ಮಹಿಳೆಯನ್ನು ಲಾಡ್ಜ್‌ಗೆ ಕರೆದೊಯ್ದು ಕಿರುಕುಳ ನೀಡಿದ ವ್ಯಕ್ತಿ ಸೆರೆ

ಕಾಸರಗೋಡು: ಮ್ಯಾಟ್ರಿಮೋನಿ ಮೂಲಕ ಮಹಿಳೆಯನ್ನು ಪರಿಚಯಗೊಂಡು ಬಳಿಕ ಅವರನ್ನು ಮದುವೆಯಾಗುವುದಾಗಿ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋ ಪದಂತೆ  ಕಾಸರ ಗೋಡು ನಿವಾಸಿ ಯೋರ್ವನನ್ನು ಕೊಚ್ಚಿಯಲ್ಲಿ  ಸೆರೆಹಿಡಿಯಲಾಗಿದೆ. ಕಾಸರಗೋಡು ನೆಡುಂಕನಾಲ್ ಮಲಾಂಕಾವು ನಿವಾಸಿ ಸಂತೋಷ್ ಜೋಸ್ (58) ಎಂ ಬಾತನನ್ನು ಎರ್ನಾಕುಳಂ ನೋರ್ತ್‌ನ ಪೊಲೀ ಸರು ಬಂಧಿಸಿದ್ದಾರೆ.  ಆಲಪ್ಪುಳ ನಿವಾಸಿಯಾದ ೫೯ರ ಹರೆಯದ ಮಹಿಳೆ ನೀಡಿದ ದೂರಿನಂತೆ ಸಂತೋಷ್ ಜೋಸ್‌ನನ್ನು ಸೆರೆಹಿಡಿಯಲಾಗಿದೆ.

ಮಹಿಳೆಯನ್ನು ಮ್ಯಾಟ್ರಿಮೋನಿ ಮೂಲಕ ಈತ ಪರಿಚಯಗೊಂಡಿದ್ದನೆನ್ನಲಾಗಿದೆ.  ಬಳಿಕ ಆಕೆಯನ್ನು ಕೊಚ್ಚಿ ನಗರದ ಲಾಡ್ಜ್‌ವೊಂದಕ್ಕೆ ಕರೆದೊಯ್ದು ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಇದರಂತೆ ಕೊಚ್ಚಿ ನೋರ್ತ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅನೂಪ್ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಇದೇ ರೀತಿಯ ಹಲವು ದೂರುಗಳ ಪ್ರಕಾರ ಕೇಸು ದಾಖಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page