ನೀರು ದುರುಪಯೋಗಪಡಿಸದಂತೆ ತಿಳಿಸಿದ ಗೃಹಿಣಿಗೆ ನೆರೆಮನೆ ನಿವಾಸಿಗಳಿಂದ ಹಲ್ಲೆ

ಕುಂಬಳೆ: ಕುಡಿಯುವ ನೀರು ದುರುಪಯೋಗಪಡಿಸಬೇಡಿ ಎಂದು ಬುದ್ಧ್ದಿಮಾತು ಹೇಳಿದ ಗೃಹಿಣಿ ಹಾಗೂ ಅವರ ಮಗಳಿಗೆ ನೆರೆಮನೆ ನಿವಾಸಿಗಳಾದ ಮೂರು ಮಂದಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಪೈವಳಿಕೆ ಆಜಾದ್‌ನಗರದ ದಿ| ಐತ್ತ ಎಂಬವರ ಪತ್ನಿ  ಶಾರದ (60) ಹಾಗೂ ಪುತ್ರಿ ಶ್ರೀಜರಿಗೆ ಹಲ್ಲೆಗೈದಿದ್ದು,  ಈ  ಪೈಕಿ ಶಾರದರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ. ನೆರೆ ಮನೆ ನಿವಾಸಿಗಳಾದ ಲೀಲ, ಚಂದ್ರ,ಸಜನ್ ಎಂಬಿವರು ಸೇರಿ ಹಲ್ಲೆಗೈದಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.  ನಿನ್ನೆ ಸಂಜೆ ಈ ಘಟನೆ ನಡೆದಿದೆ. ಪೈವಳಿಕೆ ಆಜಾದ್‌ನಗರದಲ್ಲಿ …

ಸಮಸ್ತ ಕೇರಳ ಜಂಇಯತ್ತುಲ್ ಉಲಮಾದ ನೂರನೇ ವಾರ್ಷಿಕಾಚರಣೆ ಸಮಾಪ್ತಿ: ಸಂಘಟನೆಯ ಶಕ್ತಿ ಪ್ರಕಟ- ಜಿಫ್ರಿತಂಙಳ್

ಕಾಸರಗೋಡು: ಕೇರಳದ ಉತ್ತರ ಭಾಗದಲ್ಲಿ ಜನಸಂದಣಿಯ ಹಾಲ್ಗಡಲು ಸೃಷ್ಟಿಸಿ ಸಮಸ್ತ ಕೇರಳ ಜಂಇಯತ್ತುಲ್ ಉಲಮ ಸಂಘಟನೆಯ ಶಕ್ತಿ ಹಾಗೂ ಸಾಮರ್ಥ್ಯವನ್ನು ಕೇರಳದ ಜನತೆಗೆ ದೃಢೀಕರಿಸಿದೆ. ೫ ದಿನಗಳಲ್ಲಾಗಿ ನಡೆದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದ ಸಮಾರೋಪ ಆದಿತ್ಯವಾರ ನಡೆಯಿತು. ಆದಿತ್ಯವಾರ ಸಂಜೆ 4 ಗಂಟೆಯ ಬಳಿಕ ಆರಂಭಗೊಂಡ ಸಾರ್ವಜನಿಕ ಸಮ್ಮೇಳನ ಸೂರ್ಯಾಸ್ತವರೆಗೆ  ಮುಂದುವರಿಯಿತು. ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಪಾಣಕ್ಕಾಡ್ ಸಾದಿಖಲಿ ಶಿಹಾಬ್ ತಂಙಳ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿಪಕ್ಷ ಮುಖಂಡ ವಿ.ಡಿ. ಸತೀಶನ್, ಕರ್ನಾಟಕ ಉಪ ಮುಖ್ಯಮಂತ್ರಿ …

ಸಂತೋಷ್ ಟ್ರೋಫಿ ಕ್ರೀಡಾಪಟು ದಿಲ್ಶಾದ್‌ಗೆ ಸ್ವಾಗತ

ಮೊಗ್ರಾಲ್: ಕೇರಳ ತಂಡಕ್ಕೆ ಬೇಕಾಗಿ ಜರ್ಸಿ ಧರಿಸಿದ ಜಿಲ್ಲೆಯ ಸಂತೋಷ್ ಟ್ರೋಫಿ ಕ್ರೀಡಾಪಟು ಅಬೂಬಕ್ಕರ್ ದಿಲ್ಶಾದ್ ಇಂದು ಊರಿಗೆ ತಲುಪುವರು. ಮಧ್ಯಾಹ್ನ ವಂದೇಭಾರತ್‌ನಲ್ಲಿ ಕಾಸರಗೋಡಿಗೆ ತಲುಪುವ ಇವರಿಗೆ ರೈಲು ನಿಲ್ದಾಣದಲ್ಲಿ ಮೊಗ್ರಾಲ್ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಸ್ಥಳೀಯರು ಸ್ವಾಗತ ನೀಡುವರು. ಬಳಿಕ ಮೊಗ್ರಾಲ್ ಲೀಗ್ ಕಚೇರಿ ಪರಿಸರದಿಂದ ಮೊಗ್ರಾಲ್ ಪೇಟೆಗೆ ಮೆರವಣಿಗೆ ಮೂಲಕ ಕರೆದೊಯ್ಯಲಾಗುವುದು.

ಲೈಫ್ ವಸತಿ ಯೋಜನೆ ಬುಡಮೇಲುಗೊಳಿಸುವುದಾಗಿ ಆರೋಪಿಸಿ ಸಿಪಿಎಂ ಪೈವಳಿಕೆ ಪಂ. ಮಾರ್ಚ್, ಧರಣಿ

ಪೈವಳಿಕೆ: ಪಂಚಾಯತ್ ಆಡಳಿತ ನಡೆಸುವ ಬಿಜೆಪಿ, ಐಕ್ಯರಂಗ ಮೈತ್ರಿ ಕೂಟ ಕೇರಳ ಸರಕಾರ ನೀಡುವ ಲೈಫ್ ವಸತಿ ಯೋಜನೆಯಲ್ಲಿ ಪೂರ್ಣ ಮೊತ್ತವನ್ನು ಫಲಾನುಭವಿಗಳಿಗೆ ನೀಡಲು ಸರಕಾರ ವಿತರಿಸಿದರೂ ಅದನ್ನು ಪಂಚಾಯತ್‌ನಲ್ಲಿ ಕಾರ್ಯಗತಗೊಳಿ ಸುವ ಅಧಿಕಾರಿ ತನ್ನ ಖಾತೆಯಲ್ಲಿರಿಸಿ ಕೊಂಡು ಫಲಾನುಭವಿಗಳನ್ನು ಸತಾಯಿ ಸುತ್ತಿರುವುದಾಗಿ ಸಿಪಿಎಂ ಪೈವಳಿಕೆ ಪಂಚಾಯತ್ ಸಮಿತಿ ಆರೋಪಿಸಿದೆ. ಈ ವಿಷಯವನ್ನು ಮುಂದಿಟ್ಟು ಪಂ ಚಾಯತ್ ಕಚೇರಿ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು. ಫಲಾನುಭವಿ ಗಳು ಕಷ್ಟ ಅನುಭವಿಸುತ್ತಿದ್ದರೂ ಪಂಚಾಯತ್ ಆಡಳಿತ ಸಮಿತಿ ಮೌನ ವಹಿಸಿದೆ. …

ಮಂಡಿಯೂರಿದ ಪಾಕಿಸ್ತಾನ: ಭಾರತದ ಜೊತೆ ಪಂದ್ಯವಾಡಲು ಒಪ್ಪಿಗೆ

ನವದೆಹಲಿ: ಟಿ೨೦ ವಿಶ್ವಕಪ್ 2026ರಲ್ಲಿ ಭಾರತದ ಜೊತೆಗೆ ಆಡುವುದಿಲ್ಲವೆಂದು ಹೇಳಿದ್ದ ಪಾಕಿಸ್ತಾನ ಐಸಿಸಿ ನೀಡಿದ ಖಡಕ್ ನಿರ್ದೇಶದಿಂದಾಗಿ ಕೊನೆಗೂ ಮಂಡಿಯೂರಿ ಭಾರತದ ಜತೆಗಿನ ಪಂದ್ಯ ಆಡುವುದಾಗಿ ಘೋಷಿಸಿದೆ.  ಇದರಿಂದಾಗಿ ಭಾರತ-ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ದಾರಿ ಸುಗಮಗೊಂಡಿದೆ. ಮಾತ್ರವಲ್ಲ  ಈ ಎರಡು  ತಂಡಗಳ ನಡುವಿನ ಟಿ20 ವಿಶ್ವಕಪ್ 2026 ಪಂದ್ಯಗಳು ನಿಗದಿಯಂತೆ ನಡೆಯಲಿದೆ. ಬಾಂಗ್ಲಾ ದೇಶವನ್ನು ಬೆಂಬಲಿಸಿ ಪಾಕಿಸ್ತಾನ ಭಾರತದೊಂದಿಗಿನ ಪಂದ್ಯಗಳನ್ನು ಬಹಿಷ್ಕರಿಸಲು ಫೆ. 1ರಂದು ತೀರ್ಮಾನಿಸಿತ್ತು. ಕೊನೆಗೆ ಆ ನಿಲುವಿನಲ್ಲಿ ಸಡಿಲಿಕೆ ತಂದ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಸಂಪೂರ್ಣ …

49 ಗ್ರಾಂ ಎಂಡಿಎಂಎ ಪತ್ತೆ: ಕಾರು ಸಹಿತ ಯುವಕ ಸೆರೆ

ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 49.14 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ  ಯುವಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಳ ಕೊಲ್ಲಂಗಾನದ ಮೊಹ ಮ್ಮದ್ ರಫೀಕ್.ಬಿ (39) ಬಂಧಿತ ಆರೋಪಿ.  ಕಾಸರಗೋಡು ಪೊಲೀಸ್ ಠಾಣೆ ಎಸ್‌ಐ ಸಿ.ಆರ್. ಮೌಶಿಮ್ ನೇತೃತ್ವದ ಪೊಲೀಸರ ತಂಡ ವಿದ್ಯಾನಗರ ಸರಕಾರಿ ಕಾಲೇಜು ಬಳಿ   ನಿನ್ನೆ ಸಂಜೆ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಬಂದ   ಸ್ವಿಫ್ಟ್ ಕಾರನ್ನು ತಡೆದು …

ಎರಿಯಾಕೋಟ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವಕ್ಕೆ ವ್ಯಾಪಾರಿ ವ್ಯವಸಾಯಿ ಸಮಿತಿಯಿಂದ ಹಸಿರುವಾಣಿ ಸಮರ್ಪಣೆ

ಮೊಗ್ರಾಲ್ ಪುತ್ತೂರು: ಕಾವುಗೋಳಿ ಚೌಕಿ ಎರಿಯಾಕೋಟ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದಂಗವಾಗಿ  ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ   ಸಮಿತಿ  ಮೊಗ್ರಾಲ್ ಪುತ್ತೂರು ಘಟಕ ತರಕಾರಿ ಹಾಗೂ ಧಾನ್ಯಗಳನ್ನು ನೀಡಿತು.  ಕ್ಷೇತ್ರ ಪದಾಧಿಕಾರಿಗಳು ವ್ಯಾಪಾರಿಗಳಿಗೆ ಸ್ವಾಗತ ನೀಡಿದರು. ವ್ಯಾಪಾರಿ ವ್ಯವಸಾಯಿ ಸಮಿತಿ ಜಿಲ್ಲಾ ಜೊತೆ ಕಾರ್ಯದರ್ಶಿ ರಿಯಾಸ್ ಚೌಕಿ, ಲೇಬರ್ ಡಿಪಾರ್ಟ್‌ಮೆಂಟ್ ಆಫೀಸರ್ ಅಬ್ದುಲ್ ಸಲಾಂ, ಏರಿಯಾ ಕಾರ್ಯದರ್ಶಿ  ಪ್ರಕಾಶನ್,  ಮರ್ಕಂಟೈಲ್ ಸೊಸೈಟಿ ಕಾರ್ಯದರ್ಶಿ ಕುಂಞಿರಾಮನ್,ವ್ಯಾಪಾರಿ ವ್ಯವಸಾಯಿ ಸಮಿತಿ ಘಟಕ ಅಧ್ಯಕ್ಷ ವಿಜಯನ್, ಮಹಿಳಾ ವಿಂಗ್ ಕಾರ್ಯದರ್ಶಿ ಜಾನಕಿ, …

ಕೊಲ್ಲಂಗಾನ ಸಂತ ಥೋಮಸ್ ಚರ್ಚ್‌ನಲ್ಲಿ ಕ್ಯಾನ್ಸರ್ ಜಾಗೃತಿ, ತಪಾಸಣಾ ಶಿಬಿರ

ಮಾನ್ಯ: ಕೊಲ್ಲಂಗಾನ ಸಂತ ಥೋಮಸ್ ಚರ್ಚ್‌ನಲ್ಲಿ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರ ನಡೆಸಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು, ಇಂಡ್ಯನ್ ಕ್ಯಾನ್ಸರ್ ಸೊಸೈಟಿ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಹಲವು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿದರು. ಡಾ| ಕುಮಾರ್ ಎಸ್. ವಶಿಷ್ಠ, ಡಾ| ಆಯಿಷಾ ರೋಗಿಗಳ ತಪಾಸಣೆ ನಡೆಸಿದರು. ವಿಷ್ಣುಪ್ರಸಾದ್ ಐ, ಆಸ್ಪತ್ರೆಯ ಸಿಬ್ಬಂದಿವರ್ಗದವರು ಉಪ ಸ್ಥಿತರಿದ್ದರು. ಫಾ| ರಿತೇಶ್ ಎ.ಎಲ್. ರೋಡ್ರಿಗಸ್ ಮಾತನಾಡಿದರು.

ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಹೋಟೆಲ್ ನೌಕರ ಮೃತ್ಯು

ಕುಂಬಳೆ: ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಹೋಟೆಲ್ ನೌಕರನಾದ ಯುವಕ ಮೃತಪಟ್ಟಿದ್ದಾರ.  ಉಪ್ಪಳ ಪಚ್ಚಂಬಳ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ   ಬದರುಲ್ ಮುನೀರ್ (38) ಮೃತಪಟ್ಟ ದುರ್ದೈವಿಯಾಗಿದ್ದಾರ.   ಉಪ್ಪಳದಲ್ಲಿ ಹೋಟೆಲ್ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಬದರುಲ್ ಮುನೀರ್ ಬಾಯಾರು ಬಳಿಯ ಕನ್ಯಾನ ಮಂಡಿಯೂರಿನಲ್ಲಿ ವಾಸಿಸುತ್ತಿದ್ದರು.   ಕಾರು ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು  ಈ ಅಪಘಾತವುಂಟಾಗಿದೆ. ಬದರುಲ್ ಮುನೀರ್ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು.  ಅಪಘಾತ ತಕ್ಷಣ ಅಲ್ಲಿ ಸೇರಿದವರು  ಬದರುಲ್ ಮುನೀರ್‌ರನ್ನು ಕೂಡಲೇ ಮಂಗ …

ಎಣ್ಮಕಜೆ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿ ಕೆ.ಸಿ. ಜಯಶ್ರೀ ನಿಧನ

ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಎಣ್ಮಕಜೆ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿ ಕಾರಡ್ಕ ಶಾಲೆ ಬಳಿಯ ನಿವಾಸಿ ಕೆ.ಸಿ. ಜಯಶ್ರೀ (5೦) ನಿಧನ ಹೊಂದಿದರು. ನಾಟಕ ನಟಿ ಹಾಗೂ ನರ್ತಕಿಯಾಗಿಯೂ ಗುರುತಿಸಿಕೊಂಡಿದ್ದ ಇವರು ನಾಟ್ಯ ತರಬೇತಿ ನೀಡುತ್ತಿದ್ದರು. ವಿವಿಧ ಶಾಲಾ ಕಾಲೇಜು ಕಲೋತ್ಸವಗಳಲ್ಲಿ ಮಕ್ಕಳಿಗೆ ನಾಟ್ಯ ತರಬೇತಿ ನೀಡುತ್ತಿದ್ದರು. ಕೆಲವು ಸಮಯದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಇವರು ಚೇತರಿಸಿಕೊಂಡು ನಂತರ ಸಕ್ರಿಯರಾಗಿದ್ದರು. ಈ ಮಧ್ಯೆ ರೋಗ ಉಲ್ಬಣಗೊಂಡು ನಿಧನ ಸಂಭವಿ ಸಿದೆ. ರಾಮನ್- ಜಾನಕಿ ದಂಪತಿ ಪುತ್ರಿಯಾದ …