ಕೋಟ್ಯಂತರ ರೂ. ಮೌಲ್ಯದ 2 ಕಿಲೋ ಎಂಡಿಎಂಎ ವಶ: ಬಂದ್ಯೋಡು ನಿವಾಸಿ ಸಹಿತ ಮೂವರ ಬಂಧನ: ಕಾರು, ಆಟೋ ರಿಕ್ಷಾ ಕಸ್ಟಡಿಗೆ

ಕುಂಬಳೆ: ಪಂಜಾಬ್‌ನಿಂದ ಕೊರಿಯರ್ ಮುಖಾಂತರ  ತಲುಪಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ಎರಡು ಕಿಲೋ ಎಂಡಿಎಂಎ ಸಹಿತ ಮೂರು ಮಂದಿ ಸೆರೆಗೀಡಾಗಿದ್ದಾರೆ. ಬಂದ್ಯೋಡಿನ ಅಫೀಲ್, ಮಂಗಳೂರು ನಿವಾಸಿಗಳಾದ ಸಿಯಾವುಲ್ಲ, ಅಲ್ತಾಫ್ ಎಂಬಿವರು ಸೆರೆಗೀಡಾದವರಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ನೇತೃತ್ವದ ನಾರ್ಕೋಟಿಕ್ ಸೆಲ್ ಡಾನ್ಸಾಪ್ ಟೀಂಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಮಂಗಳೂರು ಪೊಲೀ ಸರು ನಡೆಸಿದ ಕಾರ್ಯಾಚರಣೆಯಲ್ಲಿ  ಮಾದಕವಸ್ತು ಸಹಿತ ಮೂವರನ್ನು ಸೆರೆಹಿಡಿಯಾಗಿದೆ.  ಇತ್ತೀಚೆಗೆ ಎಂಡಿಎಂಎ ಸಹಿತ ಸೆರೆಗೀಡಾದ ಓರ್ವನಿಂದ ಲಭಿಸಿದ ಮಾಹಿತಿಯ ಪ್ರಕಾರ  ಈ ಮಾದಕವಸ್ತು ಬೇಟೆ ನಡೆಸಲಾಗಿದೆ. ಪಂಜಾಬ್‌ನಿಂದ ಮಂಗಳೂರಿಗೆ ಕೊರಿಯರ್ ನಲ್ಲಿ ಭಾರೀ ಪ್ರಮಾಣದ ಮಾದಕವಸ್ತು  ಕಳುಹಿಸಲಾಗಿದೆಯೆಂದು  ಮಾಹಿತಿ ಲಭಿಸಿತ್ತು.  ಮಾದಕವಸ್ತು ಮಂಗಳೂರಿನ ಕೊರಿಯರ್ ಸಂಸ್ಥೆಯೊಂದಕ್ಕೆ ತಲುಪಿದೆಯೆಂದು ಖಚಿತಪಡಿಸಿದ ಬಳಿಕ ಆ ಮಾಹಿತಿಯನ್ನು ಮಂಗಳೂರು ಪೊಲೀಸರಿಗೆ ನೀಡಲಾಗಿತ್ತು.  ಕೊರಿಯರ್ ಸಂಸ್ಥೆಯಿಂದ ಮಾದಕವಸ್ತು ಪಡೆದ ಬಳಿಕ ಅದನ್ನು ಕಾಸರಗೋಡಿಗೆ ಸಾಗಿಸಲು  ಆರೋಪಿಗಳು ನಿರ್ಧರಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.  ಇದನ್ನು ಕಾರು ಹಾಗೂ ಆಟೋ ರಿಕ್ಷಾದಲ್ಲಿ  ಸಾಗಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ.

RELATED NEWS

You cannot copy contents of this page