ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಹೋಟೆಲ್ ನೌಕರ ಮೃತ್ಯು

ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಹೋಟೆಲ್ ನೌಕರನಾದ ಯುವಕ ಮೃತಪಟ್ಟಿದ್ದಾರ.  ಉಪ್ಪಳ ಪಚ್ಚಂಬಳ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ   ಬದರುಲ್ ಮುನೀರ್ (38) ಮೃತಪಟ್ಟ ದುರ್ದೈವಿಯಾಗಿದ್ದಾರ.   ಉಪ್ಪಳದಲ್ಲಿ ಹೋಟೆಲ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಬದರುಲ್ ಮುನೀರ್ ಬಾಯಾರು ಬಳಿಯ ಕನ್ಯಾನ ಮಂಡಿಯೂರಿನಲ್ಲಿ ವಾಸಿಸುತ್ತಿದ್ದರು.   ಕಾರು ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು  ಈ ಅಪಘಾತವುಂಟಾಗಿದೆ. ಬದರುಲ್ ಮುನೀರ್ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು.  ಅಪಘಾತ ತಕ್ಷಣ ಅಲ್ಲಿ ಸೇರಿದವರು  ಬದರುಲ್ ಮುನೀರ್‌ರನ್ನು ಕೂಡಲೇ ಮಂಗ ಲ್ಪಾಡಿ ಆಸ್ಪತ್ರೆಗೂ ಬಳಿಕ ಮಂಗಳೂ ರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ಮರಿಯುಮ್ಮ, ಮೂವರು ಹೆಣ್ಣುಮಕ್ಕಳ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page