ್ಲಿ ಕೆಲವರು ತಮ್ಮ ಮಕ್ಕಳನ್ನೇ ಅಂಗಡಿಗಳಲ್ಲಿ ಮರೆತುಹೋಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದೇ ರೀತಿಯ ಘಟನೆಯೊಂದು ಕಾಸರಗೋಡು ನಗರದಲ್ಲೂ ನಡೆದಿದೆ. ಮನೆ ಮಂದಿಯನ್ನು, ಹೆತ್ತವರನ್ನು ಕಾಣದೆ ಮೂರು ಮಕ್ಕಳು ಬಟ್ಟೆಬರೆ ಅಂಗಡಿಯಲ್ಲಿ ಕೂಗುತ್ತಿದ್ದಾಗ ನೌಕರರು ಅವರನ್ನು ಸಮಾಧಾನಪಡಿಸಿದ್ದರು. ಕಾಸರಗೋಡಿನ ಬಟ್ಟೆಬರೆ ಅಂಗಡಿಯೊಂದಕ್ಕೆ ತಲುಪಿದ ಮಹಿಳೆಯರು ತಮ್ಮ ಮಕ್ಕಳನ್ನು ಅಲ್ಲೇ ಮರೆತು ಹಿಂತಿರುಗಿದ್ದಾರೆ. ಜನರ ಮಧ್ಯದಲ್ಲಿ ಹೆತ್ತವರನ್ನು ಅರಸುತ್ತಾ, ಗೂಕುತ್ತಾ ಸಾಗುತ್ತಿದ್ದ ಮಕ್ಕಳನ್ನು ಬಟ್ಟೆಬರೆ ಅಂಗಡಿಯ ನೌಕರರು ಸಮಾಧಾನಪಡಿಸಿ ಅವರ ಊರು ಹಾಗೂ ತಂದೆ …

ಚಿನ್ನುಪಾಪು ಸಾವು ನೇಣುಬಿಗಿದು ಸಂಭವಿಸಿರುವುದಾಗಿ ವರದಿ

ಕಾಸರಗೋಡು: ಸೋಶ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಚಿನ್ನು ಪಾಪು ಯಾನೆ ರೇಷ್ಮ (25)ರ ಸಾವು  ನೇಣು ಬಿಗಿದು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ನಿನ್ನೆ ಮಧ್ಯಾಹ್ನ ವೇಳೆ ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುತ್ತಿಗೆಯಲ್ಲಿ ಬೆಡ್ ಶೀಟ್ ಬಿಗಿದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ಸಾವು ಸಂಭವಿಸಿದೆ ಯೆಂ ದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾ ಗಿದೆ. ಸಮಗ್ರ ಪರಿಶೀಲನೆ ಯಂಗವಾಗಿ ‘ವಿಸಿರ’ವನ್ನು ಕಳುಹಿಸಿಕೊಡಲಾಗಿದೆ. ಅದರ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂದು …

ಕುಂಬಳೆಯಲ್ಲಿ  ಮಿನಿ ಎಂಸಿಎಫ್‌ನಿಂದ ತ್ಯಾಜ್ಯ ತೆರವು ಪರಿಸರದಲ್ಲಿ ಬಿದ್ದ ತ್ಯಾಜ್ಯದಿಂದ ಮುಂದುವರಿದ ಸಮಸ್ಯೆ

ಕುಂಬಳೆ: ಕುಂಬಳೆಯಲ್ಲಿ ಸರಕಾರಿ ಆಸ್ಪತ್ರೆ ಹಾಗೂ ಶಾಲೆಗೆ ತೆರಳುವ ರಸ್ತೆ ಬದಿಯಿರುವ ಮಿನಿ ಎಂಸಿಎಫ್‌ನಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿದ್ದು, ಇದೇ ವೇಳೆ ಅದರ ಸಮೀಪದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿ ಸದೆ ಅಲ್ಲೇ ಬಿಟ್ಟಿರುವುದು ಸ್ಥಳೀಯರಿಗೆ ಮತ್ತೆ ಸಮಸ್ಯೆ ಎದುರಾಗಿದೆ. ಎಂಸಿಎಫ್‌ನ ಸುತ್ತುಮುತ್ತ ಎಸೆಯಲಾದ ಪ್ಲಾಸ್ಟಿಕ್ ತ್ಯಾಜ್ಯಗಳೊಂದಿಗೆ ಆಹಾರ ವಸ್ತುಗಳನ್ನು ಉಪೇಕ್ಷಿಸಲಾಗಿದ್ದು ಅದರಿಂದ ದುರ್ನಾತ ಬೀರುತ್ತಿದೆ. ಅಲ್ಲದೆ ಆಹಾರ ವಸ್ತುಗಳನ್ನು ತಿನ್ನಲು ಬೀದಿ ನಾಯಿಗಳು ಅಲ್ಲಿಗೆ ತಲುಪುತ್ತಿದ್ದು, ಅವುಗಳಿಂದ ಜನರಿಗೆ ದಾಳಿಯ ಭಯವೂ ಹುಟ್ಟಿಕೊಂಡಿದೆ.  ಈ ಸಮಸ್ಯೆ …

ಸರಕಾರಿ ಕಚೇರಿಗಳಲ್ಲಿ ಕಂಪ್ಯೂಟರೀಕರಣ ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ ಆರು ತಿಂಗಳಿಂದ ಕಂಪ್ಯೂಟರ್‌ಗಳು ಸ್ತಬ್ದ

ಕುಂಬಳೆ: ಸರಕಾರಿ ಕಚೇರಿಗಳಲ್ಲಿ  ನಡೆಸಿರುವ ಕಂಪ್ಯೂಟರೀಕರಣ ಕೆಲವೆಡೆ  ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.  ಇದರಿಂದ  ಹಲವು ಅಗತ್ಯಗಳಿಗೆ ಕಚೇರಿಗಳಿಗೆ ತಲುಪುವವರು  ಸಂದಿಗ್ಧತೆ ಎದುರಿಸುತ್ತಿ ದ್ದಾರೆ.  ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ  ಇಂತಹ ಸಮಸ್ಯೆ ಎದುರಾಗಿರುವುದಾಗಿ ದೂರಲಾಗಿದೆ.  ಇಲ್ಲಿನ ಕಂಪ್ಯೂಟರ್‌ಗಳು, ಪ್ರಿಂಟರ್ ಕಾರ್ಯಾಚರಿಸದೆ ಆರು ತಿಂಗಳಿಂದ ಸ್ಥಬ್ದಗೊಂಡಿದೆ. ಇಲ್ಲಿ ನಾಲ್ಕು ಕಂಪ್ಯೂಟರ್ ಗಳಿದ್ದು ಅವುಗಳು ಪದೇ ಪದೇ ಸ್ಥಬ್ದಗೊಳ್ಳುತ್ತಿರುವುದು   ಸಮಸ್ಯೆಯಾಗಿ ಪರಿಣಮಿಸಿದೆ. ಕಂಪ್ಯೂಟರ್ ಸ್ತಬ್ದಗೊಂಡಾಗ ನೌಕರರು ಅದನ್ನು ಪದೇ ಪದೇ  ಬಡಿದು ಸರಿಪಡಿಸುತ್ತಿರುವುದು ನಿತ್ಯ ಘಟನೆಯಾಗಿದೆ.  ಕಂಪ್ಯೂಟರ್ ಕಾರ್ಯಾಚರಿಸದಿರುವುದು ಕಚೇರಿಯ ನೌಕರರಿಗೆ …

ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ನಿಧನ

ಬಾಯಾರು: ಇಲ್ಲಿನ ವಿಲ್ಲೇಜ್ ಕಚೇರಿ ಬಳಿ ವಾಸವಾಗಿರುವ ಆವಳ ಸಾಗು ನಿವಾಸಿ ದಿ| ಅಬ್ಬಾಸ್ ಹಾಜಿ- ದಿ| ಝುಲೈಕ ದಂಪತಿ ಪುತ್ರ ಈ ಹಿಂದೆ ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ಸಾಗು (58) ನಿಧನ ಹೊಂದಿ ದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಮುಮ್ರಾಜ್, ಮಕ್ಕಳಾದ ಜುಲೈಕತ್ ನೂರ, ಮುನಾವರ, ತನ್ವೀರ, ಮರಿಯಮ್ಮ, ಮೊಹ ಮ್ಮದ್ ಅಯಾನ್, ಸಹೋದರರಾದ ಮುಹಮ್ಮದ್, ಅಬ್ದುಲ್ ರಜಾಕ್, …

4 ವರ್ಷದ ಹಿಂದೆ ಕೃಷಿಕರಿಗೆ ವಿದ್ಯುತ್ ಸಂಪರ್ಕ ನೀಡಿರುವುದಕ್ಕೆ ದಾಖಲೆಗಳಿಲ್ಲವೆಂದು ತಿಳಿಸಿ ಈಗ 7೦,೦೦೦ ರೂ. ಪಾವತಿಗೆ ನೋಟೀಸು

ಕುಂಬಳೆ: ನಾಲ್ಕು ವರ್ಷದ ಹಿಂದೆ ಕೃಷಿಯ ಅಗತ್ಯಕ್ಕಾಗಿ ಕೆಎಸ್‌ಇಬಿ ನೀಡಿದ ವಿದ್ಯುತ್ ಸಂಪರ್ಕಕ್ಕೆ ಸಾಕಷ್ಟು ದಾಖಲೆಗಳನ್ನು ನೀಡಲಾಗಿಲ್ಲವೆಂದು ಈಗ ಸೀತಾಂಗೋಳಿ ಕೆಎಸ್‌ಇಬಿ ಸೆಕ್ಷನ್ ನೌಕರರು ಪತ್ತೆಹಚ್ಚಿದ್ದಾರೆ..! ಆದರೆ ಅದಕ್ಕೆ ಯಾವುದೇ ಬೇಸರ ಮಾಡಬೇಕಾ ಗಿಲ್ಲವೆಂದು ಕೆಎಸ್‌ಇಬಿ ತಿಳಿಸಿದ್ದು, ಪುತ್ತಿಗೆ ಕೃಷಿಭವನ ವ್ಯಾಪ್ತಿಯಲ್ಲಿ ಈ ರೀತಿಯಲ್ಲಿ ಸಂಪರ್ಕ ನೀಡಿದ 2೦೦ರಷ್ಟು ಕೃಷಿಕರು 7೦,೦೦೦ ರೂ. ಮೊತ್ತವನ್ನು ಪಾವತಿಸಿ ದರೆ ಸಾಕು ಎಂದು ಉಪದೇಶಿಸಿದೆ. ಪುತ್ತಿಗೆ ಕೃಷಿಭವನ ವ್ಯಾಪ್ತಿಯ 2೦೦ರಷ್ಟು ಕೃಷಿಕರಿಗೆ ಇದಕ್ಕಿರುವ ಬಿಲ್ಲನ್ನು ಕಳುಹಿಸಿಕೊಡ ಲಾಗಿದೆ. ನಿಶ್ಚಿತ ದಿನಾಂಕದೊಳಗೆ …

ಕೋಟೆಕಣಿ ಕೂಡುರಸ್ತೆಯಲ್ಲಿ ಸಾರಿಗೆ ಅಡಚಣೆ ನಿತ್ಯ ಘಟನೆ: ಪ್ರಯಾಣಿಕರಲ್ಲಿ ಆತಂಕ

ಕಾಸರಗೋಡು: ಕರಂದಕ್ಕಾಡ್-ಮಧೂರು ರಸ್ತೆಯಲ್ಲಿ ಸೂರ್ಲು ಬಳಿ ಕೋಟೆಕಣಿಯ ಕೂಡು ರಸ್ತೆಯಲ್ಲಿ ಸಾರಿಗೆ ಅಡಚಣೆ ಎದುರಾಗುತ್ತಿದ್ದು, ಇದು ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಮೀಪುಗುರಿಯಿಂದ ಕಾಸರಗೋಡು ನಗರಕ್ಕೆ ಸಾಗುವ ವಾಹನಗಳಿಗೆ ಕೋಟೆಕಣಿ ಜಂಕ್ಷನ್‌ನ ಎತ್ತರವಾದ ಈ ಪ್ರದೇಶವು ಸಣ್ಣಪುಟ್ಟ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಕೂಡು ರಸ್ತೆಗೆ ತಲುಪುವಷ್ಟರಲ್ಲಿ ವಾಹನಗಳು ದಿಢೀರ್ ನಿಲುಗಡೆಗೊಳಿಸಬೇಕಾಗುತ್ತಿದ್ದು ಈ ವೇಳೆ ಮುಂದಿರುವ ವಾಹಕ್ಕೆ ಹಿಂದಿನಿಂದ ಬರುವ ವಾಹನವು ಢಿಕ್ಕಿಯಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಬಸ್ ನಿಲ್ದಾಣಕ್ಕೆ ಸಾಗುವ ಈ ಕೋಟೆಕಣಿ ರಸ್ತೆಯ ಅಭಿವೃದ್ಧಿ ಜೊತೆಗೆ ಈ …

ಪೈವಳಿಕೆ ಪಂಚಾಯತ್ ವಸತಿ ಯೋಜನೆ: ಸಿಪಿಎಂ ನಡೆಸಿದ ಮಾರ್ಚ್ ಕಪಟ ನಾಟಕ-ಯುಡಿಎಫ್

ಪೈವಳಿಕೆ: ಪಂಚಾಯತ್‌ನ ಲೈಫ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ಪಾವತಿಸಲಾಗಿಲ್ಲ ಎಂಬ ಕಾರಣಕ್ಕೆ ಸಿಪಿಎಂ ನಡೆಸಿದ ಮಾರ್ಚ್ ಹಾಗೂ ಧರಣಿ ಕಪಟ ನಾಟಕವೆಂದು ಪೈವಳಿಕೆ ಪಂಚಾಯತ್ ಯುಡಿಎಫ್ ಸಮಿತಿ ಅಧ್ಯಕ್ಷ ವಸಂತ ಕುಮಾರ್, ಸಂಚಾಲಕ ಝಡ್.ಎ. ಕಯ್ಯಾರ್ ಆರೋಪಿಸಿದ್ದಾರೆ.  ತಮ್ಮದೇ ಸರಕಾರದ ವಿರುದ್ಧ ಸಿಪಿಎಂ ಮುಷ್ಕರ ನಡೆಸಿದಂತಾಗಿದೆ ಇದು ಎಂದು ಯುಡಿಎಫ್ ಮುಖಂಡರು ತಿಳಿಸಿದ್ದಾರೆ. ಲೈಫ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಆರ್ಥಿಕ ಸಹಾಯ ಒದಗಿಸಲು ಹಿಂದಿನ ಆಡಳಿತ ಸಮಿತಿಗೆ ಸಾಧ್ಯವಾಗದ ಕಾರಣ ರಾಜ್ಯ ಸರಕಾರ …

ಅನಾಥ ವೃದ್ಧೆಗೆ ನೆರಳಾದ ಪಿಂಕ್ ಪೊಲೀಸ್

ಕಾಸರಗೋಡು: ಅನಾಥರಂತಿದ್ದ ವೃದ್ದೆಗೆ ಕಾಸರಗೋಡು ಪಿಂಕ್ ಪೊಲೀಸರು ಆಶ್ರಯ ನೀಡಿದ್ದಾರೆ. ಪಾರೆಕಟ್ಟೆ ಭಾಗದಲ್ಲಿ ಸ್ಥಳೀಯರ ನೆರವಿನೊಂದಿಗೆ ಜೀವಿಸುತ್ತಿದ್ದ ೭೫ ವರ್ಷದ ವಾರಿಜ ಎಂಬ ವೃದ್ಧೆಯನ್ನು ಪಿಂಕ್ ಪೊಲೀಸರು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ವಾರಿಜರ ದಯನೀಯ ಸ್ಥಿತಿ ಗಮನಕ್ಕೆ ಬಂದ ಪಿಂಕ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಅವರಿಗೆ ಅಗತ್ಯದ ವೈದ್ಯ ಸಹಾಯ ಲಭ್ಯಗೊಳಿಸಿದ್ದಾರೆ. ಬಳಿಕ ಎಎಸ್‌ಐ ಶಾರದ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೀತ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರೇಷ್ಮ, ರಮ್ಯ ಎಂಬಿವರು ಅಧಿಕಾರಿಗಳೊಂದಿಗೆ ಮಾತನಾಡಿ ವಾರಿಜರನ್ನು …

ಸೋಶ್ಯಲ್ ಮೀಡಿಯಾ ಇನ್‌ಫ್ಲುವನ್ಸರ್ ಚಿನ್ನುಪಾಪು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ: ಅಭಿಮಾನಿಗಳಲ್ಲಿ ಮಡುಗಟ್ಟಿದ ದುಃಖ ; ಪೊಲೀಸ್ ತನಿಖೆ ಆರಂಭ

ಕಾಸರಗೋಡು: ಸೋಶ್ಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಆಗಿದ್ದ ಚಿನ್ನು ಪಾಪು ಯಾನೆ ಕೆ. ರೇಷ್ಮ (25)ರ ಅಕಾಲಿಕ ಅಗಲುವಿಕೆ ಯಿಂದ ಆಕೆಯ ಸಂಬಂಧಿಕರು, ಅಭಿಮಾನಿ ಗಳು ಹಾಗೂ ಹಿಂಬಾಲಕರಲ್ಲಿ ತೀವ್ರ ಶೋಕಸಾಗರ ಸೃಷ್ಟಿಯಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಕಾಸರಗೋಡು ಆಜಾದ್‌ನಗರದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಚಿನ್ನುಪಾಪು ಯಾನೆ ರೇಷ್ಮ ನೇಣುಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಾಡಿಗೆ ಮನೆಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿತ್ತೆಂದು ಹೇಳಲಾಗುತ್ತಿದೆ. ಇದೇ ವೇಳೆ ರೇಷ್ಮಾರ ಸ್ನೇಹಿತ ಮಧೂರು ನಿವಾಸಿ ಸಂದೇಶ್ ತಲುಪಿ ಆಕೆಯನ್ನು …