ರೈತಸಂಘದಿಂದ ಮೀಯಪದವಿನಲ್ಲಿ ಪ್ರತಿಭಟನೆ

ಉಪ್ಪಳ: ಕೇಂದ್ರ ಸರಕಾರದ ರೈತ ವಿರೊಧಿ ನೀತಿಗೆದುರಾಗಿ ಹಾಗೂ ರಸಗೊಬ್ಬರದ ಬೆಲೆಯೇರಿಕೆಗೆದುರಾಗಿ, ಅಮೇರಿಕಾದೊಂದಿಗೆ ಮಾಡಿದ ಜನವಿರೋಧಿ ಒಪ್ಪಂದಕ್ಕೆದುರಾಗಿ ರೈತ ಸಂಘದ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ರಾಜ್ಯ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಉದ್ಘಾಟಿಸಿದರು. ಏರಿಯಾ ಸಮಿತಿ ಅಧ್ಯಕ್ಷ ಬಿ.ಎಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು. ಹುಸೈನ್ ಮಾಸ್ತರ್, ಪ್ರಭಾಕರ ಶೆಟ್ಟಿ, ಸದಾನಂದ ಕೋರಿಕ್ಕಾರ್, ಚಂದ್ರಾವತಿ ಕುಳೂರು, ಲೋಕೇಶ, ಉಮೇಶ್ ಶೆಟ್ಟಿ, ನೇತೃತ್ವ ನೀಡಿದರು.

RELATED NEWS

You cannot copy contents of this page