ಬಸ್ ಪ್ರಯಾಣ ಮಧ್ಯೆ 14ರ ವಿದ್ಯಾರ್ಥಿನಿಗೆ ಉಪಟಳ: ಮಧ್ಯವಯಸ್ಕನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಬಸ್ ಪ್ರಯಾಣ ಮಧ್ಯೆ 14ರ ಹರೆಯದ ವಿದ್ಯಾರ್ಥಿನಿಗೆ ಉಪಟಳ ನೀಡಿರುವುದಾಗಿ ದೂರಲಾಗಿದೆ. ಶಾಲಾ ಅಧಿಕಾರಿಗಳು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಬೇಡಡ್ಕ ಪೊಲೀಸರು ಪೋಕ್ಸೋ ಪ್ರಕರಣದಂತೆ ಕೇಸು ದಾಖಲಿಸಿದ್ದಾರೆ. ನಿನ್ನೆ ಘಟನೆ ನಡೆದಿದೆ. ಖಾಸಗಿ ಬಸ್‌ನಲ್ಲಿ ಬಾಲಕಿ ಪ್ರಯಾಣಿಸುತ್ತಿದ್ದಾಗ ಮಧ್ಯವಯಸ್ಕನಾದ ಓರ್ವ ಬಾಲಕಿಯ ಸಮೀಪದಲ್ಲಿ ಕುಳಿತುಕೊಂಡು ಉಪಟಳ ನೀಡಿರುವುದಾಗಿ ಹೇಳಲಾ ಗಿದೆ. ಭಯದಿಂದ ಬಾಲಕಿ ಈ ವಿಷವನ್ನು ಯಾರಲ್ಲೂ ಹೇಳಿರಲಿಲ್ಲ. ಈ ಮಧ್ಯೆ ಉಪಟಳ ನೀಡಿದ ವ್ಯಕ್ತಿ ಇಳಿದು ಹೋಗಿದ್ದು, ಬಾಲಕಿ ಶಾಲೆಗೆ ತಲುಪಿದ ಬಳಿಕ ಅಧ್ಯಾಪಿಕೆಯರೊಂದಿಗೆ ಈ ವಿಷಯವನ್ನು ತಿಳಿಸಿದ್ದಳು. ಬಳಿಕ ಶಾಲಾ ಅಧಿಕಾರಿಗಳು ಬೇಡಡ್ಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಹಿಳಾ ಪೊಲೀಸರ ಉಪಸ್ಥಿತಿಯಲ್ಲಿ ಬಾಲಕಿಯಿಂದ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದ ಬಳಿಕ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಮಧ್ಯವಯಸ್ಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

RELATED NEWS

You cannot copy contents of this page