ತಿರುವನಂತಪುರ ಕಾರ್ಪೋರೇಶನ್‌ನ 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧುಗೊಳಿಸಿದ ಹೈಕೋರ್ಟ್

ತಿರುವನಂತಪುರ: ತಿರುವನಂತಪುರ ಕಾರ್ಪೋರೇಶನ್‌ನಲ್ಲಿ ಕೇರಳದ ಇತಿಹಾಸದಲ್ಲೇ ಪ್ರಥಮವಾಗಿ ಅಧಿಕಾರಕ್ಕೇರಿದ ಬಿಜೆಪಿ ನೇತೃತ್ವದ ಆಡಳಿತ ಸಮಿತಿ  ಕೌನ್ಸಿಲರ್‌ಗಳ ಪೈಕಿ  ಬಲಿದಾನಿಗಳ ಹಾಗೂ ದೇವರುಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ 20 ಕೌನ್ಸಿಲರ್‌ಗಳ ಪ್ರಮಾಣವಚನ ವನ್ನು ಹೈಕೋರ್ಟ್ ಅಸಿಂಧುಗೊಳಿಸಿ ಇಂದು ತೀರ್ಪು ನೀಡಿದೆ. ಅಲ್ಲದ  ಈ 20 ಸದಸ್ಯರು ಮುಂದಿನ 4 ವಾರದೊಳಗಾಗಿ  ಮರು ಪ್ರಮಾಣವಚನ ಸ್ವೀಕರಿಸಬೇಕೆಂದು ಹೈಕೋರ್ಟ್ ನಿರ್ದೇಶ ನೀಡಿದೆ.  ಬಿಜೆಪಿಯ 20 ಕೌನ್ಸಿಲರ್‌ಗಳು ಬಲಿದಾನಿಗಳ ಹಾಗೂ  ವಿವಿಧ ದೇವರುಗಳ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಸ್ಥಾನ ವಹಿಸಿಕೊಂಡಿದ್ದರು.  ಪ್ರಮಾಣವಚನ ಸ್ವೀಕರಿಸಿದ ಕ್ರಮ ಸಂವಿಧಾನ ಕ್ರಮಗಳ ಉಲ್ಲಂಘನೆಯಾಗಿದೆಯೆಂದೂ ಆದ್ದರಿಂದ ಅಂತಹ ಸದಸ್ಯರ ಸದಸ್ಯತನವನ್ನು ಅಸಿಂಧುಗೊಳಿಸ ಬೇಕೆಂದು ಸಿಪಿಎಂ ಕೌನ್ಸಿಲರ್ ಹಾಗೂ ಎಡರಂಗದ ನೇತಾರನಾಗಿರುವ ಎಸ್.ಪಿ. ದೀಪಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್  ಈ 20 ಸದಸ್ಯರ ಪ್ರಮಾಣವಚನ ಕ್ರಮವನ್ನು ಅಸಿಂಧುಗೊಳಿಸಿದೆ. 

RELATED NEWS

You cannot copy contents of this page