ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಖಾಸಗಿ ಬಸ್ ಮಾಲಕರ ಸಭೆ ಇಂದು

ತೃಶೂರು: ಕೆಎಸ್‌ಆರ್‌ಟಿಸಿ ಆರ್ಡಿನರಿ ಬಸ್‌ಗಳಲ್ಲಿ ಮಹಿಳೆ ಯರಿಗೆ ಉಚಿತ ಪ್ರಯಾಣ ಮಂಜೂರು ಮಾಡಿದ ಸರಕಾರದ ನಿರ್ಧಾರದ ವಿರುದ್ಧ ಖಾಸಗಿ ಬಸ್ ಮಾಲಕರ ರಾಜ್ಯ ಮಟ್ಟದ ಸಭೆ ಇಂದು ತೃಶೂರ್‌ನಲ್ಲಿ ನಡೆಯಲಿದೆ. ಉಚಿತ ಪ್ರಯಾಣ ಆರಂಭಿಸು ವುದರೊಂದಿಗೆ ಖಾಸಗಿ ಬಸ್ ಮಾಲಕರು ಭಾರೀ ಸಂದಿಗ್ಧತೆ ಯಲ್ಲಿದ್ದಾರೆ. ನಿನ್ನೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಕಡಿಮೆಯಾಗಿರುವುದಾಗಿ ಹೇಳಲಾಗುತ್ತಿದೆ.

ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಪ್ರಯಾಣಿಸುತ್ತಿರುವುದು ಖಾಸಗಿ ಬಸ್ ವಲಯಕ್ಕೆ ಭಾರೀ ಹೊಡೆತ ನೀಡಿದೆ ಎಂದು ಮಾಲಕರು ತಿಳಿಸುತ್ತಿದ್ದಾರೆ. ಇಂದು ನಡೆಯುವ ಸಭೆಯ ಬಳಿಕ ಮುಖ್ಯಮಂತ್ರಿ ವಿ.ಡಿ. ಸತೀಶನ್‌ರನ್ನು ನೇರವಾಗಿ ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಸಲ್ಲಿಸಲಾಗುವುದೆಂದು ಬಸ್ ಮಾಲಕರ ಸಂಘಟನೆ ತಿಳಿಸಿದೆ.

ಖಾಸಗಿ ಬಸ್ ವಲಯವನ್ನು ಸಂರಕ್ಷಿಸುವ ರೀತಿಯ ನಿಲುವುಗಳು ಸರಕಾರದ ಭಾಗದಿಂದ ಉಂಟಾಗದಿದ್ದಲ್ಲಿ ಮುಷ್ಕರ ಸಹಿತ ತೀವ್ರ ಪ್ರತಿ ಭಟನೆ ನಡೆಸಬೇಕಾಗಿ ಬರಲಿದೆ ಎಂದು ಬಸ್ ಮಾಲಕರು ತಿಳಿಸಿದ್ದಾರೆ.

RELATED NEWS

You cannot copy contents of this page