ಮಜೀರ್‌ಪಳ್ಳ: ವರ್ಕಾಡಿ ಪಂಚಾ ಯತ್‌ನಲ್ಲಿ ಆಶಾ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅವ್ಯವಹಾರ ಹಾಗೂ ಸ್ವಜನ ಪಕ್ಷಪಾತ ನಡೆಯುತ್ತಿದ್ದು ಬಿಜೆಪಿ ಕಾನೂನು ಕ್ರಮಕ್ಕೆ ಮುಂದಾಗಿದೆ. ಸರಕಾರದ ಆದೇಶ ಪ್ರಕಾರ ನೂತನ ಎರಡು ವಾರ್ಡ್ಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರೋಗ್ಯಾಧಿಕಾರಿ ಹಾಗೂ ಪಂಚಾಯತ್ ಪ್ಯಾನಲ್ ನಡೆಸಬೇಕು. ಆದರೆ ಪಂಚಾಯತ್‌ನಲ್ಲಿ ಆಶಾ ಕಾರ್ಯಕರ್ತೆಯರ ನೇಮಕಾತಿ ಯಲ್ಲಿ ಆಡಳಿತ ಸಮಿತಿ ಸರಕಾರ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿAದ ಬಿಜೆಪಿ ಇದರ ವಿರುದ್ಧ ದೂರು ಸಲ್ಲಿಸಿದೆ. ವಾರ್ಡ್ ೧೬ರಲ್ಲಿನ ಆಶಾ ಕಾರ್ಯಕರ್ತೆ ಹುದ್ದೆಗೆ ಅದೇ ವಾರ್ಡ್ನ ನಿವಾಸಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ, ವಾರ್ಡ್ ೧೬ರ ನಿವಾಸಿಯಲ್ಲದ, ವಾರ್ಡ್ ೧೯ರ ನಿವಾಸಿಯಾದ ಮಹಿಳೆಯನ್ನು (ಸ್ಥಳೀಯ ರಾಜಕೀಯ ಪಕ್ಷದ ನೇತಾರೆ) ನೇಮಕ ಮಾಡುವ ನಿರ್ಧಾರವು ಸರಕಾರದ ‘ಜಿ ಓ’ ನಿಯಮಗಳ ಉಲ್ಲಂಘನೆ ಎಂದು ಬಿಜೆಪಿ ಆರೋಪಿಸಿದೆ. ಹೊಸದಾಗಿ ರಚಿಸಲಾದ ವಾರ್ಡ್ಗಳಿಗೆ ಮಾತ್ರ ಹೊಸ ಆಶಾ ಕಾರ್ಯಕರ್ತೆಯರನ್ನು ನೇಮಿಸಬೇಕೆಂಬ ಸರಕಾರದ ನಿರ್ದೇಶದ ವಿರುದ್ಧವಾಗಿದೆ ಇದು.
ಇದಲ್ಲದೆ ವಾರ್ಡ್ ೯ರಲ್ಲಿ ಈಗಾಗಲೇ ಓರ್ವೆ ಆಶಾ ಕಾರ್ಯ ಕರ್ತೆ ಸೇವೆ ಸಲ್ಲಿಸುತ್ತಿದ್ದರೂ, ಅಲ್ಲಿ ಮತ್ತೋರ್ವೆಯನ್ನು ನೇಮಕಾತಿಗಾಗಿ ಸಂದರ್ಶನ ನಡೆಸಿರುವುದನ್ನು ಬಿಜೆಪಿ ವಿರೋಧಿಸಿದೆ. ಪಂಚಾಯತ್ ಸಮಿತಿಯ ಹಾಗೂ ಆರೋಗ್ಯ ಅಧಿಕಾರಿಯ ನಿಯಮ ಬಾಹಿರ, ಸ್ವಜನ ಪಕ್ಷಪಾತಕ್ಕೆ ಸ್ಥಳೀಯ ಕಮ್ಯುನಿಸ್ಟ್ ಬೆಂಬಲ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಲೇವಡಿ ಮಾಡಿದೆ. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಮುಖಂಡರಾದ ಯತಿರಾಜ್ ಶೆಟ್ಟಿ, ತುಳಸಿ ಕುಮಾರಿ, ಚಂದ್ರ ಶೇಖರ, ಆನಂದ ತಚ್ಚಿರೆ, ಭಾಸ್ಕರ ಪೊಯ್ಯೆ, ರವಿರಾಜ್, ಮಮತಾ, ಆರೋಗ್ಯ ಅಧಿಕಾರಿ ಹಾಗೂ ಪಂಚಾಯತ್ ಕಾರ್ಯದರ್ಶಿಗೆ ದೂರು ನೀಡಿದ್ದು, ಮುಂದಿನ ಕಾನೂನು ಹೋರಾಟಕ್ಕೆ ಮುಂದಾಗಿದೆ.






