ಕಾಸರಗೋಡಿಗೆ ಬರುತ್ತಿದ್ದ ಯುವಕ ರೈಲಿನಿಂದ  ಬಿದ್ದು ಮೃತ್ಯು

ಕಾಸರಗೋಡು: ಸಂಚರಿಸುತ್ತಿ ರುವ ರೈಲಿನಿಂದ ಕೆಳಕ್ಕೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ಅಸ್ಸಾಂ ನಿವಾಸಿ ಸುಂದರ್ ಸೋರಾನ್ (33) ಎಂದು ಗುರುತಿಸಲಾಗಿದೆ. ತೃಕರಿಪುರ ರಾಮವಿಲ್ಯಂ ಕಳಗದ ಬಳಿಯ ರೈಲು ಹಳಿಯಲ್ಲಿ ಈತನ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದೆ. ಈತ ಧರಿಸಿದ ಶರ್ಟ್‌ನ ಜೇಬಿನಲ್ಲಿ ಪಾಲ ಕ್ಕಾಡ್‌ನಿಂದ ಕಾಸರಗೋಡಿಗೆ ತೆಗೆದ ರೈಲ್ವೇ ಟಿಕೆಟ್  ಪತ್ತೆಯಾಗಿದೆ.  ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.  ಘಟನೆ ಬಗ್ಗೆ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕ್ಷೇತ್ರ ವಾದ್ಯ ಕಲಾವಿದ ನಿಧನ

ಕಾಸರಗೋಡು: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಕ್ಷೇತ್ರ ವಾದ್ಯ ಕಲಾವಿದ ಮೃತಪಟ್ಟರು.  ಪುಲ್ಲೂರು ವಿಷ್ಣುಮಂಗಲ ನಿವಾಸಿಕೆ. ನಂದಕುಮಾರ್ ಮಾರಾರ್ (46) ಮೃತ ವ್ಯಕ್ತಿ.  ಚಿಕಿತ್ಸೆ ಮಧ್ಯೆ ನಿನ್ನೆ ರಾತ್ರಿ ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಯಲ್ಲಿ ನಿಧನ ಸಂಭವಿಸಿದೆ.  ಇವರು ಕಳೆದ ೨೫ ವರ್ಷಗಳಿಂದ ಕ್ಷೇತ್ರ ವಾದ್ಯ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದರು. ಗೋಪಾಲನ್ ಮಾರಾರ್-ದಿ| ಕಾರ್ತ್ಯಾಯಿನಿ ಮಾರಸ್ಯಾರ್  ದಂಪತಿ ಪುತ್ರನಾದ ಮೃತರು ಸಹೋದರಿ ಯರಾದ ಇಂದುಮತಿ, ರಜನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

ನೆಲ್ಲಿಕುಂಜೆ ಕಡಪ್ಪುರ-ಚೀರುಂಬಾ ರಸ್ತೆಯಲ್ಲಿ ಹೊಂಡಗಳು: ಜನಸಂಚಾರಕ್ಕೆ ಸಂಕಷ್ಟ; ದುರಸ್ತಿಗೆ ಹಣ ಮಂಜೂರಾದರೂ ಕಾಮಗಾರಿ ಆರಂಭಗೊಂಡಿಲ್ಲ

ಕಾಸರಗೋಡು: ನೆಲ್ಲಿಕುಂಜೆ ಕಡಪ್ಪುರ  ಫಿರ್ದೋಸ್ ನಗರ ಜಂಕ್ಷನ್‌ನಿಂದ ಚೀರುಂಬಾ ರಸ್ತೆ ಹೊಂಡಗಳಿಂದ ತುಂಬಿಕೊಂಡು ಶೋಚನೀಯಾವಸ್ಥೆಯಲ್ಲಿದ್ದು ಜನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ರಸ್ತೆಯಲ್ಲಿ  ಬೃಹತ್ ಹೊಂಡ ಗಳು ಸೃಷ್ಟಿಯಾಗಿದ್ದು, ಅದರಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿದೆ. ಇದರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ಪ್ರಯಾಣಿ ಕರು ಗಾಯಗೊಳ್ಳುವ ಘಟನೆ ಪದೇ ಪದೇ ಸಂಭವಿಸುತ್ತಿದೆ. ನಗರಸಭಾ ಚೆಯರ್‌ಮೆನ್ ಪ್ರತಿನಿಧೀಕರಿಸುವ ವಾರ್ಡ್‌ನಲ್ಲಿ ಈ ರಸ್ತೆಯಿದ್ದರೂ ದುರಸ್ತಿಗೆ ಕ್ರಮ ಉಂಟಾಗಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ. …

ಜೈಲಿಗೂ ಮಾದಕ ದ್ರವ್ಯ ಪೂರೈಸುವ ತಂಡ ರಾಜ್ಯದಲ್ಲಿ ಸಕ್ರಿಯ: ಓರ್ವ ಸೆರೆ; ಇಬ್ಬರು ಪರಾರಿ

ಕಾಸರಗೋಡು: ರಾಜ್ಯದಲ್ಲಿ ಜೈಲುಗಳಿಗೂ ಮಾದಕದ್ರವ್ಯ ಪೂರೈಸುವ ತಂಡ ಸಕ್ರಿಯವಾಗಿ ಕಾರ್ಯವೆಸಗುತ್ತಿದೆ. ಹೀಗೆ ಕಣ್ಣೂರು ಸೆಂಟ್ರಲ್ ಜೈಲಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಪುದಿಯಪೆರು ಪನಯಂಕಾವು ಕೂಂಬನ್ ಹೌಸಿನ ಕೆ.ಅಕ್ಷಯ್ (27) ಬಂಧಿತ ವ್ಯಕ್ತಿ. ಆತನ ಜೊತೆಗಿದ್ದ ಇದೇ ತಂಡದ ಇಬ್ಬರು  ಆ ವೇಳೆ ಪರಾರಿಯಾಗಿದ್ದಾರೆ. ಜೈಲಿನಲ್ಲಿ ಕಳೆಯುತ್ತಿರುವ ಖೈದಿಗಳಿಗೆ ಮಾದಕ ದ್ರವ್ಯ, ಮೊಬೈಲ್ ಫೋನ್, ಬೀಡಿ, ಸಿಗರೇಟ್ ಇತ್ಯಾದಿಗಳನ್ನು ಪೂರೈಸುವ ತಂಡವಾಗಿದೆ ಇದು. ಮಾದಕದ್ರವ್ಯ ವ್ಯಸನಿಗಳಾದ ಖೈದಿಗಳು ಮಾದಕ ದ್ರವ್ಯದ ಅಗತ್ಯವಿದ್ದಲ್ಲಿ ಅದನ್ನು …

ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿಯಲ್ಲಿ ಟೋಲ್ ಬೂತ್: ಕ್ರಿಯಾ ಸಮಿತಿಯಿಂದ ಪ್ರತಿಭಟನೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಟೋಲ್ ಬೂತ್ ನಿರ್ಮಿಸುವುದರ ವಿರುದ್ಧ ಕ್ರಿಯಾ ಸಮಿತಿ ಮಾರ್ಚ್ ನಡೆಸಿತು. ಕುಂಬಳೆ -ಬದಿಯಡ್ಕ ರಸ್ತೆಯಿಂದ ಆರಂಭಿಸಿದ ಬಹುಜನ ಮಾರ್ಚನ್ನು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಉದ್ಘಾಟಿಸಿದರು. ರಘುದೇವನ್ ಮಾಸ್ತರ್, ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಂಬಳೆ ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಮೊದಲಾದವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಸಂಚಾರಕ್ಕೆ ತಡೆ ಸೃಷ್ಟಿಸಿರುವುದಕ್ಕೆ ಮುಷ್ಕರ ಸಮಿತಿ ಮುಖಂಡರು, ವಿವಿಧ ಪಕ್ಷಗಳ ಪದಾಧಿಕಾರಿಗಳು ಸಹಿತ ೧೦ ಮಂದಿ ವಿರುದ್ಧ ಪೊಲೀಸರು …

ಧರ್ಮಸ್ಥಳ ಕ್ಷೇತ್ರ ಭಕ್ತವೃಂದ ನೇತೃತ್ವದಲ್ಲಿ ನಗರದಲ್ಲಿ ಪಂಜಿನ ಮೆರವಣಿಗೆ

ಕಾಸರಗೋಡು: ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವಿಧ್ವಂ ಸಕ ಚಟುವಟಿಕೆಗಳ ವಿರುದ್ಧವಾಗಿ ಧರ್ಮಸ್ಥಳ ಕ್ಷೇತ್ರ ಭಕ್ತವೃಂದ, ಕಾಸರಗೋಡು ಇವರ ನೇತೃತ್ವದಲ್ಲಿ ನಿನ್ನೆ ಸಂಜೆ ಕಾಸರಗೋಡು ನಗರದಲ್ಲಿ ಪಂಜಿನ ಮೆರವಣಿಗೆ ಜರುಗಿತು.ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳ ಮೂಲಕ ಸಾಗಿದಾಗ ನೂರಾರು ಭಕ್ತರು, ಯುವಕರು ಹಾಗೂ ಸಾರ್ವಜನಿಕರು ದೀಪಗಳೊಂದಿಗೆ ಭಾಗವಹಿಸಿ ಸಮಗ್ರ ಏಕತೆ ಹಾಗೂ ಭಕ್ತಿ ಭಾವವನ್ನು ತೋರಿಸಿದರು.ಸಮಾರೋಪ ಸಮಾರಂಭದಲ್ಲಿ ವಿವಿಧ ಸಂಘಟನೆಗಳ ಗಣ್ಯರು ಉಪಸ್ಥಿತರಿದ್ದರು. ಹಿಂದು ಐಕ್ಯ ವೇದಿಯ ಜಿಲ್ಲಾಧ್ಯಕ್ಷ ಎಸ್. ಪಿ. ಶಾಜಿ, …

ನ್ಯಾಯಾಲಯದ ಪರಿಗಣನೆಯಲ್ಲಿರುವ ಪ್ರಕರಣದಲ್ಲಿ ದೂರುದಾರನನ್ನು ಠಾಣೆಗೆ ಕರೆಸಿ ಅವಹೇಳನ, ಬೆದರಿಕೆ: ಮುಖ್ಯಮಂತ್ರಿಗೆ ದೂರು

ಕುಂಬಳೆ: ದೂರುದಾರನನ್ನು ಠಾಣೆಗೆ ಕರೆಸಿ ಪ್ರತಿ ದೂರುದಾರನ ಮುಂದೆ ಇನ್ಸ್‌ಪೆಕ್ಟರ್ ಆಕ್ಷೇಪಿಸಿ ಬೆದರಿಸಿರುವು ದಾಗಿ ಖ್ಯಾತ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತನಾದ ಬಿ. ವಿಕ್ರಮ್ ಪೈ ಮುಖ್ಯಮಂತ್ರಿ, ಡಿಜಿಪಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಿಲೆನ್ಸ್ ಡಿವೈಎಸ್‌ಪಿ, ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಎಂಬಿ ವರಿಗೆ ದೂರು ನೀಡಿದ್ದಾರೆ. ರಾಜ್ಯದ ಕಾನೂನು ವ್ಯವಸ್ಥೆಯನ್ನು ಸಾಮಾನ್ಯ ಜನರನ್ನು ಬೆದರಿಸುವುದಕ್ಕಿರುವ ಮಾರ್ಗವನ್ನಾಗಿ ಕಂಡುಕೊಳ್ಳುವ ಕಾನೂನುಪಾಲಕರನ್ನು  ಮಾದರಿಯಾಗಿ ಶಿಕ್ಷಿಸಬೇಕೆಂದು ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ. ಕುಂಬಳೆ ರಘುನಾಥ ಕೃಪಾದ ಬಿ. ವಿಕ್ರಮ್ ಪೈ ಹಾಗೂ …

ಕಾಸರಗೋಡು ಹೊಸ ಬಸ್ ನಿಲ್ದಾಣದ ಶೋಚನೀಯಾವಸ್ಥೆ ವಿರುದ್ಧ ಬಸ್ ಮಾಲಕರು, ನೌಕರರಿಂದ ಧರಣಿ

ಕಾಸರಗೋಡು: ಹೊಸ ಬಸ್ ನಿಲ್ದಾಣದ ಶೋಚನೀಯಾವಸ್ಥೆ ವಿರುದ್ಧ ಬಸ್ ಮಾಲಕರು, ನೌಕರರು ಜಂಟಿಯಾಗಿ ಮುಷ್ಕರ ಸಮಿತಿ ನೇತೃತ್ವದಲ್ಲಿ ಸಂಜೆ ಧರಣಿ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಟಿ.ಕೆ. ರಾಜನ್ ಉದ್ಘಾಟಿಸಿದರು. ಬೀದಿ ವ್ಯಾಪಾರಿಗಳನ್ನು ಪುನರುದ್ಧರಿ ಸಲು ನಿರ್ಮಿಸಿದ ಅಂಗಡಿ ಕೊಠಡಿಗಳ ಮುಂಭಾಗದಲ್ಲಿ ಸಂರಕ್ಷಣೆ ಬೇಲಿ ನಿರ್ಮಿಸಬೇಕು, ಬಸ್‌ಗಳಿಗೆ ಪಾರ್ಕ್ ಮಾಡಲು ಅಗತ್ಯದ ಸೌಕರ್ಯ ಏರ್ಪಡಿಸಬೇಕು, ಪ್ರಯಾಣಿಕರಿಗೆ ಉಪಕಾರಪ್ರದವಾಗುವ ಇನ್‌ಫರ್ಮೇ ಶನ್ ಸೆಂಟರ್ ಪುನರ್ ಸ್ಥಾಪಿಸಬೇಕು, ಲಗೇಜ್‌ಗಳನ್ನು ಇರಿಸಲಿರುವ ಕ್ಲೋಕ್ ರೂಂ ಪುನರ್‌ಸ್ಥಾಪಿಸಬೇಕು, ಮಹಿಳೆ ಯರಿಗಿರುವ ವಿಶ್ರಾಂತಿ ಕೇಂದ್ರವನ್ನು …

ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವಾರ್ಷಿಕ ಮಹಾಸಭೆ, ಧನ ಸಹಾಯ ವಿತರಣೆ 31ರಂದು

ಮಂಜೇಶ್ವರ: ಮಂಜೇಶ್ವರ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವಾರ್ಷಿಕ ಮಹಾಸಭೆ ಮತ್ತು ಮೃತಪಟ್ಟ ವ್ಯಾಪಾರಿಗಳ ಕುಟುಂಬಕ್ಕೆ ಧನ ಸಹಾಯ ವಿತರಣೆ ಈ ತಿಂಗಳ 31ರಂದು ಬೆಳಿಗ್ಗೆ 10 ಗಂಟೆಗೆ ಹೊಸಂಗಡಿ ವ್ಯಾಪಾರ ಭವನದಲ್ಲಿ ನಡೆಯಲಿದೆ. ಆಶ್ರಯ ಯೋಜನೆಯಲ್ಲಿ ಮೃತಪಟ್ಟ ವ್ಯಾಪಾರಿಗಳ ಕುಟುಂಬಕ್ಕೆ 4 ಲಕ್ಷ ರೂ.ನಂತೆ ಎರಡು ಕುಟುಂಬಗಳಿಗೆ ಶಾಸಕ ಎ.ಕೆ.ಎಂ. ಅಶ್ರಫ್ ಧನ ಸಹಾಯ ವಿತರಿಸುವರು. ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವ್ಯಾಪಾರಿಗಳ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಅಧ್ಯಕ್ಷ …

ವಾಟರ್ ಅಥಾರಿಟಿಯಲ್ಲಿ ಅನಧಿಕೃತ ನೇಮಕಾತಿ ರದ್ದುಗೊಳಿಸಬೇಕು-ಬಿ.ಎಂ.ಎಸ್

ಕಾಸರಗೋಡು: ಕೇರಳ ವಾಟರ್ ಅಥಾರಿಟಿ ಕಾಸರಗೋಡು ಸೆಕ್ಷನ್ ನಲ್ಲಿ ಆಪರೇಟರ್‌ಗಳ ಜನರಲ್ ಟ್ರಾನ್ಸ್‌ಫರ್‌ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ನಡೆಸಿದ ಅನಧಿಕೃತ ನೇಮಕಾತಿ ರದ್ದುಗೊಳಿ ಸಬೇಕೆಂದು ಒತ್ತಾಯಿಸಿ ಕೇರಳ ವಾಟರ್ ಅಥಾರಿಟಿ ಎಂಪ್ಲಾಯೀಸ್ ಸಂಘ್ (ಬಿಎಂಎಸ್) ಧರಣಿ ನಡೆಸಿತು.  ವರ್ಗಾವಣೆಗೊಂಡು ಬರುವ ನೌಕರರಿಗೆ ಮೇಜರ್ ಸ್ಕೀಮ್‌ಗಳಲ್ಲ್ಲಿ ನೇಮಕಾತಿ ನೀಡದೆ ಬಾಹ್ಯ ಒತ್ತಡಗಳಿಗೆ ಮಣಿದು ನ್ಯಾಯ ನಿಷೇಧಿಸುತ್ತಿರುವುದಾಗಿ ನೇತಾರರು ಆರೋಪಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಎಂಪ್ಲಾಯೀಸ್ ಸಂಘ್ ಜಿಲ್ಲಾಧ್ಯಕ್ಷ ಶಾಜಿ ಎಂ.ವಿ ಅಧಕ್ಷತೆ ವಹಿಸಿದರು.  ರಾಜ್ಯ ಉಪಾಧ್ಯಕ್ಷ …