ಕುಂಬಳೆ: ಇಲ್ಲಿನ ದೇವಿ ನಗರದಲ್ಲಿ ಹಾನಿಗೀಡಾದ ಸರ್ವೀಸ್ ರಸ್ತೆಯನ್ನು ಅಧಿಕಾರಿಗಳು ದುರಸ್ತಿಗೊ ಳಿಸಿದ್ದಾರೆ. ಒಂದು ವಾರ ಹಿಂದೆ ಸರ್ವೀಸ್ ರಸ್ತೆಯ ಚರಂಡಿ ಮೇಲೆ ಸ್ಥಾಪಿಸಿದ್ದ ಸ್ಲ್ಯಾಬ್ ಘನ ವಾಹನ ಸಂಚರಿಸಿ ಹಾನಿಗೀಡಾಗಿತ್ತು. ಇದರಿಂದ ಅಧಿಕಾರಿಗಳು ಅಲ್ಲಿ ಪ್ಲಾಸ್ಟಿಕ್ ಬಾರಿಕೇಡ್‌ಗಳನ್ನು ಇರಿಸಿ ವಾಹನಗಳಿಗೆ ನಿಯಂತ್ರಣ ಏರ್ಪಡಿ ಸಿದ್ದರು. ಇದೇ ವೇಳೆ ದುರಸ್ತಿ ಕಾರ್ಯಗಳನ್ನು ನಡೆಸಿ ಸುಗಮ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿರಲಿಲ್ಲ. ಈ ಬಗ್ಗೆ ‘ಕಾರವಲ್’ ಈ ತಿಂಗಳ ೧೪ರಂದು ವರದಿ ಪ್ರಕಟಿಸಿತ್ತು. ವರದಿ ಗಮನಕ್ಕೆ ಬಂದ ತಕ್ಷಣ ಗುತ್ತಿಗೆ ಕಂಪೆನಿ ಕಾರ್ಮಿಕ ರೊಂದಿಗೆ ತಲುಪಿ ಹಾನಿಗೀಡಾದ ಸ್ಲ್ಯಾಬ್ ತೆರವು ಗೊಳಿದರು. ರಸ್ತೆಯಲ್ಲಿ ಹರಿದು ಹೋಗುವ ನೀರು ಚರಂಡಿಗೆ ಸೇರಲು ರಸ್ತೆಯಲ್ಲಿ ವ್ಯವಸ್ಥೆ ಏರ್ಪಡಿಸಲಾಗಿದೆ. ಅನಂತರ ಪ್ಲಾಸ್ಟಿಕ್ ಬಾರಿಕೇಡ್‌ಗಳನ್ನು ತೆರವುಗೊಳಿಸ ಲಾಯಿತು. ಸ್ಲ್ಯಾಬ್ ಹಾನಿಗೀಡಾಗುವು ದರೊಂದಿಗೆ ಈ ಸ್ಥಳದಲ್ಲಿ ಪ್ರತಿದಿನ ವಾಹನಗಳು ಅಪಘಾತಕ್ಕೀಡಾಗುತ್ತಿದ್ದವು. ಸ್ಲ್ಯಾಬ್ ನಿರ್ಮಾಣದಲ್ಲಿ ಉಂಟಾದ ಅವೈಜ್ಞಾನಿಕ ಕಾಮಗಾರಿಯೇ ಅದು ಹಾನಿಗೀಡಾಗಲು ಕಾರಣವೆಂದು ನಾಗರಿಕರು ಆರೋಪಿಸಿದ್ದರು.







