ಕ್ರೀಡಾ ಪ್ರತಿಭೆಗಳಿಗೆ ಹಸಿರು ಕೋಟೆಗೆ ಸ್ವಾಗತ ಬೋರ್ಡ್ ಕೊನೆಗೂ ತೆರವು

ಕುಂಬಳೆ: ಕುಂಬಳೆ ಉಪಜಿಲ್ಲಾ ಕ್ರೀಡಾ ಮೇಳಕ್ಕೆ ತಲುಪುವ ಕ್ರೀಡಾ ಪ್ರತಿಭೆಗಳಿಗೆ ಹಸಿರು ಕೋಟೆಗೆ ಸ್ವಾಗತ ಕೋರಿ ಯೂತ್ ಲೀಗ್ ಶಾಲಾ ಆವರಣದ ಬಳಿ ಸ್ಥಾಪಿಸಿದ್ದ ಬೃಹತ್ ಫ್ಲೆಕ್ಸ್ ಬೋರ್ಡ್‌ನ್ನು ಪೊಲೀಸರು ಅವರಿಂದಲೇ ತೆರವುಗೊಳಿಸಿದರು.

ಶಾಲೆ, ಪರಿಸರ, ಜಾತಿ, ಮತ, ರಾಜಕೀಯಕ್ಕೆ ಅತೀತವಾಗಿರಬೇಕೆಂದು ಕುಂಬಳೆಯ ಸಮಾಜಸೇವಕ, ಬಿಜೆಪಿ ಮಂಡಲ ಅಧ್ಯಕ್ಷ ವಿಕ್ರಂ ಪೈ ಶಾಲಾ ಮುಖ್ಯೋಪಾಧ್ಯಾಯರಲ್ಲಿ ತಿಳಿಸಿದ ರಾದರೂ ಶಾಲೆಯ ಆವರಣದೊಳಗೆ ಇರಿಸಿದ ಬೋರ್ಡ್ ನಾನು ನೋಡಿಲ್ಲ ಎಂದು ಹೇಳಿರುವುದೇ ವಿವಾದಕ್ಕೆ ಕಾರಣವಾಗಿರುವುದು. ಶಾಲೆಯ ನಿಯಮ, ವ್ಯವಸ್ಥೆಗಳನ್ನು ಪಾಲಿಸಲು ಮುಖ್ಯೋಪಾಧ್ಯಾ ಯರು ಸಿದ್ಧರಾಗದಿದ್ದರೆ ಪ್ರತಿಭಟಿಸುವುದಾಗಿ ಬಿಜೆಪಿ ಎಚ್ಚರಿಸಿತ್ತು. ಆ ಬಳಿಕ ಮುಖ್ಯೋಪಾಧ್ಯಾ ಯರು ತೆರವಿಗೆ ಒಪ್ಪಿದ್ದಾರೆನ್ನಲಾಗಿದೆ. ಈ ಬಗ್ಗೆ ವಿಕ್ರಂ ಪೈ ಪೊಲೀಸರಿಗೂ ದೂರು ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಿನ್ನೆ ಬೋರ್ಡ್  ಸ್ಥಾಪಿಸಿದವರೇ ಬೋರ್ಡ್ ತೆರವುಗೊಳಿಸಬೇಕೆಂದು ಸೂಚಿಸಿದ್ದು, ನಿನ್ನೆ ರಾತ್ರಿ ೯ ಗಂಟೆ ವೇಳೆ ಫ್ಲೆಕ್ಸ್ ಬೋರ್ಡ್ ತೆರವುಗೊಳಿಸಲಾಗಿದೆ. ತಡವಾಗಿಯಾದರೂ ನ್ಯಾಯ ಖಚಿತಪಡಿಸಲು ಮುಂದಾದ ಪೊಲೀಸರನ್ನು ವಿಕ್ರಂ ಪೈ ಹಾಗೂ ಬಿಜೆಪಿ ಕುಂಬಳೆ ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಅಭಿನಂದಿಸಿದರು.

RELATED NEWS

You cannot copy contents of this page