ಮೊಗ್ರಾಲ್: ಹಿರಿಯ ಕೊಲ್ಲಿ ಉದ್ಯೋಗಿ, ಕಡಪ್ಪುರ ಕಿಳರ್ಮಸ್ಜಿದ್ ಸಮಿತಿ ಉಪಾಧ್ಯಕ್ಷರಾಗಿದ್ದ ಮೊಗ್ರಾಲ್ ನಾಂಗಿ ಕಡಪ್ಪುರ ನಿವಾಸಿ ಎಂ.ಎ. ಅಬ್ದುಲ್ಲ (75) ನಿಧನ ಹೊಂದಿದರು.
ಮೃತರು ಪತ್ನಿ ನಫೀಸ ಪಳ್ಳಿಕ್ಕೆರೆ, ಪುತ್ರಿ ಕುಂಞಿಬಿ, ಅಳಿಯ ಹಮೀದ್ ಮೊಗ್ರಾಲ್ಪುತ್ತೂರು, ಸೊಸೆ ಶಹನಾಸ್ ಮಂಜೇಶ್ವರ, ಸಹೋದರರಾದ ಎಂ.ಎ ಕುಂಞಂಹಮ್ಮದ್, ಎಂ.ಎ. ಇಬ್ರಾಹಿಂ, ಎಂ.ಎ. ಮೂಸ, ಸಹೋದರಿ ಬೀಫಾತಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಮುಜೀಬ್ ರಹ್ಮಾನ್ ಈ ಹಿಂದೆ ನಿಧನ ಹೊಂದಿದ್ದಾರೆ.





