ಶುಚಿತ್ವ-ಮಹತ್ವ: ಕುಂಬಳೆಯಲ್ಲಿ ಮಿನಿ ಎಂಸಿಎಫ್ ಬಳಿಯಲ್ಲೇ ತ್ಯಾಜ್ಯರಾಶಿಯಿಂದ ದುರ್ನಾತ; ಪಾದಚಾರಿಗಳಿಗೆ ನಾಯಿಗಳ ದಾಳಿ ಭೀತಿ
ಕುಂಬಳೆ: ಸರಕಾರದ ಶುಚಿತ್ವ-ಮಹತ್ವ ಎಂಬ ಗುರಿಯೊಂದಿಗೆ ಕುಂಬಳೆ ಪಂಚಾಯತ್‌ನ ವಿವಿಧೆಡೆಗ ಳಲ್ಲಿ ಸ್ಥಾಪಿಸಿದ ಮಿನಿ ಎಂಸಿಎಫ್‌ಗ ಳಿಂದಾಗಿ ಸಾರ್ವಜನಿಕರಿಗೆ ದಾರಿಯ ಲ್ಲಿ ನಡೆದು ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಈ ಭೂಮಿಯಿಂದ ಇಲ್ಲದಾಗಿಸುವ ಗುರಿಯೊಂದಿಗೆ ಪಂಚಾಯತ್‌ಗಳ ಪ್ರಧಾನ ಸ್ಥಳಗಳಲ್ಲಿ ಮಿನಿ ಎಂಸಿಎಫ್‌ಗಳನ್ನು ಸ್ಥಾಪಿಸಲಾಗಿದೆ. ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಉತ್ಪನ್ನಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಈ ಮಿನಿ ಎಂಸಿಎಫ್‌ನೊಳಗೆ ಇರಿಸಲಾಗುತ್ತಿದೆ. ಇದೇ ವೇಳೆ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ಮನೆಗಳ ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ …