ಕೊರಕೋಡಿನಲ್ಲಿ 15ರ ಹರೆಯದ ಬಾಲಕ ಸೇರಿದಂತೆ ಆರು ಮಂದಿಗೆ ಇರಿದ ಪ್ರಕರಣ: ಕೊಲೆಯತ್ನ ಪ್ರಕರಣ ದಾಖಲು; ನಾಲ್ವರ ಬಂಧನ
ಕಾಸರಗೋಡು: ಒಂದೇ ಕುಟುಂಬಕ್ಕೆ ಸೇರಿದ ೧೫ರ ಹರೆಯದ ಬಾಲಕ ಸೇರಿದಂತೆ ಆರು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಾಸರಗೋಡು ಕೊರಕೋಡು ನಿವಾಸಿಗಳಾದ ಇಮ್ರಾನ್, ತಳಂಗರೆ ಬಾಂಗೋಡಿನ ಸನಾಫ್, ಕೊರಕೋಡಿನ ಅಹಮ್ಮದ್ ಮತ್ತು ಬಾಂಗೋಡನ ಬಾಸಿತ್ ಬಂಧಿತ ಆರೋಪಿಗಳು. ಇವರ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕೊರಕೋಡು ಬಿಲಾಲ್ ಮಸೀದಿ ಬಳಿಯ ಜಾಫರ್ ಸಾಧಿಕ್ (23), 15 ವರ್ಷದ ಸಹೋದರ …