ಡಿ.ಕೆ. ಶಿವಕುಮಾರ್ ಜೂನ್ 3ರಂದು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ

ಬೆಂಗಳೂರು:  ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕು ಮಾರ್ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಜೂನ್ 3ರಂದು ಅಧಿಕಾರ ವಹಿಸಿಕೊಳ್ಳಲಿ ದ್ದಾರೆಂದು ತಿಳಿದುಬಂದಿದೆ.  ಕಳೆದ ಮೂರು ವರ್ಷಗಳಿಂದ ನಡೆದ ತೀವ್ರ ಆಂತರಿಕ ಅಧಿಕಾರ ಹಂಚಿಕೆಯ ಹೋರಾಟದ ಬಳಿಕ ಅವರ ಸಹೋ ದ್ಯೋಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ನಿರ್ಧಾರ ಉಂಟಾಗಿದೆ.

ಇದೇ ವೇಳೆ ಇಂದು ಸಂಜೆ  ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದರಲ್ಲಿ  ಮುಂದಿನ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ್ ಆಯ್ಕೆಗೊಳ್ಳು ವುದು ನಿಚ್ಚಳವಾಗಿದೆ. ಸಭೆಯಲ್ಲಿ ಸಿದ್ಧರಾಮಯ್ಯ ಅವರೇ ಮುಂದಿನ ಶಾಸಕಾಂಗ ಪಕ್ಷದ ಸ್ಥಾನಕ್ಕೆ    ಡಿ.ಕೆ. ಶಿವಕುಮಾರ್‌ರ ಹೆಸರನ್ನು ಸೂಚಿಸಲಿ ದ್ದಾರೆ ಎಂದು ತಿಳಿದುಬಂದಿದೆ.

You cannot copy contents of this page