ಹೊಸಂಗಡಿಯಲ್ಲಿ ಕಬಡ್ಡಿ ಪಂದ್ಯಾಟ ನಾಳೆ

ಹೊಸಂಗಡಿ: ಬಂಗ್ರಮಂಜೇಶ್ವರ ಶ್ರೀ ಅಯ್ಯಪ್ಪಕೃಪ ವೀರಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ ನಾಳೆ ಹೊಸಂಗಡಿಯಲ್ಲಿ ಜರಗಲಿದೆ. ಕಾಸರಗೋಡು ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ನಡೆಯುವ ಪಂದ್ಯಾಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 5೦,೦೦೦ ರೂ. ಮತ್ತು ಟ್ರೋಫಿ, ದ್ವಿತೀಯ 3೦,೦೦೦ ರೂ., ಟ್ರೋಫಿ, ತೃತೀಯ ಹಾಗೂ ಚತುರ್ಥ 1೦,೦೦೦ ರೂ. ಮತ್ತು ಟ್ರೋಫಿ ನೀಡಲಾಗುವುದು. ಅಲ್ಲದೆ ಉತ್ತಮ ರಕ್ಷಣೆಗಾರ, ಉತ್ತಮ ಸವ್ಯಸಾಚಿ, ಉತ್ತಮ ಹಿಡಿತಗಾರ ಬಹುಮಾನ ನೀಡಲಾಗುವುದು. ನಾಳೆ ಸಂಜೆ ೪ ಗಂಟೆಗೆ ಪಂದ್ಯಾಟ ಆರಂಭಗೊಳ್ಳಲಿದೆ.

RELATED NEWS

You cannot copy contents of this page