ಕಾಸರಗೋಡು: ಖಾಸಗಿ ಬಸ್ ಮಾಲಕರು ಈ ಮೊದಲು ಪ್ರಕಟಿಸಿದ ಕಾಸರಗೋಡು ಹಳೆ ಬಸ್ ನಿಲ್ದಾಣ ಬಹಿಷ್ಕರಣೆಯನ್ನು ಮುಂದೂಡಲಾಗಿದೆ. ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಾಲೂಕು ಪದಾಧಿಕಾರಿಗಳು ಹಾಗೂ ಆರ್ಟಿಒ ಮಧ್ಯೆ ನಡೆದ ಚರ್ಚೆ ಹಿನ್ನೆಲೆಯಲ್ಲಿ ಬಹಿಷ್ಕಾರ ಮುಷ್ಕರವನ್ನು ಮುಂದೂ ಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಸಮಗ್ರ ಸಭೆಯನ್ನು ಕರೆಯಲಿರುವ ಹಿನ್ನೆಲೆಯಲ್ಲಿ ಬಹಿಷ್ಕಾರ ತೀರ್ಮಾನ ಮುಂದೂಡಿರುವು ದಾಗಿಯೂ, ೧೭ರಂದು ಸಭೆ ಸೇರಿ ಪರಿಹಾರ ಕ್ರಮಗಳು ಕೈಗೊಳ್ಳುವುದಾಗಿ ಆರ್ಟಿಒ ತಿಳಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಸ್ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಅವೈಜ್ಞಾನಿಕ, ಕಾನೂನು ವಿರುದ್ಧ ಪಾರ್ಕಿಂಗ್, ಬೀದಿ ಬದಿ ವ್ಯಾಪಾರದಿಂದ ಉಂಟಾಗುವ ಸಾರಿಗೆ ಸಂಚಾರ ಸಮಸ್ಯೆಯಿಂದ ನಗರ ಉಸಿರುಗಟ್ಟುವಾಗ ಖಾಸಗಿ ಬಸ್ಗಳಿಗೆ ಸಮಯಕ್ಕೆ ಸರಿಯಾಗಿ ಸಂಚರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದಿನಿಂದ ಬಸ್ಗಳು ಹಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸುವುದಿಲ್ಲವೆಂದು ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಾಲೂಕು ಮಹಾಸಭೆಯಲ್ಲಿ ತೀರ್ಮಾನಿಸಲಾಗಿತ್ತು.







