ಎರಿಯಾಕೋಟ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವಕ್ಕೆ ವ್ಯಾಪಾರಿ ವ್ಯವಸಾಯಿ ಸಮಿತಿಯಿಂದ ಹಸಿರುವಾಣಿ ಸಮರ್ಪಣೆ

ಮೊಗ್ರಾಲ್ ಪುತ್ತೂರು: ಕಾವುಗೋಳಿ ಚೌಕಿ ಎರಿಯಾಕೋಟ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದಂಗವಾಗಿ  ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ   ಸಮಿತಿ  ಮೊಗ್ರಾಲ್ ಪುತ್ತೂರು ಘಟಕ ತರಕಾರಿ ಹಾಗೂ ಧಾನ್ಯಗಳನ್ನು ನೀಡಿತು.  ಕ್ಷೇತ್ರ ಪದಾಧಿಕಾರಿಗಳು ವ್ಯಾಪಾರಿಗಳಿಗೆ ಸ್ವಾಗತ ನೀಡಿದರು. ವ್ಯಾಪಾರಿ ವ್ಯವಸಾಯಿ ಸಮಿತಿ ಜಿಲ್ಲಾ ಜೊತೆ ಕಾರ್ಯದರ್ಶಿ ರಿಯಾಸ್ ಚೌಕಿ, ಲೇಬರ್ ಡಿಪಾರ್ಟ್‌ಮೆಂಟ್ ಆಫೀಸರ್ ಅಬ್ದುಲ್ ಸಲಾಂ, ಏರಿಯಾ ಕಾರ್ಯದರ್ಶಿ  ಪ್ರಕಾಶನ್,  ಮರ್ಕಂಟೈಲ್ ಸೊಸೈಟಿ ಕಾರ್ಯದರ್ಶಿ ಕುಂಞಿರಾಮನ್,ವ್ಯಾಪಾರಿ ವ್ಯವಸಾಯಿ ಸಮಿತಿ ಘಟಕ ಅಧ್ಯಕ್ಷ ವಿಜಯನ್, ಮಹಿಳಾ ವಿಂಗ್ ಕಾರ್ಯದರ್ಶಿ ಜಾನಕಿ, …

ಕೊಲ್ಲಂಗಾನ ಸಂತ ಥೋಮಸ್ ಚರ್ಚ್‌ನಲ್ಲಿ ಕ್ಯಾನ್ಸರ್ ಜಾಗೃತಿ, ತಪಾಸಣಾ ಶಿಬಿರ

ಮಾನ್ಯ: ಕೊಲ್ಲಂಗಾನ ಸಂತ ಥೋಮಸ್ ಚರ್ಚ್‌ನಲ್ಲಿ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರ ನಡೆಸಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು, ಇಂಡ್ಯನ್ ಕ್ಯಾನ್ಸರ್ ಸೊಸೈಟಿ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಹಲವು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿದರು. ಡಾ| ಕುಮಾರ್ ಎಸ್. ವಶಿಷ್ಠ, ಡಾ| ಆಯಿಷಾ ರೋಗಿಗಳ ತಪಾಸಣೆ ನಡೆಸಿದರು. ವಿಷ್ಣುಪ್ರಸಾದ್ ಐ, ಆಸ್ಪತ್ರೆಯ ಸಿಬ್ಬಂದಿವರ್ಗದವರು ಉಪ ಸ್ಥಿತರಿದ್ದರು. ಫಾ| ರಿತೇಶ್ ಎ.ಎಲ್. ರೋಡ್ರಿಗಸ್ ಮಾತನಾಡಿದರು.

ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಹೋಟೆಲ್ ನೌಕರ ಮೃತ್ಯು

ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಹೋಟೆಲ್ ನೌಕರನಾದ ಯುವಕ ಮೃತಪಟ್ಟಿದ್ದಾರ.  ಉಪ್ಪಳ ಪಚ್ಚಂಬಳ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ   ಬದರುಲ್ ಮುನೀರ್ (38) ಮೃತಪಟ್ಟ ದುರ್ದೈವಿಯಾಗಿದ್ದಾರ.   ಉಪ್ಪಳದಲ್ಲಿ ಹೋಟೆಲ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಬದರುಲ್ ಮುನೀರ್ ಬಾಯಾರು ಬಳಿಯ ಕನ್ಯಾನ ಮಂಡಿಯೂರಿನಲ್ಲಿ ವಾಸಿಸುತ್ತಿದ್ದರು.   ಕಾರು ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು  ಈ ಅಪಘಾತವುಂಟಾಗಿದೆ. ಬದರುಲ್ ಮುನೀರ್ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು.  ಅಪಘಾತ ತಕ್ಷಣ ಅಲ್ಲಿ ಸೇರಿದವರು  ಬದರುಲ್ ಮುನೀರ್‌ರನ್ನು ಕೂಡಲೇ ಮಂಗ …

ಎಣ್ಮಕಜೆ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿ ಕೆ.ಸಿ. ಜಯಶ್ರೀ ನಿಧನ

ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಎಣ್ಮಕಜೆ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿ ಕಾರಡ್ಕ ಶಾಲೆ ಬಳಿಯ ನಿವಾಸಿ ಕೆ.ಸಿ. ಜಯಶ್ರೀ (5೦) ನಿಧನ ಹೊಂದಿದರು. ನಾಟಕ ನಟಿ ಹಾಗೂ ನರ್ತಕಿಯಾಗಿಯೂ ಗುರುತಿಸಿಕೊಂಡಿದ್ದ ಇವರು ನಾಟ್ಯ ತರಬೇತಿ ನೀಡುತ್ತಿದ್ದರು. ವಿವಿಧ ಶಾಲಾ ಕಾಲೇಜು ಕಲೋತ್ಸವಗಳಲ್ಲಿ ಮಕ್ಕಳಿಗೆ ನಾಟ್ಯ ತರಬೇತಿ ನೀಡುತ್ತಿದ್ದರು. ಕೆಲವು ಸಮಯದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಇವರು ಚೇತರಿಸಿಕೊಂಡು ನಂತರ ಸಕ್ರಿಯರಾಗಿದ್ದರು. ಈ ಮಧ್ಯೆ ರೋಗ ಉಲ್ಬಣಗೊಂಡು ನಿಧನ ಸಂಭವಿ ಸಿದೆ. ರಾಮನ್- ಜಾನಕಿ ದಂಪತಿ ಪುತ್ರಿಯಾದ …

ಶಬರಿಮಲೆಯಲ್ಲಿ ಇನ್ನೊಂದು ಭಾರೀ ಅವ್ಯವಹಾರ ಪತ್ತೆ: ಲಕ್ಷಾಂತರ ರೂ. ಸಾಗಾಟ ನಡೆಸಿದ ನೌಕರರು

ಶಬರಿಮಲೆ: ಶಬರಿಮಲೆ ದೇಗುಲ ದಿಂದ ಭಾರೀ ಪ್ರಮಾಣದ ಚಿನ್ನ ಕಳವು ನಡೆಸಿದ ಪ್ರಕರಣದ ತನಿಖೆ ಮುಂದು ವರಿಯುತ್ತಿರುವ ವೇಳೆಯಲ್ಲೇ ಇದೇ ದೇಗುಲದಿಂದ ಲಕ್ಷಾಂತರ ರೂಪಾಯಿ ಗಳನ್ನು ಅನಧಿಕೃತವಾಗ ಸಾಗಿಸಲಾಗಿದೆ ಯೆಂಬ ಕಳವಳಕಾರಿ ಮಾಹಿತಿಯೂ ಈಗ  ಬೆಳಕಿಗೆ ಬಂದಿದೆ. ಶಬರಿಮಲೆ ದೇಗುಲದಲ್ಲಿ ದಿನ ವೇತನ ಆಧಾರದಲ್ಲಿ ನೇಮಿಸಲ್ಪಟ್ಟ ಕೆಲವು ನೌಕರರು ಹಾಗೂ  ಅರ್ಚಕರು ತಮ್ಮ ಬ್ಯಾಂಕ್   ಹಾಗೂ ಅಂಚೆ ಖಾತೆಗಳ ಮೂಲಕ ಊರಲ್ಲಿ ರುವ  ಮನೆಯವರಿಗೆ  ಪ್ರತೀವಾರ 10,೦೦೦ ರೂ.ನಿಂದ 5೦,೦೦೦ ರೂ. ತನಕ ಹಣ ಕಳುಹಿಸಿ ಕೊಟ್ಟಿದ್ದಾರೆಂಬ …

ಶಾರ್ಟ್ ಸರ್ಕ್ಯೂಟ್: ಮೂರು ದ್ವಿಚಕ್ರ ವಾಹನ, ಶೆಡ್ ಸಹಿತ ವಿವಿಧ ಉಪಕರಣಗಳು ಬೆಂಕಿಗಾಹುತಿ

ಉಪ್ಪಳ: ಶಾರ್ಟ್ಸರ್ಕ್ಯೂಟ್ ನಿಂದ ಮೂರು ದ್ವಿಚಕ್ರ ವಾಹನ ಹಾಗೂ ಶೆಡ್ ಸಹಿತ ವಿವಿಧ ಸಾಮಾಗ್ರಿಗಳು ಉರಿದು ನಾಶ ಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಬೊಳಂ ಪಾಡಿ ಬಳಿಯ ಕಯ್ಯಾರು ಕೆಳಗಿನ ಮನೆ ಪ್ರಕಾಶ್ ರೈ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಿನ್ನೆ ಮುಂಜಾನೆ ಪ್ರಕಾಶ್ ರೈ ಯವರು ಹೊರಗಡೆ ಹೋದಾಗ ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಕಂಡು ಬಂದಿದೆ. ಮನೆಯ ಬಳಿಯಲ್ಲೇ ಹೆಂಚು ಹಾಸಿದ ಶೆಡ್ಡ್ ಇದ್ದು, ಇದಕ್ಕೆ ಬೆಂಕಿ ತಗಲಿ ಇದೇ ಪರಿಸರದಲ್ಲಿರಿಸ …

ಪುತ್ರಿಯ ಜೊತೆಗೆ ಆಸ್ಪತ್ರೆಗೆಂದು ತೆರಳಿದ ಯುವತಿ ನಾಪತ್ತೆ

ಕಾಸರಗೋಡು: ಎಂಟು ವರ್ಷ ಪ್ರಾಯದ ಪುತ್ರಿಯನ್ನು ಸೇರಿಸಿಕೊಂಡು ಆಸ್ಪತ್ರೆಗೆ ತೆರಳಿದ್ದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಹೊಸದುರ್ಗ ಕುಶಾಲನಗರ ನಿವಾಸಿ ಆಯಿಷತುಲ್ ಸಫೂರ (32) ಪುತ್ರಿಯೊಂದಿಗೆ ನಾಪತ್ತೆಯಾದ ಯುವತಿ. ತಾಯಿ ಕೆ.ಪಿ. ರಹ್ಮಾಬಿಯವರ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ ಆಯಿಷತುಲ್ ಸಫೂರ ಪುತ್ರಿಯನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ರಾತ್ರಿ ತಡವಾಗಿಯೂ ಹಿಂತಿರುಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರಧಾನಮಂತ್ರಿ ಭೇಟಿಗಾಗಿ ಮಧೂರು, ಬದಿಯಡ್ಕ ಪಂ. ಅಧ್ಯಕ್ಷರು ದೆಹಲಿಗೆ

ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರಮೋದಿ ನೀಡಿದ ಆಹ್ವಾನದಂತೆ  ಮಧೂರು  ಹಾಗೂ ಬದಿಯಡ್ಕ ಪಂಚಾಯತ್‌ಗಳ ಅಧ್ಯಕ್ಷರು  ಸಹಿತ ಹಲವರು ಬಿಜೆಪಿ ನೇತಾರರು ಇಂದು ದೆಹಲಿಗೆ ತೆರಳಿದ್ದಾರೆ.  ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ. ಶಂಕರ, ಮಧೂರು ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಮೀಂಜ ಪಂಚಾಯತ್ ಸದಸ್ಯೆ ಆಶಾಲತಾ ಸಹಿತ ಹಲವರು ದೆಹಲಿಗೆ ತೆರಳಿದರು.  ದೆಹಲಿಯಲ್ಲಿ ಪ್ರಧಾನಮಂತ್ರಿ ಯೊಂದಿಗೆ ಇವರು ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ  ತಮ್ಮ ಪಂಚಾಯತ್‌ಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಯೋಜನೆಗಳ ವರದಿಯನ್ನು  ಪ್ರಧಾನಮಂತ್ರಿಗೆ ಇವರು ಸಲ್ಲಿಸಲಿದ್ದಾರೆ.

ಯುವಕನನ್ನು ತಡೆದು ಕಲ್ಲಿನಿಂದ ಹೊಡೆದು ಗಂಭೀರ ಗಾಯ: 3 ಮಂದಿ ವಿರುದ್ಧ ಕೇಸು

ಮಂಜೇಶ್ವರ: ಯುವಕನನ್ನು ತಡೆದು ಕೈಯಿಂದ, ಕಲ್ಲಿನಿಂದ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬAಧಿಸಿ ಮೂರು ಮಂದಿ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಐಲ ಕಡಪುö್ಪರ ಶಿವಾಜಿನಗರ ಬಳಿಯ ಕುದುಪುಳು ನಿವಾಸಿಯಾದ ಬಿಜೆಪಿ ಹನೀಫ್ ಎಂದೇ ಗುರುತಿಸಿಕೊಂಡಿರುವ ಮೊಹಮ್ಮದ್ ಹನೀಫ್(28) ಎಂಬವರು ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ದೂರಿನಂತೆ ಉಪ್ಪಳ ನಿವಾಸಿಗಳಾದ ಕೌಸರ್, ಅಂಬು ಹಾಗೂ ಅಪರಿಚಿತ ಇನ್ನೋರ್ವ ವ್ಯಕ್ತಿಯ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ …

ಕಾಸರಗೋಡು ಕೇರಳದ ಸೌರಶಕ್ತಿ ಹಬ್ ಆಗಿ ಬದಲಾಗಲಿದೆ, ಪೆರಡಾಲದಲ್ಲಿ 30 ಮೆಘಾವಾಟ್ ಸೌರಸ್ಥಾವರ ನಿರ್ಮಾಣ- ಮುಖ್ಯಮಂತ್ರಿ

ಕಾಸರಗೋಡು: ಕಾಸರಗೋಡು ಜಿಲ್ಲೆ ಕೇರಳದ ಸೌರಶಕ್ತಿಯ ಹಬ್ ಆಗಿ ಬದಲಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪೆರಡಾಲಲ್ಲಿ 30 ಮೆಘಾವಾಟ್ ಮತ್ತು ಚೀಮೇನಿಯಲ್ಲಿ 80 ಮೆಘಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೌರ ಸ್ಥಾವರಗಳ ನಿರ್ಮಾಣ ಕೆಲಸಗಳ ಉದ್ಘಾಟನೆಯನ್ನು ನಿನ್ನೆ ಚೀಮೇನಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ವಹಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ತೋಟಗಾರಿಕಾ ಇಲಾಖೆಗೆ ಸೇರಿದ 300 ಎಕ್ರೆ ಸ್ಥಳಗಳಲ್ಲಾಗಿ   ಈ ಎರಡು ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರನ್ನು ಕೇಂದ್ರವನ್ನಾಗಿ ಕಾರ್ಯವೆಸಗುತ್ತಿರುವ ನ್ಯಾಚುರಲ್ ಎನರ್ಜಿ ಪ್ರೈವೆಟ್ ಲಿಮಿಟೆಡ್‌ಗೆ ಈ …