ಹೊಸಂಗಡಿಯಲ್ಲಿ ಆಟೋ ಚಾಲಕರ ನಿಲ್ದಾಣ ಶಾಸಕರಿಂದ ಉದ್ಘಾಟನೆ

ಮಂಜೇಶ್ವರ: ಹೊಸಂಗಡಿಯಲ್ಲಿ ರಿಕ್ಷಾ ಚಾಲಕರು ಮತ್ತು ಮಾಲಕರು ಸುಮಾರು ೪.೫೦ ಲಕ್ಷ ವೆಚ್ಚ ಮಾಡಿ ನಿರ್ಮಿಸಿದ ಆಟೋ ಫ್ರೆಂಡ್ಸ್ ಹೊಸಂ ಗಡಿ ಎಂಬ ಹೆಸರಿನ ಆಟೋರಿಕ್ಷಾ ನಿಲ್ದಾಣವನ್ನು ನಿನ್ನೆ ಉದ್ಘಾಟಿಸಲಾ ಯಿತು. ಹೊಸಂಗಡಿ ಪೇಟೆಯ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾ ಗಿರುವ ಈ ನಿಲ್ದಾಣವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಶುಭ ಹಾರೈಸಿದರು. ಹಿರಿಯ ಆಟೋ ಚಾಲಕ ಶ್ರೀಧರ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಹಿರಿಯ ಆಟೋ ಚಾಲಕರನ್ನು ಅಭಿನಂದಿಸಲಾ ಯಿತು. ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ, ವಾರ್ಡ್ ಪ್ರತಿನಿಧಿ ಸಿದ್ದಿಕ್ ಕಜೆ, ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಎಐಟಿಯುಸಿ ಜಿಲ್ಲಾಧ್ಯಕ್ಷ ಮುಸ್ತಫ ಎಂ.ಡಿ. ಕಡಂಬಾರ್, ಎಸ್‌ಟಿಯು ರಾಜ್ಯ ಕಾರ್ಯದರ್ಶಿ ಶರೀಫ್ ಕೊಡವಂಜಿ, ಎಸ್‌ಡಿಟಿಯುನ ಇಕ್ಬಾಲ್ ಹೊಸಂಗಡಿ, ಸಾಮಾಜಿಕ ಕಾರ್ಯಕರ್ತ ಸತೀಶ್ ಅಡಪ ಸಂಕಬೈಲು, ಹಮೀದ್ ಹೊಸಂಗಡಿ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕದ ಅಧ್ಯಕ್ಷ ಬಶೀರ್ ಕನಿಲ, ಭಾಸ್ಕರ ಬಿ.ಎಂ. ಉಪಸ್ಥಿತರಿದ್ದರು.

೧೦೨ ಆಟೋಚಾಲಕರು ಹಾಗೂ ಪಂ. ಅಧ್ಯಕ್ಷ, ಜನಪ್ರತಿನಿಧಿಗಳ ಸಹಕಾರದಿಂದ ಆಟೋರಿಕ್ಷಾ ನಿಲ್ದಾಣವನ್ನು ನಿರ್ಮಿಸಲಾಗಿದೆ ಎಂದು ಚಾಲಕರು ತಿಳಿಸಿದ್ದಾರೆ. ಮುಸ್ತಫ ಎಂ.ಡಿ. ಕಡಂಬಾರ್ ಸ್ವಾಗತಿಸಿ, ರಿಕ್ಷಾಚಾಲಕ ನಿಸಾರ್ ಎನ್.ಎಸ್. ನಿರೂಪಿಸಿದರು. ಮೊಯ್ದೀನ್ ಮೂಡಂಬೈಲು ವಂದಿಸಿದರು. ಸಿಹಿ ಹಂಚಲಾಯಿತು.

You cannot copy contents of this page