ಪೆರ್ಲ: ಯುಡಿಎಫ್ ಸರಕಾರದ ಪ್ರಥಮ ಬಜೆಟ್‌ನಲ್ಲಿ ಆದಿವಾಸಿ ಪರಿಶಿಷ್ಟ ಪಂಗಡ ವಲಯಗಳಿಗಿರುವ ಮೊತ್ತ ಕಡಿತಗೊಳಿಸಿರುವುದನ್ನು ಪುನರ್ ಪರಿಶೀ ಲಿಸಬೇಕೆಂದು ಪರಿಶಿಷ್ಟ ಪಂಗಡ ಸೌಲಭ್ಯಗಳಿರುವ ಮೊತ್ತ ಸೂಕ್ತ ಸಮಯ ದಲ್ಲಿ ಮಂಜೂರು ಮಾಡಬೇಕೆಂದು ಆದಿವಾಸಿ ಕ್ಷೇಮ ಸಮಿತಿ ಕುಂಬಳೆ ಏರಿಯಾ ಸಮ್ಮೇಳನ ಆಗ್ರಹಿಸಿದೆ. ಪೆರ್ಲ ವ್ಯಾಪಾರಿಭವನದಲ್ಲಿ ನಡೆದ ಸಮ್ಮೇ ಳನವನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅಶೋಕನ್ ಕುನ್ನೂಚಿ ಉದ್ಘಾಟಿಸಿದರು. ಏರಿಯಾ ಅಧ್ಯಕ್ಷ ಚೆನಿಯಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಅಶೋಕ ಸಿ. ಹುತಾತ್ಮ ಠರಾವು, ವಿಜಯಕುಮಾರ್ ಸಂತಾಪ ಠರಾವು ಮಂಡಿಸಿದರು. ಕೆಇಎಎಂ ಪರೀಕ್ಷೆಯಲ್ಲಿ ೧ನೇ ರ‍್ಯಾಂಕ್ ಗಳಿಸಿದ ಹೇಮಂತ್‌ರಾಮ್ ಸಹಿತದ ಶಿಕ್ಷಣ ವಲಯದಲ್ಲೂ, ಇತರ ವಲಯಗಳಲ್ಲೂ ಸಾಧನೆ ಮಾಡಿದವರನ್ನು ಸಮ್ಮೇಳನದಲ್ಲಿ ಅಭಿನಂದಿಸಲಾಯಿತು.
ಜಿಲ್ಲಾ ಕೋಶಾಧಿಕಾರಿ ಪುಷ್ಪ ಎನ್.ಎಂ, ಕೆ. ಬಾಲಕೃಷ್ಣನ್, ಚಂದ್ರ ನಾಯ್ಕ್, ವಿಜಯಕುಮಾರ್, ಸೌಬಾ ಬಿ, ಹನೀಫ್, ಅದಿತಿ ಮಾತನಾಡಿದರು. ಏರಿಯಾ ಕಾರ್ಯದರ್ಶಿ ಶಾರದ ಚಟುವಟಿಕಾ ವರದಿ, ಸ್ವಾಗತ ಸಮಿತಿ ಅಧ್ಯಕ್ಷ ವಿನೋದ್ ವಿ. ಸ್ವಾಗತಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚನಿಯಪ್ಪ ನಾಯ್ಕ್, ಕಾರ್ಯದರ್ಶಿ ಯಾಗಿ ಶಾರದಾ ಕೆ, ಉಪಾಧ್ಯಕ್ಷರಾಗಿ ಅಶೋಕ್ ಸಿ, ವಾಸು ನಾಯ್ಕ್, ಜತೆ ಕಾರ್ಯದರ್ಶಿಗಳಾಗಿ ದೀಕ್ಷಿತ್, ಅದಿತಿ, ಕೋಶಾಧಿಕಾರಿಯಾಗಿ ವಿಜಯಕುಮಾರ್ ಆಯ್ಕೆಯಾದರು.






