ವಿಮಾನ ನಿಲ್ದಾಣದಲ್ಲಿ ಪರಿಚಯಗೊಂಡ ಗೃಹಿಣಿಗೆ ಅತ್ಯಾಚಾರ: ಯುವಕನ ವಿರುದ್ಧ ಕೇಸು ದಾಖಲು

ಕಾಸರಗೋಡು: ದುಬಾ ಗಿರುವ ಪ್ರಯಾಣ ಮಧ್ಯೆ ವಿಮಾನ ನಿಲ್ದಾಣದಲ್ಲಿ ಪರಿಚಯಗೊಂಡ ಗೃಹಿಣಿಯೊಂದಿಗೆ ಸ್ನೇಹ ನಟಿಸಿ ಬಳಿಕ ಆಕೆಗೆ ಅತ್ಯಾಚಾರ ಗೈದು ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕಾಸರಗೋಡು ಮಹಿಳಾ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 32ರ ಹರಯದ ಗೃಹಿಣಿ ನೀಡಿದ ದೂರಿನಂತೆ ಮಲಪ್ಪುರಂ ನಿವಾಸಿಯಾದ ಸೈಫುದ್ದೀನ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಪತಿಯೊಂದಿಗೆ ದುಬಾಯಿಗೆ  ತೆರಳುತ್ತಿರುವ ಮಧ್ಯೆ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ  ಗೃಹಿಣಿಯನ್ನು ಸೈಫುದ್ದೀನ್ ಪರಿಚಯಗೊಂಡಿದ್ದನು. ಅನಂತರ ಅವರಿಬ್ಬರು  ಸೌಹಾದತೆ ಯಲ್ಲಿದ್ದರು. ಈ ಮಧ್ಯೆ ಗೃಹಿಣಿಗೆ ದೌರ್ಜನ್ಯಗೈದಿ ರುವುದಾಗಿ ದೂರಲಾಗಿದೆ. ಅನಂತರ  ಆತ ಬೆದರಿಕೆಯೊಡ್ಡಿದ್ದು ಈ ಹಿನ್ನೆಲೆಯಲ್ಲಿ ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಾಳೆ.

You cannot copy contents of this page