ಜನರಲ್ ಆಸ್ಪತ್ರೆಯಲ್ಲಿ ದಸರಾ ಮಹೋತ್ಸವದಂಗವಾಗಿ ನಾಡಹಬ್ಬ ಆಚರಣೆ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಸಭಾಂಗಣದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಂಡಳಿ ಹಾಗೂ ಕನ್ನಡ ಬಳಗ ಜಂಟಿಯಾಗಿ ನಿನ್ನೆ   ದಸರಾ ಮಹೋತ್ಸವದಂಗವಾಗಿ ನಾಡಹಬ್ಬ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆಸ್ಪತ್ರೆಯ ಮೇಲ್ವಿಚಾರಕ ಡಾ| ಜಿತೇಶ್ ವಿ. ಉದ್ಘಾಟಿಸಿದರು. ಲೇ ಸೆಕ್ರೆಟರಿ ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದರು. ಡಾ| ಜನಾರ್ದನ್ ನಾಯ್ಕ್ ಮುಖ್ಯ ಭಾಷಣ ಮಾಡಿದರು. ವೈದ್ಯಾಧಿಕಾರಿ ಡಾ| ಸಂಧ್ಯಾ, ಸಿಬ್ಬಂದಿ ಮಂಡಳಿಯ ಅಧ್ಯಕ್ಷ ಡಾ| ಅರುಣ್ ರಾಮ್, ಶುಶ್ರೂಷ ವಿಭಾಗದ ಮುಖ್ಯಸ್ಥೆ ನಿರ್ಮಲಾ ಅಗಸ್ಟಿನ್, ಜೆಪಿಎಚ್‌ಎನ್ ತರಬೇತಿ ಶಾಲೆಯ ಪ್ರಾಂಶುಪಾಲೆ ಗೀತ ಮೊದಲಾದವರು ಶುಭ ಹಾರೈಸಿದರು. ಆಸ್ಪತ್ರೆಯ ಮೇಲ್ವಿಚಾರಕ ಡಾ| ಜಿತೇಶ್ ವಿ. ಮತ್ತು ಸಿಬ್ಬಂದಿ ಮಂಡಳಿ ಅಧ್ಯಕ್ಷ ಡಾ| ಅರುಣ್‌ರಾಮ್‌ರನ್ನು ಈ ಸಂದರ್ಭದಲ್ಲಿ ಪೇಟ ತೊಡಿಸಿ ಅಭಿನಂದಿಸಲಾಯಿತು.

ನರ್ಸಿಂಗ್ ಅಸಿಸ್ಟೆಂಟ್ ನಾರಾಯಣ ಬಾರಡ್ಕ ಸ್ವಾಗತಿಸಿ, ಕಿಶೋರ್ ಕುಮಾರ್ ವಂದಿಸಿದರು.  ಆಸ್ಪತ್ರೆಯ ನೌಕರರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಾತ್ರವಲ್ಲ ತುಳುನಾಡಿನ ಸಾಂಪ್ರದಾಯಿಕ ರೀತಿಯ ವಿವಿಧ ಆಹಾರ ಮತ್ತು ಪ್ರಾಚ್ಯ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಯಿತು.

You cannot copy contents of this page