ಜ್ಯೋತಿಷ್ಯಾಲಯದಲ್ಲಿ ಗಾಂಜಾ ಪತ್ತೆ: ಜ್ಯೋತಿಷಿ ಬಂಧನ

ಹೊಸದುರ್ಗ: ಜ್ಯೋತಿಷ್ಯಾಲ ಯದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಪತ್ತೆಯಾಗಿದೆ. ಪಯ್ಯನ್ನೂರು ಬಸ್ ನಿಲ್ದಾಣ ಸಮೀಪ ಕಾರ್ಯಾಚರಿ ಸುವ ಜ್ಯೋತಿಷ್ಯಾಲಯದಿಂದ  ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೇಸು ದಾಖಲಿಸಿಕೊಂಡ ಪಯ್ಯನ್ನೂರು ಪೊಲೀಸರು ಜ್ಯೋತಿಷ್ಯಾಲಯ ನಡೆಸುತ್ತಿದ್ದ ಜ್ಯೋತಿಷಿ ಕಾಂಕೋಲ್ ವಡಶ್ಶೇರಿಯ ಪಿ. ಶ್ರೀನಾಥ್ (41)ನನ್ನು ಬಂಧಿಸಿದ್ದಾರೆ. ಆಪರೇಶನ್ ತೂಫಾನ್‌ನ ಅಂಗವಾಗಿ ನಿನ್ನೆ ಸಂಜೆ ಎಸ್‌ಐ ಪಿ.ವಿ. ಅನುಶ್ರೀ ನೇತೃತ್ವದಲ್ಲಿ ಡಾನ್ಸಾಪ್ ತಂಡ ಜ್ಯೋತಿಷ್ಯಾಲ ಯದಲ್ಲಿ ತಪಾಸಣೆ ನಡೆಸುವ ವೇಳೆ ಗಾಂಜಾ ಪತ್ತೆಯಾಗಿದೆ.

ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿಗೆ ದಾಳಿ ನಡೆಸಿದ್ದಾರೆ. ಕಟ್ಟಡದ ಕೆಳ ಅಂತಸ್ತಿನಲ್ಲಿರುವ ಕೊಠಡಿಯ ಕಪಾಟಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟ 5.77  ಗ್ರಾಂ ಗಾಂಜಾವನ್ನು ವಶಪಡಿಸಲಾಗಿದೆ. ಪೊಲೀಸ್ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಅಬ್ದುಲ್ ಜಬ್ಬಾರ್, ಡಾನ್ಸಾಪ್ ಟೀಮ್ ಸದಸ್ಯರಾದ ಬಿನೀಶ್, ಶ್ರೀಜಿತ್, ಸಜಿತ್, ನಿಶಾಂತ್, ಗಿರೀಶ್ ಎಂಬಿವರಿದ್ದರು.

RELATED NEWS

You cannot copy contents of this page