ಕೊಲ್ಲಿಯಿಂದ ಕೊಟ್ಟು ಕಳುಹಿಸಿದ 2೦೦ ಗ್ರಾಂ ಚಿನ್ನ ಲಪಟಾಯಿಸಿ ಸುಳ್ಳುಕತೆ ಹೆಣೆದ ವ್ಯಕ್ತಿ ಸೆರೆ

ಕಣ್ಣೂರು: ಕೊಲ್ಲಿಯಿಂದ ಗೆಳೆಯ ಕೊಟ್ಟು ಕಳುಹಿಸಿದ 2೦೦ ಗ್ರಾಂ ಚಿನ್ನಾಭರಣ ಹಾಗೂ ಎರಡು ಲ್ಯಾಪ್‌ಟಾಪ್‌ಗಳನ್ನು ಲಪಟಾಯಿಸಿದ ವ್ಯಕ್ತಿ ಸೆರೆಯಾಗಿದ್ದಾನೆ. ಮುಳಕುನ್ನ್, ಪಾರಕಂಡಂ ಪುದಿಯವೀಟಿಲ್ ಕೆ.ಪಿ. ರಹೀಂ (34)ನನ್ನು ಬೆಂಗಳೂರು ಪೊಲೀಸರು ಕಣ್ಣೂರಿಗೆ ತಲುಪಿಸಿ ಸೆರೆಹಿಡಿದಿದ್ದಾರೆ.ಈ ಘಟನೆ ಬಗ್ಗೆ ಪೊಲೀಸರು ಈ ರೀತಿ ತಿಳಿಸುತ್ತಾರೆ: ಕೊಲ್ಲಿಯಿಂದ ಊರಿಗೆ ಆಗಮಿಸುತ್ತಿದ್ದ ರಹೀಂನ ಕೈಯಲ್ಲಿ  ಮನೆಗೆ ನೀಡಲೆಂದು ತಿಳಿಸಿ ಗೆಳೆಯ ಶಮೀಂ ಚಿನ್ನ ಹಾಗೂ ಲ್ಯಾಪ್ ಟಾಪ್ ನೀಡಿದ್ದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಪೊಲೀಸರು ಅದನ್ನು ವಶಪಡಿಸಿದ ರೆಂದು ರಹೀಂ ಹಾಗೂ ಇನ್ನೋರ್ವ ಗೆಳೆಯ ಸೇರಿ ಸುಳ್ಳು ಕತೆ ಹೆಣೆದರು. ಶಂಕೆ ತೋರಿ ಶಮೀಂ ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದು, ನಾವು ವಶಪಡಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಶಮೀಂ ಬೆಂ ಗಳೂರು ಪೊಲೀಸರಿಗೆ ದೂರು ನೀಡಿ ದ್ದಾರೆ. ಈ ಮಧೆ ಶಮೀಂ ಊರಿಗೆ ಬಂದರು. ಗುರುವಾರ ರಾತ್ರಿ ಕಣ್ಣೂರು ರೈಲು ನಿಲ್ದಾಣ ಬಳಿ ಇವರು ರಹೀಂನನ್ನು ಭೇಟಿಯಾದರು. ಇವರಿಬ್ಬರ ಮಧ್ಯೆ ವಾಗ್ವಾದ ಉಂಟಾಯಿತು. ಈ ಮಧ್ಯೆ ಮಾಹಿತಿ ತಿಳಿದು  ಟೌನ್ ಸಿ.ಐ ಮಹೇಶ್ ಕಂಡಂ ಬೇತ್ ಸ್ಥಳಕ್ಕೆ ತಲುಪಿ ಇಬ್ಬರನ್ನು ಕಸ್ಟಡಿಗೆ ತೆಗೆದರು. ಶಮೀಂ ಈ ಬಗ್ಗೆ ಪೊಲೀಸರಲ್ಲಿ ವಿವರಿಸಿದರು. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ತಲುಪಿ ರಹೀಂನನ್ನು ಸೆರೆಹಿಡಿದಿದ್ದಾರೆ.

RELATED NEWS

You cannot copy contents of this page