ತೆಂಗಿನ ಮರವೇರುವ ಕಾರ್ಮಿಕರ ಕ್ಷಾಮ: ಕೃಷಿಕರು ಸಂದಿಗ್ಧತೆಯಲ್ಲಿ
ಕಾಸರಗೋಡು: ತೆಂಗಿನ ಮರವೇರುವ ಕಾರ್ಮಿಕರ ಕ್ಷಾಮದಿಂದಾಗಿ ತೆಂಗು ಕೃಷಿಕರು ಭಾರೀ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದೆ. ಮರದಲ್ಲಿರುವ ತೆಂಗಿನಕಾಯಿ ಕೊಯ್ಯಲು ಕಾರ್ಮಿಕರನ್ನು ಹುಡುಕಿಕೊಂಡು ಕೃಷಿಕರು ಅಲೆದಾಡಬೇಕಾದ ಸ್ಥಿತಿ ಉಂಟಾಗಿದೆ. ಕಾರ್ಮಿಕರು ಸಿಕ್ಕಿದರೂ ಪ್ರತೀಯೊಂದು ಮರದಿಂದ ಲಭಿಸುವ ತೆಂಗಿನಕಾಯಿಯ ಬೆಲೆಗಿಂತ ಹೆಚ್ಚು ಮೊತ್ತವನ್ನು ಹಲವರು ವೇತನವಾಗಿ ಕೇಳುತ್ತಿದ್ದಾರೆ. ಹಸಿ ತೆಂಗಿನಕಾಯಿಗೆ ಉತ್ತಮ ಬೆಲೆ ಲಭಿಸುವ ಸಂದರ್ಭದಲ್ಲಿ ತೆಂಗಿನಮರವೇರಲು ಕಾರ್ಮಿಕರು ಸಿಗದಿರುವುದು ಕೃಷಿಕರನ್ನು ತೀವ್ರ ಸಮಸ್ಯೆಯಲ್ಲಿ ಸಿಲುಕಿಸಿದೆ. ಹಸಿ ತೆಂಗಿನಕಾಯಿ ಕೊಯ್ಯಬೇಕಾದ ಸಮಯದಲ್ಲಿ ಮರವೇರುವ ಕಾರ್ಮಿಕರು ಸಿಗದಿರುವುದರಿಂದ ಮರಗಳಲ್ಲೇ ಕಾಯಿ ಒಣಗಿ …
Read more “ತೆಂಗಿನ ಮರವೇರುವ ಕಾರ್ಮಿಕರ ಕ್ಷಾಮ: ಕೃಷಿಕರು ಸಂದಿಗ್ಧತೆಯಲ್ಲಿ”