ಆಟೋ ಚಾಲಕ ನಿಧನ

ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ಆಟೋ ಚಾಲಕರಾಗಿದ್ದ ವಳಮಲೆ ನಿವಾಸಿ ಸುನಿ ಯಾನೆ ಸುರೇಶ್ ರೈ (43) ನಿಧನಹೊಂದಿದರು. ಸಕ್ರಿಯ ಸಂಘ ಪರಿವಾರ ಕಾರ್ಯಕರ್ತರಾ ಗಿದ್ದರು. ಮೊನ್ನೆ ರಾತ್ರಿ ಇವರು ಊಟಮಾಡಿ ಮಲಗಿದ್ದು ನಿನ್ನೆ ಬೆಳಿಗ್ಗೆ ಏಳದ ಹಿನ್ನೆಲೆಯಲ್ಲಿ ನೋಡಿದಾಗ  ಮೃತಪಟ್ಟಿರು ವುದು ತಿಳಿದುಬಂದಿದೆ. ಕೂಡಲೇ ಬದಿಯಡ್ಕದ ಆಸ್ಪತ್ರೆಗೆ ಕೊಂಡೊಯ್ದು ಮರಣ ದೃಢೀಕರಿಸ ಲಾಗಿದೆ.  ದಿ| ರಾಧಾಕೃಷ್ಣ ರೈಯವರ ಪುತ್ರನಾದ ಇವರು ಅವಿವಾಹಿತ ರಾಗಿದ್ದರು. ಮೃತರು ತಾಯಿ  ಚಂದ್ರಾವತಿ, ಸಹೋದರ ಪ್ರಸನ್ನ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page