ಬದಿಯಡ್ಕ : ಕೆ.ವಿ.ವಿ.ಇ.ಎಸ್ ಬದಿಯಡ್ಕ ಘಟಕದ ಆಶ್ರಯದಲ್ಲಿ ನೂತನ ಮಹಿಳಾ ವಿಂಗ್ ಹಾಗೂ ಯೂತ್ ವಿಂಗ್ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಸಮನ್ವಯ ಸಮಿತಿಗೆ ಬೆನ್ನೆಲುಬಾಗಿ ಕಾರ್ಯನಿರ್ವ ಹಿಸಲು ಈ ಎರಡೂ ಸಮಿತಿಗಳಿಗೆ ಸಾಧ್ಯವಾಗಲಿ ಎಂದು ಜಿಲ್ಲಾ ಕಾರ್ಯ ದರ್ಶಿ ಕುಂಜಾರ್ ಮುಹಮ್ಮದ್ ಕುಂಞÂ ಹಾಜಿ ಅಭಿನಂದನಾ ಉದ್ಘಾಟಿಸಿ ಶುಭ ಹಾರೈಸಿದರು.
ಘಟಕದ ಅಧ್ಯಕ್ಷ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ ಸ್ವಾಗತಿಸಿದರು. ಕೋಶಾಧಿಕಾರಿ ಜ್ಞಾನದೇವ ಶೆಣೈ, ಉಪಾಧ್ಯಕ್ಷ ರಾಜು ಸ್ಟೀಫನ್, ಕಾರ್ಯದರ್ಶಿ ಉದಯಶಂಕರ್, ಯೂತ್ ವಿಂಗ್ ಅಧ್ಯಕ್ಷ ಶಾಹಿದ್, ಮಹಿಳಾ ವಿಂಗ್ ಅಧ್ಯಕ್ಷ ಜಯಂತಿ ಎನ್ ಚೆಟ್ಟಿಯಾರ್ ಮಾತನಾಡಿದರು. ಅಖಿಲೇಶ್ ನಗುಮುಗಂ ವಂದಿಸಿದರು.





