ಸಿ.ಕೆ. ಚಿಪ್ಪಾರ್ ಅವರ 15ನೇ ವಾರ್ಷಿಕ ಸಂಸ್ಮರಣೆ

ಪೈವಳಿಕೆ: ಸಿಪಿಐ ಹಿರಿಯ ಮುಂದಾಳು ಹಾಗೂ ಜನಪರ ಹೋರಾಟಗಾರ ಸಿ.ಕೆ. ಚಿಪ್ಪಾರ್ ಅವರ 15ನೇ ವಾರ್ಷಿಕ ಸಂಸ್ಮರಣೆ ಇಂದು ಬೆಳಿಗ್ಗೆ ನಡೆಯಿತು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಅವರು ಮಾತನಾಡಿ ಸಿ.ಕೆ. ಚಿಪ್ಪಾರ್ ಅವರ ಹೋರಾಟಮಯ ಜೀವನ, ಮಾನವೀಯ ಮೌಲ್ಯಗಳು ಹಾಗೂ ಪಕ್ಷದ ಬೆಳವಣಿಗೆಗೆ ಅವರು ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿದರು. ಅವರ ಆದರ್ಶ ಇಂದಿನ ಯುವ ಪೀಳಿಗೆಗೆ ಪ್ರೇರಣೆ ಎಂದು ಅವರು ನುಡಿದರು.

ಸಮದ್ ಬಿ.ಎ. ಅಧ್ಯಕ್ಷತೆ ವಹಿಸಿದರು. ಲಾರೆನ್ಸ್ ಡಿಸೋಜ  ಧ್ವಜಾರೋಹಣ ನೆರವೇರಿಸಿದರು. ಸಿಪಿಐ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಮುಖಂಡರಾದ ಕೇಶವ ಬಾಯಿಕಟ್ಟೆ, ಸುದಾನಂದ ಬಾಯಾರ್, ಚನಿಯ ಕೊಮ್ಮಂಗಳ, ಸಿ.ಕೆ. ಚಿಪ್ಪಾರ್‌ರ ಪತ್ನಿ ಮೀನಾಕ್ಷಿ, ಮಕ್ಕಳಾದ ಅಶೋಕ್ ಎಂ.ಸಿ, ಅಜಿತ್ ಎಂ.ಸಿ, ಅಶ್ವತ್ಥ್ ಪೂಜಾರಿ ಲಾಲ್‌ಬಾಗ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಸಿ.ಕೆ. ಚಿಪ್ಪಾರ್ ಅವರ ಸ್ಮೃತಿ ಮಂಟಪದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು.

RELATED NEWS

You cannot copy contents of this page