ಬೆಂಗಳೂರು ಕೃಷ್ಣರಾಜಪುರದಲ್ಲಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ ನೂತನ ಶೋರೂಂ ಉದ್ಘಾಟನೆ

 . ಕಾಸರಗೋಡು: ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ 25ನೇ ಶೋರೂಂ ಹಾಗೂ ಬೆಂಗಳೂರು ನಗರದ 8ನೇ ಶೋರೂಂ ಕೃಷ್ಣರಾಜಪುರದಲ್ಲಿ ನಟಿ ನಿಕ್ಕಿ ಗಲ್‌ರಾಣಿ ಉದ್ಘಾಟಿಸಿದರು. ಈ ಶೋರೂಂನಲ್ಲಿ ಚಿನ್ನ, ಡೈಮಂಡ್, ಪ್ಲಾಟಿನಂ, ಪೋಲ್ಕಿ, ಅನ್‌ಕಟ್ ಡೈಮಂಡ್, ಪ್ರೀಶ್ಯಸ್, ಬೆಳ್ಳಿ ಆಭರಣ ಗಳು ಎಂಬಿವುಗಳ ವಿಪುಲ ಸಂಗ್ರಹ ಸಿದ್ಧಪಡಿಸಲಾಗಿದೆ ಎಂದು ಮೆನೇಜಿಂಗ್ ಡೈರೆಕ್ಟರ್ ಅಬ್ದುಲ್ ರೌಫ್ ತಿಳಿಸಿದ್ದಾರೆ. ಗ್ರಾಹಕರ ವಿಶ್ವಾಸ ಕಂಪೆನಿಯ ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ಪ್ರತೀ ಆಭರ ಣಕ್ಕೂ ಅಂತಾರಾಷ್ಟ್ರೀಯ ಗುಣಮಟ್ಟ ವಿರುವ ಸರ್ಟಿಫಿಕೇಶನ್ ಖಚಿತಪಡಿಸ ಲಾಗುತ್ತಿದೆ …

ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರ ನವರಾತ್ರಿ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಲ್ಲಿ ಶ್ರೀ ನಿತ್ಯಾನಂದ ಸ್ವಾಮಿಯ 66ನೇ ಸಮಾಧಿ ವಾರ್ಷಿಕ, ಗುರುಪೂಜೆ ಇತ್ತೀಚೆಗೆ ನಡೆದಿದ್ದು, ಈ ವೇಳೆ ಈ ವರ್ಷದ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಜರಗಿತು. ಕ್ಷೇತ್ರದ ಅಧ್ಯಕ್ಷ ಸಿ.ವಿ. ಪೊದು ವಾಳ್ ಅಧ್ಯಕ್ಷತೆ ವಹಿಸಿದ್ದು, ಮಾಜಿ ಅಧ್ಯಕ್ಷ ಯು.ಎಸ್. ಬಾಲನ್ ಉದ್ಘಾಟಿಸಿದರು. ಡಾ. ಭರತನ್, ಕೆ.ಎನ್. ವೇಣುಗೋಪಾಲ್, ಯಶೋಧ ಚಂದ್ರನ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ. ಸುಜಿತ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಕೆ. ಮನೋಜ್ ಕುಮಾರ್ ವಂದಿಸಿದರು. …

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಾಧಕಾಭಿವಂದನಂ ಅಭಿಯಾನಕ್ಕೆ ಚಾಲನೆ

ಬದಿಯಡ್ಕ: ಸೇವಾ ಕ್ಷೇತ್ರದ ಸಾಧನೆ ಹಾಗೂ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ೫೦ ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಕಿನ್ನಿಂಗಾರು ವಸಂತ್ ಶೆಣೈ- ಸುಧಾ ವಿ. ಶೆಣೈ ದಂಪತಿಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ನಿನ್ನೆ ಅವರ ಮನೆಯಲ್ಲಿ ಗೌರವಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ಯುವವರನ್ನು ಅಭಿನಂದಿಸುವ ಅಕಾಡೆಮಿಯ ಸರಣಿ ಕಾರ್ಯಕ್ರಮಕ್ಕೆ ಈ ವೇಳೆ ಚಾಲನೆ ನೀಡಲಾಯಿತು. ನಿವೃತ್ತ ತಹಶೀಲ್ದಾರ್ ನಾರಾಯಣ ಗೋಸಾಡ ಉದ್ಘಾಟಿಸಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕುಂಜಾರು ಮೊಹಮ್ಮದ್ ಹಾಜಿ …

ವಿ.ಡಿ. ಸತೀಶನ್‌ರ ಆಡಳಿತ ಬ್ರಿಟೀಷರನ್ನು  ನೆನಪಿಸುವ ರೀತಿಯಲ್ಲಿದೆ-ಪಿ.ಕೆ. ಕೃಷ್ಣದಾಸ್

ಕುಂಬಳೆ: ವಂದೇ ಮಾತರಂನಂತಹ ರಾಷ್ಟ್ರೀಯ ಭಾವೈಕ್ಯತಾ ಗೀತೆಯನ್ನು, ಅದನ್ನು ಆಲಾಪಿಸುವುದಕ್ಕೆ ನಿಷೇಧ ಏರ್ಪಡಿಸಿದ ರಾಜ್ಯದ ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಆಡಳಿತ ಭಾರತದ ವಿಭಜನೆ ಕಾಲದಲ್ಲಿನ ಬ್ರಿಟೀಷ್ ಆಡಳಿತವನ್ನು ನೆನಪಿಸುವಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ನುಡಿದರು. ರಾಷ್ಟ್ರ ಸ್ವಾಭಿಮಾನ್ ಸಮಿತಿಯ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ತಿರಂಗ ಯಾತ್ರ ಉದ್ಘಾಟಿಸಿ ಅವರು ಮಾತನಾಡಿದರು. ಜವಹಾರ್‌ಲಾಲ್ ನೆಹರು, ಪಿ.ಸಿ. ಜೋಶಿ, ಮುಹಮ್ಮದಲಿ ಜಿನ್ನಾ ಭಾರತದ ವಿಭಜನೆಗೆ ನೇತೃತ್ವ ನೀಡಿದವರಾಗಿದ್ದಾರೆ. ೮೦ …

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ನಾಟಿವೈದ್ಯ ನಿಧನ

ಪೆರ್ಲ: ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯ, ನಾಟಿ ವೈದ್ಯ ಗೋಪಾಲಕೃಷ್ಣ ಭಟ್ ನೀಲಗಿರಿ (88) ನಿಧನ ಹೊಂದಿದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಸರಸ್ವತಿ, ಮಕ್ಕಳಾದ ವಿಜಯಲಕ್ಷ್ಮಿ ಬದಿಯಡ್ಕ, ಡಾ. ಶ್ಯಾಮಸುಂದರ ಬೇಳ, ರಾಜಶೇಖರ ಭಟ್, ಸೊಸೆಯಂದಿರಾದ ಸಾವಿತ್ರಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಂದೇ ಮಾತರಂ ಗೀತೆಯನ್ನು ವಿರೋಧಿಸುವುದು ಮುಂದಿನ ವಿಭಜನೆಗೆ ಬೀಜ ಬಿತ್ತುವಂತದ್ದು-ಪಿ.ಕೆ. ಕೃಷ್ಣದಾಸ್

ಕಾಸರಗೋಡು: ವಂದೇ ಮಾತರಂ ರಾಷ್ಟ್ರೀಯ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲವೆಂದು ಹೇಳುವ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇತೃತ್ವದ ಸರಕಾರದ ನಿಲುವು ದೇಶದ ಐಕ್ಯತೆಗೆ ಬೆದರಿಕೆಯಾಗಿದೆ. ಮಾತ್ರವಲ್ಲದೆ ಇದು ಮುಂದಿನ ವಿಭಜನೆಗೆ  ಬೀಜ ಬಿತ್ತುವಂತದ್ದಾಗಿದೆಯೆಂದು   ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ    ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್  ತಿಳಿಸಿದ್ದಾರೆ. ಬಿಜೆಪಿ  ಜಿಲ್ಲಾ ಕಚೇರಿಯಲ್ಲಿ  ಇಂದು ಬೆಳಿಗ್ಗೆ ಅವರು ಪತ್ರಕರ್ತರೊಂದಿಗೆ  ಮಾತನಾಡುತ್ತಿದ್ದರು. ಭಾರತವನ್ನು ಇಬ್ಬಾಗವಾಗಿ ಹಾಗೂ ಹದಿನೇಳಾಗಿ ವಿಭಜಿಸಬೇಕೆಂದು ಆಗ್ರಹಿಸಿದ್ದ ಮುಸ್ಲಿಂ ಲೀಗ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ವಂದೇ ಮಾತರಂನ್ನು ವಿರೋಧಿಸುವ ನಿಲುವು ತಳೆದಿರುವು …

ನಾಪತ್ತೆಯಾದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಕೂಡ್ಲು ಆರ್.ಡಿ.ನಗರ ಬಳಿ ನಡೆದಿದೆ. ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಳಿಯ ನಿವಾಸಿ ದಿ| ಮಾಧವ- ಲಕ್ಷ್ಮಿ ದಂಪತಿ ಪುತ್ರ ವಿನಾಯಕ ಕೆ. (25) ಸಾವನ್ನಪ್ಪಿದ ಯುವಕ. ಕೂಲಿ ಕಾರ್ಮಿಕನಾಗಿರುವ ವಿನಾಯಕ ಕೂಡ್ಲು ಗೋಪಾಲಕೃಷ್ಣ ದೇವಸ್ಥಾನ ಪರಿಸರದ ಖಾಸಗಿ ತೋಟದಲ್ಲಿ ರವಿವಾರ ಕೆಲಸಕ್ಕೆಂದು ಹೋಗಿದ್ದರು. ಅನಂತರ ಅವರು ಮನೆಗೆ ಹಿಂತಿರುಗಿರಲಿಲ್ಲ. ಆ ಬಗ್ಗೆ ಮನೆಯವರು ಕಾಸರಗೋಡು ಪೊಲೀಸರಿಗೂ ಮಾಹಿತಿ ನೀಡಿದ್ದರು. ಈ ಮಧ್ಯೆ ವಿನಾಯಕ ಕೆಲಸ ಮಾಡುತ್ತಿದ್ದ …

ವ್ಯಕ್ತಿ ಮನೆಯ ಸಿಟೌಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ:  ವ್ಯಕ್ತಿಯೊಬ್ಬರು ಮನೆಯ ಸಿಟೌಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಾಡಮನೆ ಬಳಿಯ ಮಾಡತ್ತಡ್ಕ ನಿವಾಸಿ ದಿ| ಗೋವಿಂದ ನಾಯ್ಕ-ಪರಮೇಶ್ವರಿ ದಂಪತಿಯ ಪುತ್ರ ನಾರಾಯಣ ನಾಯ್ಕ (54) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಸಂಜೆ ಮನೆಯ ಸಿಟೌಟ್‌ನಲ್ಲಿ ಇವರ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಘಟನೆ  ವೇಳೆ ಮನೆಯಲ್ಲಿ ಇವರು ಮಾತ್ರವೇ ಇದ್ದರೆನ್ನಲಾಗುತ್ತಿದೆ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ತಿರುಮಲೇಶ್ವರಿ, ಮಕ್ಕಳಾದ ಮಿಥುನ್‌ರಾಜ್, ಹರ್ಷಿತಾ,ಸಹೋದರಿ ಗೌರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ಲಕ್ಷ್ಮಿ …

ಮೊಬೈಲ್‌ಗೇಮ್ ಚಟ: ತಂದೆಯ ವಿರೋಧ ಹಿನ್ನೆಲೆಯಲ್ಲಿ ಕಾಶಿಗೆ ತೆರಳುವುದಾಗಿ ಪತ್ರ ಬರೆದಿಟ್ಟು ಮನೆ ತೊರೆದ ಬಾಲಕ

ಕಣ್ಣೂರು: ಮೊಬೈಲ್‌ಗೇಮ್  ಆಡುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಮನನೊಂದು 17ರ ಹರೆಯದ ಬಾಲಕ ಮನೆ ಬಿಟ್ಟು ತೆರಳಿದ್ದಾನೆ. ಪ್ಲಸ್ ಟು ವಿದ್ಯಾರ್ಥಿ ಶಿವಸೂರ್ಯ ನಾಪತ್ತೆಯಾದ ವಿದ್ಯಾರ್ಥಿ. ಚೊಕ್ಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತನಿಖೆ ಆರಂಭಿಸಲಾಗಿದೆ. ಆಗಸ್ಟ್ ೮ರಿಂದ ಬಾಲಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮೊಬೈಲ್‌ಗೇಮ್ ಆಡುವುದು ನಿತ್ಯ ಹವ್ಯಾಸವನ್ನಾಗಿ ಮಾಡಿಕೊಂಡಿದ್ದ ಈತನಿಂದ ತಂದೆ ಫೋನ್ ಪಡೆದು ತೆಗೆದಿರಿಸಿದ್ದರು. ಆನ್‌ಲೈನ್ ಗೇಮ್‌ಗಳನ್ನು ಈತ ಖಾಯಂ ಆಗಿ ಆಡುತ್ತಿದ್ದನೆನ್ನಲಾಗಿದೆ. ಇದರಿಂದ ಮನೆಮಂದಿಗೆ ಹಲವು ಸಮಸ್ಯೆಗಳು ಸೃಷ್ಟಿಯಾಗಿತ್ತು. ಗೇಮ್ ಮೂಲಕ ಈತನಿಗೆ ತುಂಬಾ ಹಣ …

ಪ್ರತಿಭಟನೆ: ಬಿಜೆಪಿ ಜಿಲ್ಲಾಧ್ಯಕ್ಷೆ ಸೇರಿ 10 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಕುಂಬಳೆ ಜಿಎಚ್‌ಎಸ್‌ಎಸ್‌ನಲ್ಲಿ ನಿನ್ನೆ ಶಿಕ್ಷಣ ಸಚಿವರ ಎನ್. ಶಂಸುದ್ದೀನ್ ಭಾಗವಹಿಸಿದ  ಕಾರ್ಯಕ್ರಮದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸೇರಿದಂತೆ ಹತ್ತು ಮಂದಿ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಜಿಲ್ಲಾಧ್ಯಕ್ಷೆಯ ಹೊರತಾಗಿ ಬಿಜೆಪಿ ಇತರ ನೇತಾರರಾದ ಪಿ.ಆರ್. ಸುನಿಲ್, ಅಶ್ವಿನಿ, ಅಜಿ ಕುಮಾರ್, ಸಂದೀಪ್, ವಿಕ್ರಂ ಪೈ ಹಾಗೂ  ಇತರ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಚಿವರು ಭಾಗವಹಿಸಿದ ಈ ಕಾರ್ಯ ಕ್ರಮ ನಡೆಯುತ್ತಿದ್ದ ಶಾಲೆಯ ಪ್ರವೇಶದ್ವಾರದತ್ತ ಪ್ರತಿಭಟನಾ …