ಕುಂಬಳೆ: ಕುಂಬಳೆ ಪ್ರೆಸ್ ಫೋ ರಂ ನೇತೃತ್ವದಲ್ಲಿ ಓಣಂ ಆಚರಿಸ ಲಾಯಿತು. ಪತ್ರಕರ್ತರು ಮತ್ತು ಕುಟುಂಬ ಸದಸ್ಯರಿಗೆ ವಿವಿಧ ಸ್ಪರ್ಧೆ ಗಳು ಮತ್ತು ಓಣಂ ಔತಣ ಏರ್ಪಡಿಸಲಾಗಿತ್ತು.
ಸದಸ್ಯರ ಕುಟುಂಬಗಳ ಮಕ್ಕಳಿಗೆ ಸಂಗೀತ ಕುರ್ಚಿ, ಬಲೂನ್ ಪಾಪಿಂಗ್ ಮತ್ತು ಓಣಂ ಹಾಡಿನಂ ತಹ ಸ್ಪರ್ಧೆಗಳನ್ನು ಆಯೋಜಿಸಲಾ ಗಿತ್ತು. ಪ್ರೆಸ್ ಫೋರಂ ಸದಸ್ಯರಿಗೆ ಓಣಂ ಬಟ್ಟೆಯನ್ನು ಉದ್ಯಮಿ ಅಶ್ರಫ್ ಸ್ಕೈಲರ್ ವಿತರಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಉದ್ಘಾಟಿಸಿದರು. ಪ್ರೆಸ್ ಫೋರಂ ಅಧ್ಯಕ್ಷ ಅಬ್ದುಲ್ಲಾ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ನ ಮಾಜಿ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸುಫ್ ಮುಖ್ಯ ಅತಿಥಿಯಾಗಿದ್ದರು.
ಪ್ರೆಸ್ ಫೋರಂ ಕಾರ್ಯದರ್ಶಿ ಐ. ಮುಹಮ್ಮದ್ ರಫೀಕ್ ಸ್ವಾಗತಿಸಿ ದರು. ಉಪಾಧ್ಯಕ್ಷ ಪುರುಷೋತ್ತಮ ಭಟ್, ಸದಸ್ಯರಾದ ಅಬ್ದುಲ್ ಲತೀಫ್ ಉಳುವಾರ್, ರಶೀದ್ ಬಂದ್ಯೋಡ್, ಕೆ.ಎಂ. ಸತ್ತಾರ್, ಧನರಾಜ್ ಉಪ್ಪಳ, ತಾಹಿರ್ ಉಪ್ಪಳ, ಸುಬೈರ್ ಕುಕ್ಕಾರ್, ಝೈನುದ್ದೀನ್ ಅಡ್ಕ, ಕೋಶಾಧಿಕಾರಿ ಅಬ್ದುಲ್ ಲತೀಫ್ ಕುಂಬಳ ಮಾತನಾಡಿದರು.







