ಹೃದಯಾಘಾತ: ನಿರ್ಮಾಣ ಕಾರ್ಮಿಕ ನಿಧನ

 ಹೊಸದುರ್ಗ: ಚಾಲಿಂಗಾಲ್ ನಿವಾಸಿ ನಿರ್ಮಾಣ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟರು. ಪಿ.ಕೆ. ಜಯಕುಮಾರ್ (55) ಮೃತಪಟ್ಟವರು. ಮಂಗಳವಾರ ರಾತ್ರಿ ಅಸ್ವಸ್ಥಗೊಂಡ ಇವರನ್ನು ಮಾವುಂಗಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ತಂದೆ ಪಿ.ಕೆ. ರಾಘವನ್, ಪತ್ನಿ ಬಿಂದು, ಮಕ್ಕಳಾದ ರಾಹುಲ್, ಅಮೃತ, ಸಹೋದರರಾದ ರಾಜನ್, ರಾಜೀವನ್, ಸಹೋದರಿಯ ರಾದ ಲೀಲ, ನಿರ್ಮಲ, ಮಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಧುರವರಿಗೆ ಮಾತೃ ವಿಯೋಗ

ಹೊಸದುರ್ಗ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಮಧುರವರ ತಾಯಿ ರಾಜಪುರಂ ಪೂಡಂಗಲ್ಲು ಅಯ್ಯಂಗಾವ್ ಪುಲಿಕೋಡನ್ ನಿವಾಸಿ ಎನ್. ಯಶೋಧ (80) ನಿಧನ ಹೊಂದಿದರು. ಇವರ ಪತಿ ವಳಪ್ಪಿಲ್ ನಾರಾಯಣ ಗುರುಸ್ವಾಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಇತರ ಮಕ್ಕಳಾದ ತಂಬಾಯಿ, ರಾಜನ್, ಇಂದಿರಾ, ಸೊಸೆಯಂದಿರಾದ ಸುಜ, ನಿತ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಳಿಯ ಗೋವಿಂದನ್ ಈ ಹಿಂದೆ ನಿಧನರಾಗಿದ್ದಾರೆ.

ನಗರದ ಸಿಟಿಎಂ ಪೆಟ್ರೋಲ್ ಬಂಕ್ ಮಾಲಕ ನಿಧನ

ಕಾಸರಗೋಡು: ನಗರದ ಮೊದಲ ಪೆಟ್ರೋಲ್ ಬಂಕ್‌ಗಳಲ್ಲಿ ಒಂದಾದ ಸಿಟಿಎಂ ಪೆಟ್ರೋಲ್ ಬಂಕ್‌ನ ಮಾಲಕ ಪಿಲಿಕುಂಜೆ ಮಸೀದಿ ಸಮೀಪದ ನಿವಾಸಿ ಸಿ.ಟಿ. ಅಮೀರ್ ಅಲಿ (73) ನಿಧನ ಹೊಂದಿದರು. ಇವರ ಪತ್ನಿ ಬೀವಿ ಏರ್‌ಲೈನ್ಸ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಸಿ.ಟಿ ಮೆಹನಾಸ್, ಸಿ.ಟಿ. ರಿಟ್ಟಾರ್, ಸಪ್ನಾಸ್, ಯೂನಸ್, ಅಳಿಯಂದಿರಾದ ಯೂನುಸ್, ಮೆಹ್ ಜಬೀನ್, ಹಾಮದ್, ಸಹೋದರರಾದ ಮುಸ್ತಫ, ಮುನೀರ್, ಮನ್ಸೂರ್, ಸಹೋದರಿ ಯರಾದ ಜಮೀಲ, ಮರಿಯಾಂಬಿ, ತಾಹಿರ, ಅಫೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸ್ನೇಹಿತರೊಂದಿಗೆ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

ಉಪ್ಪಳ: ಸ್ನೇಹಿತರೊಂದಿಗೆ  ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೆರಿಂಗಡಿಯ ಅಲಿ ಹಾಗೂ ಸುಲೈಖ ದಂಪತಿಯ ಪುತ್ರ ಅಬೂ ಬಕರ್ ಅಸಾನ್ (13) ಮೃತಪಟ್ಟ ದುರ್ದೈವಿ. ಈತ ಮಂಗಲ್ಪಾಡಿ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ನಿನ್ನೆ ಸಂಜೆ ೫ ಗಂಟೆಗೆ ಘಟನೆ ಸಂಭವಿಸಿದೆ. ಪೆರಿಂಗಡಿ ಮಸೀದಿಯ ಕೆರೆಯಲ್ಲಿ  ಸ್ನೇಹಿತರೊಂ ದಿಗೆ ಸ್ನಾನ ಮಾಡುತ್ತಿದ್ದಾಗ ಅಬೂಬಕರ್ ಅಸಾನ್ ನೀರಿನಲ್ಲಿ ಮುಳುಗಿದ್ದಾನೆನ್ನಲಾ ಗಿದೆ. ಜತೆಗಿದ್ದವರು ಸ್ನಾನ ಮಾಡಿ ಮನೆಗೆ ತೆರಳಲು ಸಿದ್ಧತೆಯಲ್ಲಿದ್ದಾಗ …

ಚಾಲಕನನ್ನು ಹೊರಗಿಳಿಸಿ ಕಾರು ಅಪಹರಣ

ಕುಂಬಳೆ: ಕಾರು ತಡೆದು ನಿಲ್ಲಿಸಿ ಚಾಲಕನನ್ನು ಹೊರಗಿಳಿಸಿದ ಬಳಿಕ ಕಾರನ್ನು ಅಪಹರಣಗೈದ ಬಗ್ಗೆ ದೂರಲಾಗಿದೆ. ಕುಂಬಳೆ ಪೂಕಟ್ಟೆ ನಿವಾಸಿ ಮೊಹಮ್ಮದ್ ಸಯ್ಯೀದ್ ಮುಸಮ್ಮಿಲ್ ಎಂಬವರು ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ದೂರುಗಾರ ಚಲಾಯಿಸುತ್ತಿದ್ದ ಕಾರನ್ನು ಖಾದರ್ ಎಂಬ ವ್ಯಕ್ತಿ ಹಿಂಬಾಲಿಸಿದ್ದಾನೆ. ಬಳಿಕ ಸೀತಾಂಗೋಳಿಯಲ್ಲಿ ಕಾರನ್ನು ತಡೆದು ನಿಲ್ಲಿಸಿ ಚಾಲಕನನ್ನು ಹೊರಗಿಳಿಸಿದ ಬಳಿಕ ವ್ಯಕ್ತಿ ಕಾರನ್ನು ಅಪಹರಣಗೈದಿರುವುದಾಗಿ ದೂರಲಾಗಿದೆ. ಟಾಟಾ ಟಿಯಾಗೊ ಇಲೆಕ್ಟ್ರಿಕ್ ಕಾರನ್ನು ಅಪಹರಣಗೈದಿದ್ದು,  ಚಟ್ಟಂಚಾಲ್‌ಗೆ ತಲುಪಿದಾಗ ಕಾರಿನ …

ಎಂಡಿಎಂಎ ಸಹಿತ ಸೆರೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತ ಪಕ್ಷದಿಂದ ಹೊರಕ್ಕೆ

ಕಾಸರಗೋಡು: ಕಾಲಿಕ್ಕಡವಿನಲ್ಲಿ ಎಂಡಿಎಂಎ ಸಹಿತ ಸೆರೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತನನ್ನು ಪಕ್ಷದಿಂದ ಹೊರಹಾಕಲಾಗಿದೆ. ಪೆರುಂಬಾವೂರ್ ವಲಿಯಕುಳಂ ಯೂನಿಟ್ ಸದಸ್ಯ ಮುಹಮ್ಮದ್ ಹುಸೈನ್   ಈ ತಿಂಗಳ ೯ರಂದು ಎಂಡಿಎಂಎ ಸಹಿತ ಸೆರೆಗೀಡಾಗಿ ದ್ದನು.  ಅದೇ ದಿನದಂದು ಈತ ನನ್ನು ಪಕ್ಷದ ಪ್ರಾಥಮಿಕ ಸದಸ್ಯ ತ್ವದಿಂದ ಹೊರ ಹಾಕಲಾಗಿ ದೆಯೆಂದು ಯೂತ್ ಕಾಂಗ್ರೆಸ್ ಎರ್ನಾಕುಳಂ ಜಿಲ್ಲಾಧ್ಯಕ್ಷ ಸಿಜೋ ಜೋಸೆಫ್ ತಿಳಿಸಿದ್ದಾರೆ. 139.29 ಗ್ರಾಂ ಎಂಡಿಎಂಎ ಸಹಿತ ಪೆರುಂಬಾವೂರು ಅರಕ್ಕಪ್ಪಡಿ ನಿವಾಸಿಗಳಾದ ಪಿ.ಎ. ಅಬ್ದುಲ್ ಸಲಾಂ (27), ಕೆ.ಎಚ್. ಮುಹಮ್ಮದ್ ಹುಸೈನ್ …

ನಕಲಿ ಚಿನ್ನ ಅಡವಿರಿಸಿ 5.75 ಲಕ್ಷ ರೂ. ಸಾಲ ಪಡೆದು ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಸಹಕಾರಿ ಸೊಸೈಟಿಯಲ್ಲಿ ನಕಲಿ ಚಿನ್ನದೊಡವೆ ಗಳನ್ನು ಅಡವಿರಿಸಿ 5.75 ಲಕ್ಷ ರೂ.ಸಾಲ ಪಡೆದು ವಂಚನೆಗೈದ ದೂರಿನಂತೆ ಇಬ್ಬರ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂದ್ರಗಿರಿ ಕೀಯೂರು ಹೌಸ್‌ನ ತಾಜುದ್ದೀನ್ (47)ಮತ್ತು ಚಾತಂಗೈ ಮಣಿಯರದ ಕೆ. ಸಂತೋಷ (39) ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಳನಾಡಿನಲ್ಲಿರುವ ಚೆಮ್ನಾಡ್ ಪಂಚಾಯತ್ ವನಿತಾ ಸರ್ವೀಸ್ ಸೊಸೈಟಿಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದಿರುವುದಾಗಿ ಆರೋಪಿಸಿ ಪ್ರಸ್ತುತ ಸೊಸೈಟಿಯ ಕಾರ್ಯದರ್ಶಿ ಎ. ಉಷಾ ಕುಮಾರಿ ನೀಡಿದ ದೂರಿನಂತೆ ಪೊಲೀಸರು ಈ …

ಮನೆಯೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟ: ವ್ಯಾಪಕ ನಾಶನಷ್ಟ

ಕಾಸರಗೋಡು:  ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟ ಗೊಂಡು  ವಿವಿಧ ಸಾಮಗ್ರಿಗಳು ಉರಿದು ನಾಶಗೊಂಡ ಘಟನೆ ತೃಕರಿಪುರ ಬೀರಿಚ್ಚೇರಿ ಎಂಬಲ್ಲಿ ಸಂಭವಿಸಿದೆ.  ಸ್ಫೋಟದ ಸದ್ದು ಕೇಳಿ ಕುಟುಂಬ ಮನೆಯಿಂದ ಹೊರಗೆ ಓಡಿದುದರಿಂದ ಭಾರೀ ದುರಂತ ತಪ್ಪಿಹೋಗಿದೆ.  ನಿನ್ನೆ ಅಪರಾಹ್ನ ೩ ಗಂಟೆ ವೇಳೆ ಬೀರಿಚ್ಚಾರಿ ಕುಲೇರಿ ಎಂಬಲ್ಲಿನ ಕೆ.ಪಿ. ನಿಸಾರ್‌ರ ಮನೆಯಲ್ಲಿ ಈ ದುರ್ಘಟನೆ ಉಂಟಾಗಿದೆ. ಆಹಾರ ತಯಾರಿಸುತ್ತಿದ್ದಾಗ ಸಿಲಿಂಡರ್‌ನಿಂದ ಅನಿಲ ಸೋರಿಕೆ ಉಂಟಾಗಿದ್ದು ಅಲ್ಪ ಹೊತ್ತಿನಲ್ಲೇ ಸ್ಫೋಟ ಉಂಟಾಗಿದೆ.  ತಕ್ಷಣ ಬೆಂಕಿ ಹತ್ತಿಕೊಂಡಿತ್ತೆನ್ನಲಾಗಿದೆ.  ಈ ಹೊತ್ತಿನಲ್ಲಿ …

ಶಬರಿಮಲೆ ಯುವತಿ ಪ್ರವೇಶ: ಸುಪ್ರೀಂಕೋರ್ಟ್ ಸಂವಿಧಾನ ಪೀಠದ ತೀರ್ಪು ಅಕ್ಟೋಬರ್‌ನಲ್ಲಿ

ನವದೆಹಲಿ: ಶಬರಿಮಲೆ ದೇಗುಲಕ್ಕೆ ಯುವತಿಯರ ಪ್ರವೇಶ ಸೇರಿದಂತೆ ಧಾರ್ಮಿಕ ನಂಬುಗೆಗೆ ಅನ್ವಯಿಸಿರುವ ಇತರ ಏಳು ವಿಷಯಗಳ ಕುರಿತಾದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್‌ನ ನವ ಸದಸ್ಯರ ಸಂವಿಧಾನ ಪೀಠ ಅಕ್ಟೋಬರ್‌ನಲ್ಲಿ ನೀಡಲಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಈ ಬಗ್ಗೆ   ಪೂರ್ವ ಮಾಹಿತಿ ನೀಡಿದ್ದಾರೆ. ಬಿಹಾರಿನ ಬೋದ್‌ಗಯ ಕ್ಷೇತ್ರದ ಆಡಳಿತ ಸಮಿತಿಗೆ ಸಂಬಂಧಪಟ್ಟ ಪ್ರಕರಣದ ಅರ್ಜಿಯನ್ನು ಪರಿಶೀಲಿಸು ತ್ತಿದ್ದ ವೇಳೆ  ಈ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಬೋದ್‌ಗಯ ಕ್ಷೇತ್ರದ ಆಡಳಿತ ಸಮಿತಿಯ ಪ್ರಕರಣದ ವಿಚಾರಣೆಯನ್ನು ಶಬರಿಮಲೆ …

ಕನ್ನಡ ಎಲ್‌ಪಿ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಕ್ಕೆ ಯೂತ್ ಲೀಗ್ ಮನವಿ

ಮಂಜೇಶ್ವರ: ಎಲ್‌ಪಿ ವಿಭಾಗ ಕನ್ನಡ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಾತಿಗೆ ಉಂಟಾಗುತ್ತಿರುವ ವಿಳಂಬವನ್ನು ಹೊರತುಪಡಿಸಬೇಕೆಂದು ಮೀಂಜ ಪಂಚಾಯತ್ ಯೂತ್ ಲೀಗ್ ಸಚಿವ ಶಂಸುದ್ದೀನ್‌ರಿಗೆ ಮನವಿ ನೀಡಿದೆ. ಕನ್ನಡ ಎಲ್‌ಪಿ ಅಧ್ಯಾಪಕ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕೆಂದು, ಅದಕ್ಕಾಗಿ ನಿರ್ದೇಶ ನೀಡಬೇಕೆಂದು ಯೂತ್ ಲೀಗ್ ಪಂಚಾಯತ್ ಸಮಿತಿ ಅಧ್ಯಕ್ಷ ರಿಯಾಸ್ ಚಿಗುರುಪಾದೆ, ಪ್ರಧಾನ ಕಾರ್ಯದರ್ಶಿ ಜಾಸಿಮ್ ಕಡಂಬೇರಿ, ಅಶ್ರಫ್ ಮಜೀರ್ಪಳ್ಳ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.