ಪತ್ನಿ, ಮಗುವಿನ ಮೇಲೆ ಹಲ್ಲೆ: ವ್ಯಕ್ತಿವಿರುದ್ಧ ನರಹತ್ಯಾ ಪ್ರಕರಣ ದಾಖಲು

ಕುಂಬಳೆ: ಪತ್ನಿ ಮತ್ತು ಪುತ್ರಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ದೂರಿನಂತೆ  ಪತಿ ವಿರುದ್ಧ  ಕುಂಬಳೆ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂಬಳೆ ಸಮೀಪದ ಎಡನಾಡು ಪೆರ್ಣೆ ಸೌಪರ್ಣಿಕಾ ನಿಲಯದ ಆಶಾ ಕುಮಾರಿ ಕೆ.ಎಸ್ (39), ಮಗಳು ನಕ್ಷಿತಾ (8) ಎಂಬಿವರ ಮೇಲೆ ಹಲ್ಲೆ  ನಡೆಸಿ ಗಾಯಗೊಳಿಸಿದ ದೂರಿನಂತೆ  ಆಶಾ ಕುಮಾರಿಯ ಪತಿ ಕಣ್ಣೂರು ಚೆರುತ್ತಾಳಂ ಕಡನ್ನಪ್ಪಳ್ಳಿ ವಲಿಯಾಂಕೋಡ್ ಕುಲಾಪುರಂ ಕೂಲಿಯಾಡನ್ ವೀಟಿಲ್ ಸುರೇಶ್ (44) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಈ ತಿಂಗಳ 12ರಂದು ಸಂಜೆ ಮನೆಯಲ್ಲಿ ಸಂಬಂಧಿಕರೋರ್ವ  ಮನೆಗೆ ಬರುತ್ತಿರುವುದನ್ನು ಪ್ರಶ್ನಿಸಿ ಆರೋಪಿ  ತನ್ನ ಮೇಲೆ ಹಲ್ಲೆ ನಡೆಸಿ, ಸ್ಟೇರ್ ಕೇಸ್‌ಗೆ ತಲೆ ಬಡಿದು, ಕತ್ತಿಯಿಂದ ಬೀಸಿದನೆಂದೂ ಮಾತ್ರವಲ್ಲ   ಪುತ್ರಿಯ ಮೇಲೆಯೂ ಹಲ್ಲೆ ನಡೆಸಿ ಹೊರಗೆ ದೂಡಿ ಹಾಕಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಶಾ ಕುಮಾರಿ ಆರೋಪಿಸಿದ್ದಾರೆ.

You cannot copy contents of this page