ಶಬರಿಮಲೆ ಚಿನ್ನ ಕಳವು: ಆರೋಪಿಗೆ ನಿರೀಕ್ಷಣಾ ಜಾಮೀನು ನಕಾರ: ‘ದೇವರನ್ನಾದರೂ ನಿಮಗೆ ಸುಮ್ಮನೆ ಬಿಡಬಾರದೇ’-ಸುಪ್ರೀಂಕೋರ್ಟ್
ನವದೆಹಲಿ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಆರೋಪಿಗಳಲ್ಲೋರ್ವನಾದ ತಿರುವಿದಾಂಕೂರು ಮುಜರಾಯಿ ಮಂಡಳಿಯ ಮಾಜಿ ಸದಸ್ಯ ಕೆ.ಪಿ. ಶಂಕರದಾಸ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ದೀಪಾಂ ಕರ್ ದತ್ತ ಮತ್ತು ಎಸ್.ಸಿ. ಶರ್ಮಾರ ನ್ನೊಳಗೊಂಡ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ವಜಾಗೈದು ನಿರೀಕ್ಷಣಾ ಜಾಮೀನು ನಿರಾಕರಿಸಿ ತೀರ್ಪು ನೀಡಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ನನ್ನ ಬಗ್ಗೆ ಕೇರಳ ಹೈಕೋರ್ಟ್ ನಡೆಸಿರುವ ಪರಾಮರ್ಶೆಗಳನ್ನು ಅದರ ಕಡತಗಳಿಂದ ಹೊರತುಪಡಿಸಬೇಕೆಂಬ ಶಂಕರ್‌ದಾಸ್ ರ ಬೇಡಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿದೆ …