ಗೃಹಿಣಿ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಗೃಹಿಣಿ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಾಸರಗೋಡು ತಾಳಿಪಡ್ಪು ಕೊಳ್ಕೆಬೈಲಿನ ಶ್ರುತಿ ನಿವಾಸದ ಕಾಸರಗೋಡು ನಗರಸಭೆಯ ಮಾಜಿ ಕೌನ್ಸಿಲರ್ ಎ. ದುಗ್ಗಪ್ಪ ಪೂಜಾರಿಯವರ ಪತ್ನಿ ವಿಶಾಲಾಕ್ಷಿ ಕೋಟ್ಯಾನ್ (62) ಸಾವನ್ನಪ್ಪಿದ ಮಹಿಳೆ. ಇವರು ನಿನ್ನೆ ಬೆಳಿಗ್ಗೆ ಮನೆ ಪಕ್ಕದ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಬಗ್ಗೆ ನೀಡಲಾದ ಮಾಹಿತಿ ಯಂತೆ  ಕಾಸರಗೋಡು ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು  ಬಾವಿಯಿಂದ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಕಾಸರಗೋಡು ಪೊಲೀಸರು ಆ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.

ದಿವಂಗತರಾದ ನರಸಿಂಹ-ಸುಂದರಿ ದಂಪತಿ ಪುತ್ರಿ ಯಾಗಿರುವ ವಿಶಾಲಾಕ್ಷಿ ಪತಿ, ಮಕ್ಕಳಾದ ಶಿಶಿರ್, ಶ್ರುತಿ, ಕೃತಿ, ಅಳಿಯಂದಿರಾದ ಸುಜಿತ್, ಪ್ರಸನ್ನ, ಸಹೋದರ ಜಯಂತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page