ಹೋಟೆಲ್ ಮಾಲಕ ಕುಸಿದುಬಿದ್ದು ಮೃತ್ಯು

ಕಾಸರಗೋಡು: ಕಾಸರಗೋಡು ನಗರದ ಎಸ್‌ವಿಟಿ ಕ್ರಾಸ್ ರೋಡ್‌ನಲ್ಲಿ ಗಣೇಶ್ ಕೃಪಾದ  ಮೋಹನ್‌ದಾಸ್ ಕಾಮತ್ (65) ನಿಧನಹೊಂದಿದರು. ಇಂದು ಬೆಳಿಗ್ಗೆ ಮನೆಯಲ್ಲಿ ಕುಸಿದುಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು  ಕಾಸರಗೋಡು ಬೀಚ್ ರೋಡ್‌ನಲ್ಲಿ ಶ್ರೀರಾಂ ಲಂಚ್ ಹೋಂನ ಮಾಲಕರಾಗಿದ್ದಾರೆ. ದಿವಂಗತರಾದ ಅಪ್ರಾಯಿ ಕಾಮತ್-ಶಾಂತಾಬಾಯಿ ದಂಪತಿಯ ಪುತ್ರನಾದ ಮೃತರು  ಪತ್ನಿ ಪದ್ಮಾ ಕಾಮತ್, ಮಕ್ಕಳಾದ ವಿಘ್ನೇಶ್(ಬೆಂಗಳೂರು), ವಿನುತ (ಮಂಗಳೂರು), ಅಳಿಯ ಯೋಗೀಶ್, ಸೊಸೆ ಸ್ವಾತಿ, ಸಹೋದರ-ಸಹೋದರಿಯರಾದ ಚಿತ್ರಾ ಭಂಡಾರಿ,ಶ್ರೀಮತಿ ಶೆಣೈ,ಮಾಲತಿ ಪ್ರಭು, ಗಣೇಶ್ ಕಾಮತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page