ಬದಿಯಡ್ಕ: ಬಿಜೆಪಿ ಬದಿಯಡ್ಕ ಪಂ. ಸಮಿತಿ ಹಾಗೂ ಆಶ್ರಯ ಆಶ್ರಮ ಕನ್ನೆಪ್ಪಾಡಿ ಇದರ ವತಿಯಿಂದ ಆಸ್ಟರ್ ಮಿಮ್ಸ್ ಆಸ್ಪತ್ರೆ ಕಾಸರಗೋಡು ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ಸೇವಾಸೇತು ಅಭಿಯಾನದಂಗವಾಗಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸ ಲಾಯಿತು. ನಿನ್ನೆ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಜರಗಿದ ಶಿಬಿರವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್. ಉದ್ಘಾಟಿಸಿ ಮಾತನಾಡುತ್ತಾ, ತನ್ನ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಪ್ರಧಾನಿ ಹಾಗೂ ವಿಶ್ವದ ಪ್ರಭಾವಿ ನಾಯಕ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಯನ್ನು ದೇಶದ ಜನರ ಸೇವೆಗಾಗಿ ಮೀಸಲಿಡಬೇಕೆಂಬ ನಿಟ್ಟಿನಲ್ಲಿ ನಾಡಿನಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗುತ್ತದೆ. ದೇಶದ ಪ್ರಜೆಗಳು ಸಂಪೂರ್ಣ ಆರೋಗ್ಯವಂತರಾ ಗಬೇಕು ಎಂಬುದೇ ಪ್ರಧಾನಿಯವರ ಆಶಯವಾಗಿದೆ. ಕಾಂಗ್ರೆಸ್ ಪಕ್ಷ ಭಾರತದಲ್ಲಿ ಆಡಳಿತ ನಡೆಸಿ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದ ಭಾರತವನ್ನು ದಾರಿದ್ರö್ಯಕ್ಕೆ ತಳ್ಳಿದೆ. ಆದರೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಬಲಿಷ್ಠವಾಗುವತ್ತ ಸಾಗುತ್ತಿದೆ ಎಂದರು.
ಬಿಜೆಪಿ ಬದಿಯಡ್ಕ ಪಂ.ಸಮಿತಿ ಪಶ್ಚಿಮ ವಲಯ ಅಧ್ಯಕ್ಷ ಮಹೇಶ್ ವಳಕ್ಕುಂಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂ.ಅಧ್ಯಕ್ಷ ಡಿ. ಶಂಕರ, ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಆಶ್ರಯ ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಬಿಜೆಪಿ ಕಾಸರಗೋಡು ಸೆಲ್ ಕೋ-ಓರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ, ಡಾ| ಅರವಿಂದ, ಬಿಜೆಪಿ ಬದಿಯಡ್ಕ ಪೂರ್ವ ವಲಯ ಅಧ್ಯಕ್ಷ ಉದನೇಶ್ವರ ಬದಿಯಡ್ಕ ಶುಭಹಾರೈಸಿದರು. ಬಿಜೆಪಿ ಬದಿಯಡ್ಕ ಮಂಡಲ ಜಾಲತಾಣ ವಿಭಾಗದ ಪ್ರಶಾಂತ್ ಶೆಟ್ಟಿ ಬೇಳ ಸ್ವಾಗತಿಸಿ, ಬದಿಯಡ್ಕ ಪಂ. ಸದಸ್ಯ ಶ್ಯಾಮಪ್ರಸಾದ ಸರಳಿ ವಂದಿಸಿದರು. ಸ್ಥಾಯಿಸಮಿತಿ ಅಧ್ಯಕ್ಷರಾದ ರಜನಿ ಸಂದೀಪ್, ಅವಿನಾಶ್ ರೈ, ಸದಸ್ಯ ಹರೀಶ ಎ., ಸಿಡಿಎಸ್ ಅಧ್ಯಕ್ಷೆ ಸುಲೋಚನ, ಜಿಲ್ಲಾ ಪಂ. ಸದಸ್ಯ ರಾಮಪ್ಪ ಮಂಜೇಶ್ವರ, ಬಿಜೆಪಿ ಬದಿಯಡ್ಕ ಮಂಡಲಾಧ್ಯಕ್ಷ ಗೋಪಾಲ ಕೃಷ್ಣ ಮುಂಡೋಳುಮೂಲೆ, ಶರತ್ ಕುಮಾರ್ ಶೆಟ್ಟಿ, ಗಂಗಾಧರ ಪಳ್ಳತ್ತಡ್ಕ, ನಾರಾಯಣ ಪಂಜಿತ್ತಡ್ಕ ಪಾಲ್ಗೊಂಡರು.






